ಈ ಕಾರುಗಳನ್ನು ಕೊಂಡರೆ ತೆರಿಗೆ ಮರುಪಾವತಿ

First Published May 18, 2018, 4:25 PM IST
Highlights

ಇಂತಹದೊಂದು ಕಾನೂನನ್ನು ಜಾರಿಗೊಳಿಸಲು ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ಜಾರಿಗೊಸಲು ನಿರ್ಧರಿಸಿದೆ. ವಿದ್ಯುತ್ ಚಾಲಿತ ವಾಹನಗಳ ಕಾಯಿದೆಯನ್ನು ಈ ಮೂರು ರಾಜ್ಯಗಳು ಕಾನೂನುಗೊಳಿಸಲಿದೆ.

ನವದೆಹಲಿ(ಮೇ.18): ವಿದ್ಯುತ್ ಚಾಲಿತ ಕಾರುಗಳನ್ನು ಖರೀದಿಸಿದರೆ ರಸ್ತೆ ಹಾಗೂ ನೋಂದಣಿಕರಣ ತೆರಿಗೆಗಳನ್ನು ಮರುಪಾವತಿಸಲಾಗುತ್ತದೆ.
ಇಂತಹದೊಂದು ಕಾನೂನನ್ನು ಜಾರಿಗೊಳಿಸಲು ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ಜಾರಿಗೊಸಲು ನಿರ್ಧರಿಸಿದೆ. ವಿದ್ಯುತ್ ಚಾಲಿತ ವಾಹನಗಳ ಕಾಯಿದೆಯನ್ನು ಈ ಮೂರು ರಾಜ್ಯಗಳು ಕಾನೂನುಗೊಳಿಸಲಿದೆ. ಮುಂದಿನ 5 ವರ್ಷಗಳಲ್ಲಿ 30 ಸಾವಿರ ಕೋಟಿ ರೂ. ವಿದ್ಯುತ್ ಚಾಲಿತ ಕಾರುಗಳ ಉತ್ಪಾದನೆಗೆ ಹೂಡಿಕೆ ಮೂಡುವ ನಿಟ್ಟಿನಲ್ಲಿ ಹಾಗೂ ಗ್ರಾಹಕರನ್ನು ಸೆಳೆಯುವ ಸಲುವಾಗಿ ಈ ಕಾನೂನನ್ನು ಜಾರಿಗೊಳಿಸಲಾಗುತ್ತದೆ.
ಈ ಕಾಯಿದೆಯನ್ವಯ ರಸ್ತೆ ಹಾಗೂ ನೋಂದಣಿಕರಣ ತೆರಿಗೆಯನ್ನು 2024ರವರೆಗೆ ಮರುಪಾವತಿಸಲಾಗುತ್ತದೆ. ಆಂಧ್ರಪ್ರದೇಶದಲ್ಲಿ ವಿನಾಯಿತಿ ಹಾಗೂ ತೆರಿಗೆ ಮರುಪಾವತಿಸುವ ಮೂಲಕ ಮುಂದಿನ 5 ವರ್ಷಗಳಲ್ಲಿ 10 ಲಕ್ಷ ಹೆಚ್ಚು ಕಾರುಗಳನ್ನು ತಯಾರಿಸಲು ನಿರ್ಧರಿಸಿದೆ. 2030ರ ವೇಳೆಗೆ ಡೀಸೆಲ್ ಬಸ್ಸುಗಳನ್ನು ಕಡಿಮೆಗೊಳಿಸಲು ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ.

click me!