ಟಾಟಾ ಜೊತೆಗಿನ ಸ್ಪರ್ಧೆಯ ಕುರಿತು ಟ್ರೋಲ್‌, ಆನಂದ್‌ ಮಹೀಂದ್ರಾ ನೀಡಿದ್ರು ಅದ್ಭುತ ಉತ್ತರ..!

By Santosh Naik  |  First Published Mar 15, 2024, 5:47 PM IST

ಸೋಶಿಯಲ್‌ ಮೀಡಿಯಾ ಅದರಲ್ಲೂ ಎಕ್ಸ್‌ನಲ್ಲಿ ಸಖತ್‌ ಆಕ್ಟೀವ್‌ ಆಗಿರುವ ಆನಂದ್‌ ಮಹೀಂದ್ರಾ, ಪ್ರತಿದಿನ ಒಂದಲ್ಲಾ ಒಂದು ವಿಚಾರವನ್ನು ಪೋಸ್ಟ್‌ ಮಾಡುತ್ತಾರೆ. ಅದರೊಂದಿಗೆ ಅವರು ಸಾಮಾನ್ಯ ಜನರೊಂದಿಗೂ ಅವರ ಪ್ರಶ್ನೆಗಳಿಗೂ ಎಕ್ಸ್‌ನಲ್ಲಿಯೇ ಉತ್ತರ ನೀಡುತ್ತಾರೆ.


ನವದೆಹಲಿ (ಮಾ.15): ಸೋಶಿಯಲ್‌ ಮೀಡಿಯಾದಲ್ಲಿ ಸಾಮಾನ್ಯ ಜನರಿಂದಲೂ ಮೆಚ್ಚುಗೆ ಪಡೆದಂಥ ಉದ್ಯಮಿಗಳಿದ್ದರೆ ಅದರಲ್ಲಿ ಆನಂದ್‌ ಮಹೀಂದ್ರಾ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ.  ಬಿಲಿಯನೇರ್ ಉದ್ಯಮಿ ಮೈಕ್ರೋ ಬ್ಲಾಗಿಂಗ್ ಟ್ವಿಟರ್ ಪ್ಲಾಟ್‌ಫಾರ್ಮ್‌ನಲ್ಲಿ ಸಾಕಷ್ಟು ಸಕ್ರಿಯರು. ತಮ್ಮ ಫಾಲೋವರ್‌ಗಳೊಂದಿಗೆ ಎಂಗೇಜ್‌ಮೆಂಟ್‌ನಲ್ಲಿರುವ ಅವರು ವಿಶೇಷವಾದ ಟ್ವೀಟ್‌ಗಳು ಮಾಹಿತಿಗಳನ್ನು ಅವರು ಪೋಸ್ಟ್‌ ಮಾಡುತ್ತಲೇ ಇರುತ್ತಾರೆ. ಕೆಲವೊಮ್ಮೆ ತಮ್ಮ ಫಾಲೋವರ್ಸ್‌ಗಳ ಪ್ರಶ್ನೆಗೂ ಅಲ್ಲಿಯೇ ಉತ್ತರ ನೀಡುವ ಮೂಲಕ ಸ್ಪಂದನೆ ತೋರುತ್ತಾರೆ. ಪ್ರತಿ ಸೋಮವಾರದ ಮಂಡೇ ಮೋಟಿವೇಷನ್‌ನಿಂದ ಹಿಡಿದು, ಪ್ರತಿ ವಿಚಾರಗಳಿಗೆ ತಮ್ಮ ಅಭಿಪ್ರಾಯ ಹೇಳುವ ಕಾರಣಕ್ಕೆ ಆನಂದ್‌ ಮಹೀಂದ್ರಾ ಫೇಮಸ್‌ ಆಗಿದ್ದಾರೆ. ಅವರ ಫಾಲೋವರ್ಸ್‌ಗಳು ಕೂಡ ಇದೇ ಕಾರಣಕ್ಕಾಗಿ ಅವರನ್ನು ಮೆಚ್ಚುತ್ತಾರೆ. ಹಾಗೇನಾದರೂ ತಮ್ಮ ವಿರುದ್ಧವಾಗಿ ಅಥವಾ ತಮ್ಮ ಕಾಲನ್ನೇ ಎಳೆಯುವಂಥ ಟ್ವೀಟ್‌ಗಳು ಬಂದಾಗ ಅದಕ್ಕೆ ಅದರದೇ ರೀತಿಯಲ್ಲಿ ಅವರು ಉತ್ತರ ನೀಡುತ್ತಾರೆ.

