
ನವದೆಹಲಿ (ಡಿ. 28): ಕೆಂಪು ಗ್ರಹ ಮಂಗಳನಲ್ಲಿ ನೀರಿನ ಅಂಶ ಇದೆಯೇ ಎಂದು ಹಲವಾರು ವರ್ಷಗಳಿಂದ ವಿಜ್ಞಾನಿಗಳು ಅಧ್ಯಯನ ನಡೆಸುತ್ತಲೇ ಬಂದಿದ್ದಾರೆ. ಈವರೆಗೆ ಹಲವು ಬಾರಿ ನೀರಿನ ಕುರುಹು ಮಾತ್ರ ಕಂಡುಬಂದಿದೆ. ಆದರೆ ನೀರಿನ ಇರುವಿಕೆಯನ್ನು ಸಾಬೀತುಪಡಿಸುವ ಯಾವುದೇ ಪುರಾವೆ ದೊರೆತಿರಲಿಲ್ಲ. ಇದೀಗ ಆ ಗ್ರಹದಲ್ಲಿ ಸುಮಾರು 82 ಕಿ.ಮೀ ಅಗಲ ಹಾಗೂ 2 ಕಿ.ಮೀ ಆಳದ ಕೆರೆಯೊಂದು ಪತ್ತೆಯಾಗಿದೆ.
ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಮಾರ್ಸ್ ಎಕ್ಸ್‌ಪ್ರೆಸ್ ನೌಕೆ ಈ ಕೆರೆಯ ಚಿತ್ರವನ್ನು ಸೆರೆಹಿಡಿದಿದ್ದು ಸಂಸ್ಥೆಯು ಈ ಚಿತ್ರವನ್ನು ಬಿಡುಗಡೆ ಮಾಡಿದೆ. ಈ ಕೆರೆಗೆ ಕೊರೊಲೆವ್ ಎಂದು ಹೆಸರಿಡಲಾಗಿದೆ. ಕೆರೆಯ ತುಂಬ ಹಿಮಗಡ್ಡೆ ಕಂಡುಬಂದಿದ್ದು, ಈ ಹಿಮಗಡ್ಡೆಯ ಮೇಲಿನ ಪದರವನ್ನು ಕೋಲ್ಡ್ ಟ್ರಾಪ್ ಎಂದು ಕರೆಯಲಾಗಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.