ಚೀನಾದಲ್ಲಿ ವಿಶ್ವದ ಅತೀ ದೊಡ್ಡ ರೆಡಿಯೋ ಟೆಲಿಸ್ಕೋಪ್ ಕಾರ್ಯಾಚರಣೆ ಆರಂಭ!

Suvarna News   | others
Published : Jan 11, 2020, 06:50 PM IST
ಚೀನಾದಲ್ಲಿ ವಿಶ್ವದ ಅತೀ ದೊಡ್ಡ ರೆಡಿಯೋ ಟೆಲಿಸ್ಕೋಪ್ ಕಾರ್ಯಾಚರಣೆ ಆರಂಭ!

ಸಾರಾಂಶ

ವಿಶ್ವದ ಅತಿದೊಡ್ಡ ರೇಡಿಯೊ ಟೆಲಿಸ್ಕೋಪ್‌ ಅನಾವರಣಗೊಳಿಸಿದ ಚೀನಾ| ಚೀನಾದ ನೈರುತ್ಯ ಪ್ರಾಂತ್ಯದ ಪರ್ವತ ಪ್ರದೇಶದಲ್ಲಿ ಟೆಲಿಸ್ಕೋಪ್ ನಿರ್ಮಾಣ| 500 ಮೀಟರ್ ಸುತ್ತಳತೆಯ ಗೋಳಾಕಾರದ ದೂರದರ್ಶಕ ಯಂತ್ರ| 0 ಫುಟ್ಬಾಲ್ ಮೈದಾನಗಳ ಗಾತ್ರ ಹೊಂದಿರುವ ಟೆಲಿಸ್ಕೋಪ್|ಭೂಮಿಯ ಹೊರತು ಜೀವನದ ಹುಡುಕಾಟಕ್ಕೆ ರೆಡಿಯೋ ಟೆಲಿಸ್ಕೋಪ್ ಸಹಾಯ|

ಬೀಜಿಂಗ್(ಜ.11): ವಿಶ್ವದ ಅತಿದೊಡ್ಡ ರೇಡಿಯೊ ಟೆಲಿಸ್ಕೋಪ್‌ನ್ನು ಚೀನಾ ಅನಾವರಣಗೊಳಿಸಿದೆ. ಬಾಹ್ಯಾಕಾಶ ಸಂಶೋಧನೆ ಮತ್ತು ಭೂಮಿಯ ಹೊರತು ಜೀವನದ ಹುಡುಕಾಟಕ್ಕೆ ಈ ರೆಡಿಯೋ ಟೆಲಿಸ್ಕೋಪ್ ಸಹಾಯ ಮಾಡಲಿದೆ ಎಂದು ಚೀನಾ ಹೇಳಿದೆ.

500 ಮೀಟರ್ ಸುತ್ತಳತೆಯ ಗೋಳಾಕಾರದ ದೂರದರ್ಶಕ ಯಂತ್ರ, 30 ಫುಟ್ಬಾಲ್ ಮೈದಾನಗಳ ಗಾತ್ರ ಹೊಂದಿದೆ ಎನ್ನಲಾಗಿದೆ. 

ಚೀನಾದ ನೈರುತ್ಯ ಪ್ರಾಂತ್ಯದ ಪರ್ವತ ಪ್ರದೇಶದಲ್ಲಿ ಈ ಟೆಲಿಸ್ಕೋಪ್‌ನ್ನು ನಿರ್ಮಾಣ ಮಾಡಲಾಗಿದ್ದು, ಇದನ್ನು 'ಸ್ಕೈ ಐ' ಎಂದೂ ಕರೆಯಲಾಗುತ್ತದೆ. 

ಚೀನಾದಲ್ಲಿ ನಿರ್ಮಾಣವಾಗಲಿದೆ ಅತಿ ಎತ್ತರದ ಟೆಲಿಸ್ಕೋಪ್

ರೆಡಿಯೋ ಟೆಲಿಸ್ಕೋಪ್ ಕಾರ್ಯಾಚರಣೆಗೆ ಚೀನಾ ಸರ್ಕಾರ ಅಧಿಕೃತ ಅನುಮೋದನೆ ನೀಡಿದ್ದು, ಇಂದಿನಿಂದಲೇ ಟೆಲಿಸ್ಕೋಪ್ ಕಾರ್ಯಾಚರಣೆ ನಡೆಸಲಿದೆ ಎಂದು ಚೀನಾದ ಸರ್ಕಾರಿ ಮಾಧ್ಯಮ ಸ್ಪಷ್ಟಪಡಿಸಿದೆ.

2016ರಲ್ಲಿ ಪ್ರಾರಂಭಗೊಂಡ ಈ ರೆಡಿಯೋ ಟೆಲಿಸ್ಕೋಪ್ ನಿರ್ಮಾಣ ಕಾರ್ಯ, ನಾಲ್ಕು ವರ್ಷಗಳ ಬಳಿಕ ಕಾರ್ಯಾಚರಣೆಗೆ ಸಿದ್ಧವಾಗಿದೆ. 

ದೂರದರ್ಶಕದ ಪ್ರಯೋಗ ಕಾರ್ಯಾಚರಣೆಗಳು ಇಲ್ಲಿಯವರೆಗೆ ವಿಶ್ವಾಸಾರ್ಹ ಮತ್ತು ಸ್ಥಿರವಾಗಿದ್ದು, ವಿಶ್ವದ ಎರಡನೇ ಅತಿದೊಡ್ಡ ದೂರದರ್ಶಕಕ್ಕಿಂತ 2.5 ಪಟ್ಟು ಹೆಚ್ಚು ಕಾರ್ಯಕ್ಷಮತೆ ಹೊಂದಿದೆ ಎಂದು ಮುಖ್ಯ ಎಂಜಿನಿಯರ್ ಜಿಯಾಂಗ್ ಪೆಂಗ್ ಹೇಳಿದ್ದಾರೆ.

ಮುಂದಿನ ಐದು ವರ್ಷಗಳಲ್ಲಿ ಕಡಿಮೆ-ಆವರ್ತನದ ಗುರುತ್ವ ತರಂಗ ಪತ್ತೆ ಮತ್ತು ಅಂತರತಾರಾ ವಲಯದ ಪ್ರದೇಶಗಳ ಕುರಿತು ಈ ಟೆಲಿಸ್ಕೋಪ್ ಸಂಶೋಧನೆ ನಡೆಸಲಿದೆ.

ಇನ್ನು ಚೀನಾ ತನ್ನದೇ ಆದ ಮಾನವಸಹಿತ ಬಾಹ್ಯಾಕಾಶ ಕೇಂದ್ರದ ನಿರ್ಮಾಣವನ್ನು ಮುಂದಿನ ವರ್ಷ ಪ್ರಾರಂಭಿಸಲು ಸಿದ್ಧತೆ ನಡೆಸಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಬಾಹ್ಯಾಕಾಶದಲ್ಲೂ ಆರೋಗ್ಯ ತುರ್ತುಪರಿಸ್ಥಿತಿ : ತುರ್ತು ಕಾರ್ಯಾಚರಣೆ
ಗ್ರೋಕ್‌ನಲ್ಲಿ ನೈಜ ವ್ಯಕ್ತಿ ಅಶ್ಲೀಲ ಚಿತ್ರ ಸೃಷ್ಟಿ ಅವಕಾಶಕ್ಕೆ ಬ್ರೇಕ್‌