ತಮ್ಮ ಕ್ಲಾಸ್‌ ಉತ್ತರಗಳಿಂದ ಟೀಕೆ ಮಾಡುವ ವ್ಯಕ್ತಿಗಳನ್ನು ಆನಂದ್‌ ಮಹೀಂದ್ರಾ ಜಾಣ್ಮೆಯಿಂದಲೇ ವಿಚಾರಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಟ್ರೋಲ್‌ ಮಾಡುವವರನ್ನೇ ಆನಂದ್‌ ಮಹೀಂದ್ರಾ ಮನಸೋಇಚ್ಛೆ ಟ್ರೋಲ್‌ ಮಾಡುತ್ತಾರೆ. ಅಂಥಾ ಸಾಕಷ್ಟು ಉದಾಹರಣೆಗಳಿವೆ. ಮಹೀಂದ್ರಾ & ಮಹೀಂದ್ರಾ ಗ್ರೂಪ್‌ನ ಚೇರ್ಮನ್‌ ಸ್ಸಿಯಾಗೋದಕ್ಕೆ, ಕಾರಣ ಅವರು ಫಾಲೋವರ್‌ ಒಬ್ಬರಿಗೆ ನೀಡಿದ ರಿಪ್ಲೈ.  ಅವರು ನೀಡಿದ ರಿಪ್ಲೈಗೆ ಸೋಶಿಯಲ್‌ ಮೀಡಿಯಾ ಫಿದಾ ಆಗಿರುವುದು ಮಾತ್ರವಲ್ಲ, ದೇಶದ ಎಲ್ಲಾ ಕಂಪನಿಯ ಬಾಸ್‌ಗಳು ಕೂಡ ನಿಮ್ಮಂತೆ ಇರಬೇಕು ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ಅವರು ತಮ್ಮ ಅಭಿಮಾನಿಗಳೊಂದಿಗೆ ಟ್ವಿಟರ್‌ನಲ್ಲಿ ಸಂವಹನ ನಡೆಸುತ್ತಾರೆ. ಅಭಿಮಾನಿಗಳು ಕುತೂಹಲಕಾರಿ ಪ್ರಶ್ನೆಯನ್ನು ಕೇಳಿದಾಗ, ಆನಂದ್ ಮಹೀಂದ್ರ ತಮ್ಮದೇ ಶೈಲಿಯಲ್ಲಿ ಉತ್ತರವನ್ನು ನೀಡುತ್ತಾರೆ. ಇದರ ನಡುವೆ ಇತ್ತೀಚೆಗೆ ಮಹೀಂದ್ರಾ & ಮಹೀಂದ್ರಾದ ದೊಡ್ಡ ಪ್ರತಿಸ್ಪರ್ಧಿಯಾಗಿರುವ ಟಾಟಾ ಮೋಟಾರ್ಸ್‌ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ನಾಲ್ಕು ಚಕ್ರದ ವಾಹನಗಳ ಉತ್ಪಾದನೆಯಲ್ಲಿ ಟಾಟಾ ಮೋಟಾರ್ಸ್‌ ದೇಶದ ಅಗ್ರ ಕಂಪನಿಯಾಗಿದ್ದರೆ, ಮಹೀಂದ್ರಾ & ಮಹೀಂದ್ರಾ ಕೂಡ ದೊಡ್ಡ ಮಟ್ಟದ ಪಾಲನ್ನು ಹೊಂದಿದೆ.

