1.07 ಲಕ್ಷ ಕೋಟಿಗೆ ಫ್ಲಿಪ್'ಕಾರ್ಟ್ ಖರೀದಿಸಿದ ವಾಲ್'ಮಾರ್ಟ್

First Published May 9, 2018, 5:22 PM IST
Highlights

ಫ್ಲಿಪ್'ಕಾರ್ಟ್ ಸಂಸ್ಥೆಯನ್ನು  ವಾಲ್'ಮಾರ್ಟ್  ಖರೀದಿಸಿರುವುದರಿಂದ ಆನ್'ಲೈನ್ ಮಾರಾಟದಲ್ಲಿ ಪೈಪೋಟಿ ತೀವ್ರವಾಗಲಿದ್ದು ಭಾರತದಲ್ಲಿ ಅಮೆಜಾನ್ ಸಂಸ್ಥೆ 2600 ಕೋಟಿ ರೂ. ಬಂಡವಾಳವನ್ನು ಹೆಚ್ಚುವರಿಯಾಗಿ ಹೂಡಿಕೆ ಮಾಡುವ ಸಾಧ್ಯತೆಯಿದೆ.  ಕಳೆದ ವರ್ಷ ಇ-ಕಾಮರ್ಸ್ ಸಂಸ್ಥೆಗಳು 20 ಸಾವಿರಕ್ಕೂ ಹೆಚ್ಚು ವಹಿವಾಟು ನಡೆಸಿದ್ದವು

ನವದೆಹಲಿ(ಮೇ.09):  ಭಾರತದ ಅತೀ ದೊಡ್ಡ ಇ-ಕಾಮರ್ಸ್ ಸಂಸ್ಥೆ ಫ್ಲಿಪ್'ಕಾರ್ಟ್'ನ ಶೇ.77 ಷೇರುಗಳನ್ನು ವಿಶ್ವದ ಚಿಲ್ಲರೆ ಮಾರಾಟದ ದೈತ್ಯ ಸಂಸ್ಥೆ ಅಮೆರಿಕಾದ  ವಾಲ್'ಮಾರ್ಟ್ 1.7 ಲಕ್ಷ ಕೋಟಿಗೆ ಖರೀದಿಸಿದೆ.       
ಮಾರಾಟವಾಗಿರುವ ಬಗ್ಗೆ ಎರಡೂ ಸಂಸ್ಥೆಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಫ್ಲಿಪ್'ಕಾರ್ಟ್ ಕೊಂಡುಕೊಳ್ಳಲು ಅಮೆರಿಕಾದ ಮತ್ತೊಂದು ಇ ಕಾಮರ್ಸ್ ಸಂಸ್ಥೆ ಮುಂಚೂಣಿಯಲ್ಲಿತ್ತು. ಆದರೆ ಅಂತಿಮವಾಗಿ ಖರೀದಿಸಿದ್ದು ವಾಲ್'ಮಾರ್ಟ್ . 
ಫ್ಲಿಪ್'ಕಾರ್ಟ್ ಸಂಸ್ಥೆಯನ್ನು  ವಾಲ್'ಮಾರ್ಟ್  ಖರೀದಿಸಿರುವುದರಿಂದ ಆನ್'ಲೈನ್ ಮಾರಾಟದಲ್ಲಿ ಪೈಪೋಟಿ ತೀವ್ರವಾಗಲಿದ್ದು ಭಾರತದಲ್ಲಿ ಅಮೆಜಾನ್ ಸಂಸ್ಥೆ 2600 ಕೋಟಿ ರೂ. ಬಂಡವಾಳವನ್ನು ಹೆಚ್ಚುವರಿಯಾಗಿ ಹೂಡಿಕೆ ಮಾಡುವ ಸಾಧ್ಯತೆಯಿದೆ.  ಕಳೆದ ವರ್ಷ ಇ-ಕಾಮರ್ಸ್ ಸಂಸ್ಥೆಗಳು 20 ಸಾವಿರಕ್ಕೂ ಹೆಚ್ಚು ವಹಿವಾಟು ನಡೆಸಿದ್ದವು.  ಆನ್'ಲೈನ್ ಮಾರಾಟ ಸಂಸ್ಥೆಗಳಲ್ಲಿ ವಿದ್ಯುನ್ಮಾನ ,ಜವಳಿ  ಸೇರಿದಂತೆ ಹಲವು ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ. 
ಐಐಟಿ ಪದವಿ ಪಡೆದ  ಸಚಿನ್ ಬನ್ಸಾಲ್. ಬಿನ್ನಿ ಬನ್ಸಾಲ್ ಎಂಬುವವರು ಅಮೆಜಾನ್ ಸಂಸ್ಥೆಯಲ್ಲಿ ಒಂದಷ್ಟು ವರ್ಷ ಕೆಲಸ ನಿರ್ವಹಿಸಿದ ನಂತರ 2007ರಲ್ಲಿ ಬೆಂಗಳೂರಿನ ಕೋರಮಂಗಲದ ಸಣ್ಣ ಕೊಠಡಿಯಲ್ಲಿ ಫ್ಲಿಪ್'ಕಾರ್ಟ್ ಕಚೇರಿ ಆರಂಭಿಸಿದ್ದರು. ಕೆಲವೇ ವರ್ಷಗಳಲ್ಲಿ ದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಿತ್ತು.

click me!