
ಟಾಟಾ ಮೋಟರ್ ಕಂಪೆನಿ ಹೊಸ ಟಾಟಾ ನೆಕ್ಸಾನ್ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್ ಮಿಷನ್ ( ಎ.ಎಂ.ಟಿ) ಹೊಂದಿರುವ ದೇಶದ ಏಕೈಕ ಕಾರು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಈ ಕಾರಿನಲ್ಲಿ ಮೂರು ಬಗೆಯ ಡ್ರೈವಿಂಗ್'ಗೆ ಅವಕಾಶವಿದೆ. ಸಿಟಿ, ಸ್ಪೋರ್ಟ್ ಹಾಗೂ ಇಕೋ. ಇದರ ಜೊತೆಗೆ ಕ್ಲಚ್ ಫ್ರೀ ಡ್ರೈವಿಂಗ್ ಅನ್ನು ಎಂಜಾಯ್ ಮಾಡಬಹುದು. ಹೈಪರ್ ಡ್ರೖವ್ ಸ್ವಯಂಚಾಲಿತ ಗೇರ್ ಗಳು ಈ ಕಾರಿನ ಇನ್ನೊಂ ದು ವಿಶೇಷ. ಈ ಮೂಲಕ ಒತ್ತಡ ಕಡಿಮೆಯಾಗಿ ಡ್ರೈವಿಂಗ್ ಸರಳ ಹಾಗೂ ಆರಾಮ ದಾಯವಾಗಬಲ್ಲದು. ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಗಳಿವೆ. ಸ್ಮಾರ್ಟ್ ಹಿಲ್ ಅಸಿಸ್ಟ್ ಎಂಬ ಆಯ್ಕೆ ಇದ್ದು ಇದು, ಕಾರನ್ನು ನಿಲ್ಲಿಸಲು ಹಾಗೂ ಮುಂದಕ್ಕೆ ಚಲಿಸಲು ಸೂಚನೆ ನೀಡುತ್ತದೆ.
ಏರು, ತಗ್ಗು ಪ್ರ ದೇಶಗಳ ಚಾಲನೆಗೆ ಹಾಗೂ ಸಿಟಿ ಟ್ರಾಫಿಕ್'ನಲ್ಲಿ ಈ ವ್ಯವಸ್ಥೆ ಹೆಚ್ಚು ಅನುಕೂಲಕರ. ನಿಧಾನವಾಗಿ ಚಲಿಸುವ ಟ್ರಾಫಿಕ್'ನಲ್ಲಿ ಎಕ್ಸಿಲೇಟರ್ ತುಳಿಯದೇ ಕಾರನ್ನು ಮುಂದೆ ಚಲಿಸುವ ಆಯ್ಕೆಯೂ ಇದರಲ್ಲಿದೆ. ನೆಕ್ಸಾನ್ ಕಾರು ಹೊಳೆಯುವ ಕಿತ್ತಳೆ ಬಣ್ಣ ಹಾಗೂ ಸೋನಿಕ್ ಸಿಲ್ವರ್ ಕಾಂಬಿನೇಷನ್ ಕಾರಿನಲ್ಲಿದೆ. ಇಮ್ಯಾಜಿನೇಟರ್ ಎಂಬ ಹೊಸದೊಂದು ಸೌಲಭ್ಯವಿದ್ದು, ಆನ್'ಲೈನ್ ಮೂಲಕ ಕಾರಿನ ಚಲನೆಯನ್ನು ಗ್ರಹಿಸಬಹುದು.
ಪೆಟ್ರೋಲ್ ಕಾರಿನ ಬೆಲೆ : 9.41 ಲಕ್ಷ ರು.(ಎಕ್ಸ್ ಶೋರೂಮ್ ದಿಲ್ಲಿ)
ಡೀಸೆಲ್ ಕಾರಿನ ಬೆಲೆ : 10.3 ಲಕ್ಷ ರು.(ಎಕ್ಸ್ ಶೋರೂಮ್ ದಿಲ್ಲಿ)
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.