ಟ್ವಿಟರ್‌ನಲ್ಲಿ ಒಬ್ಬರು ಕೇಳಿದ ಪ್ರಶ್ನೆಗೆ ಮಹೀಂದ್ರಾ ಉತ್ತರ ನೀಡಿದ್ದರು. ಆ ಟ್ವೀಟ್‌ನಲ್ಲಿ ಲೇಖಕ ಹರೀಂದರ್‌ ಎಸ್‌ ಸಿಕ್ಕಾ ಮಹೀಂದ್ರಾ ಎಕ್ಸ್‌ಯುವಿ 700 ಕಾರ್‌ಅನ್ನು ಶ್ಲಾಘನೆ ಮಾಡಿದ್ದರು. ಮಹೀಂದ್ರಾ ಕಂಪನಿಯ ಹೊಸ ತಲೆಮಾರಿನ ಕಾರು ಇದಾಗಿದೆ. ಈ ಕಾರ್‌ನ ಸೇಫ್ಟಿ ಫೀಚರ್ಸ್‌, ಸ್ಟೇಡಿಂಗ್‌, ಸೀಟ್‌, ಲೆಗ್‌ ಸ್ಪೇಸ್‌, ಗ್ಯಾಜೆಟ್ಸ್‌ ಹಾಗೂ ಸೆನ್ಸಾರ್‌ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದರು.

Tap to resize

Latest Videos

12thFail ಸಿನಿಮಾದ ರಿಯಲ್‌ ಜೋಡಿಯ ಆಟೋಗ್ರಾಫ್‌ ಪಡೆದ ಆನಂದ್‌ ಮಹೀಂದ್ರಾ!

ಈ ಹಂತದಲ್ಲಿ ಒಬ್ಬ ವ್ಯಕ್ತಿ, ಸರ್‌ ಟಾಟಾ ಕಾರ್ಸ್‌ಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದ್ದರು. ಇದಕ್ಕೆ ಆನಂದ್‌ ಮಹೀಂದ್ರಾ ನೀಡಿದ ಉತ್ತರಕ್ಕೆ ಸೋಶಿಯಲ್‌ ಮೀಡಿಯಾ ಅದ್ಭುತ ಎಂದು ಪ್ರತಿಕ್ರಿಯಿಸಿದೆ. 'ಟಾಟಾದಂತ ಬಲಿಷ್ಠ ಪ್ರತಿಸ್ಪರ್ಧಿ ಇರುವುದು ನಾನು ಅದೃಷ್ಟ ಎಂದೇ ಭಾವಿಸುತ್ತೇನೆ.  ಅವರು ತಮ್ಮನ್ನು ತಾವು ಮರುಶೋಧಿಸುತ್ತಲೇ ಇರುತ್ತಾರೆ ಮತ್ತು ಅದು ನಮಗೆ ಇನ್ನೂ ಉತ್ತಮವಾದದನ್ನು ಮಾಡಲು ಪ್ರೇರೇಪಿಸುತ್ತದೆ... ಸ್ಪರ್ಧೆಯು ನಾವೀನ್ಯತೆಯನ್ನು ಉತ್ತೇಜಿಸುತ್ತದೆ' ಎಂದು ಟ್ವೀಟ್‌ ಮಾಡಿದ್ದಾರೆ.

ನದಿ ಸ್ವಚ್ಛಗೊಳಿಸುವ ಈ ಯಂತ್ರ ರೆಡಿ ಮಾಡೋರಿದ್ದೀರಾ: ಇನ್‌ವೆಸ್ಟ್‌ ಮಾಡ್ತಾರಂತೆ ಆನಂದ್ ಮಹೀಂದ್ರಾ

It’s a privilege to have strong competitors like They keep reinventing themselves and that inspires us to do even better… Competition spurs Innovation.. https://t.co/MwpBYsMOWZ

— anand mahindra (@anandmahindra)
click me!