ಚಂದ್ರಯಾನ-2 ಕಳುಹಿಸಿದ ಚಂದ್ರನ ಕುಳಿಯ 3D ಫೋಟೋ| 3D ಫೋಟೋ ಬಿಡುಗಡೆ ಮಾಡಿದ ಇಸ್ರೋ| ಬೃಹತ್ ಕುಳಿ ಸೆರೆಹಿಡಿದ ಟೆರೈನ್ ಮ್ಯಾಪಿಂಗ್ ಕ್ಯಾಮೆರಾ| ಮೇಲ್ಮೈ ರಚನೆಯ ಮ್ಯಾಪಿಂಗ್ ಅಧ್ಯಯನಕ್ಕೆ ಫೋಟೋ ಸಹಾಯಕಾರಿ|
ಬೆಂಗಳೂರು(ನ.15): ಚಂದ್ರಯಾನ-2 ಆರ್ಬಿಟರ್ ಕ್ಲಿಕ್ಕಿಸಿದ ಚಂದ್ರನ ಮೇಲ್ಮೈಯ ಕುಳಿಯೊಂದರ 3D ಫೋಟೋವನ್ನು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬಿಡುಗಡೆ ಮಾಡಿದೆ.
ಚಂದ್ರಯಾನ-2 ನೌಕೆಯಲ್ಲಿರುವ ಟೆರೈನ್ ಮ್ಯಾಪಿಂಗ್ ಕ್ಯಾಮೆರಾ ಈ ಬೃಹತ್ ಕುಳಿಯನ್ನು ಸೆರೆಹಿಡಿದಿದೆ.
undefined
ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಸದೇ ಬಿಡಲ್ಲ: ಇಸ್ರೋ ಅಧ್ಯಕ್ಷರ ಘೋಷಣೆ!
ಡಿಜಿಟಲ್ ಎಲಿವೇಶನ್ ಮಾದರಿಗಳನ್ನು ವಿಶ್ಲೇಷಿಸಿದಾಗ ಚಂದ್ರನ ಮೇಲ್ಮೈ ರಚನೆಯ ಮ್ಯಾಪಿಂಗ್ ಅಧ್ಯಯನಕ್ಕೆ ಈ ಫೋಟೋ ಸಹಾಯಕಾರಿಯಾಗಲಿದೆ ಎನ್ನಲಾಗಿದೆ.
Have a look of 3D view of a crater imaged by TMC-2 of . TMC-2 provides images at 5m spatial resolution & stereo triplets (fore, nadir and aft views) for preparing DEM of the complete lunar surface.
For more details visit https://t.co/urlZqzg3Gw pic.twitter.com/VBvUeH1L8s
ಚಂದ್ರನ ಮೇಲ್ಮೈ ಕ್ರೇಟರ್ಸ್(ಕುಳಿಗಳು)ಗಳಿಂದ ನಿರ್ಮಿತವಾಗಿದ್ದು, ಲಾವಾ ಟ್ಯೂಬ್‌ಗಳು ಈ ಹಿಂದಿನ ಜೀವಂತ ಜ್ವಾಲಾಮುಖಿಗಳಿಗೆ ಉದಾಹರಣೆಯಾಗಿದೆ ಎಂದು ಇಸ್ರೋ ತಿಳಿಸಿದೆ.
ಚಂದಿರ ನೀನದೆಷ್ಟು ಸುಂದರ: ಅರ್ಬಿಟರ್ ಕ್ಲಿಕ್ಕಿಸಿದ ಫೋಟೋಗಳೇ ಆಧಾರ!
ಕುಸಿದ ಲಾವಾ ಟ್ಯೂಬ್‌ಗಳಿಂದ ರೂಪುಗೊಂಡ ಈ ಉಬ್ಬು ಪ್ರದೇಶಗಳು ಭವಿಷ್ಯದ ಮಾನವ ಸಹಿತ ಯೋಜನೆಗಳಿಗೆ ಅನುಕೂಲಕಾರಿ ಎಂದೂ ಇಸ್ರೋ ಅಭಿಪ್ರಾಯಪಟ್ಟಿದೆ.