
ಮುಂಬೈ(ಮಾ.31): ವರ್ಷಕ್ಕೂ ಹೆಚ್ಚು ಹಲವು ಉಚಿತ ಆಫರ್ ನೀಡಿದ ಜಿಯೋಗೆ ಸೆಡ್ಡು ಹೊಡೆಯಲು ಹಲವು ಸಂಸ್ಥೆಗಳು ಮುಂದಾಗಿವೆ. ಆದರೂ ಎಲ್ಲ ಕಂಪನಿಗಳ ಆಫರ್'ಗಳನ್ನು ಮೀರಿಸುವ ರೀತಿಯಲ್ಲಿ ಹೊಸ ಹೊಸ ಕೊಡುಗೆಗಳನ್ನು ಜಿಯೋ ನೀಡುತ್ತಿದೆ.
ದೇಶಿಯ ಸರ್ಕಾರಿ ಸ್ವಾಮ್ಯದ ಬಿಎಸ್'ಎನ್'ಎಲ್ ಸಂಸ್ಥೆ ಜಿಯೋ ರೀತಿಯಲ್ಲಿ ನೂತನ ಆಫರ್'ಅನ್ನು ನೀಡಲು ಮುಂದಾಗಿದೆ. ಸ್ಪೆಷಲ್ ಟಾರೀಫ್ ವೋಚರ್ (ಎಸ್'ಟಿವಿ) ಹೆಸರಿನ 118 ರೂ.ಗಳ ಕೊಡುಗೆ ಇದಾಗಿದೆ. 28 ದಿನಗಳ ಅವಧಿಯ ಈ ಆಫರ್'ನಲ್ಲಿ ನಿತ್ಯ 1ಜಿಬಿ 3ಜಿ/4ಜಿ ಡಾಟಾ, ರಾಷ್ಟ್ರೀಯ ರೋಮಿಂಗ್ ಒಳಗೊಂಡಂತೆ ಅನಿಯಮಿತ ವಾಯ್ಸ್ ಕರೆ ಒಳಗೊಳ್ಳುತ್ತದೆ.
ಪ್ರಸ್ತುತ ಈ ಆಫರ್ ತಮಿಳುನಾಡಿನಲ್ಲಿ ಮಾತ್ರ ಲಭ್ಯವಿದ್ದು ನಂತರದ ದಿನಗಳಲ್ಲಿ ದೇಶಾದ್ಯಂತ ವಿಸ್ತರಿಸಲಾಗುತ್ತದೆ. ಬಿಎಸ್'ಎನ್'ಎಲ್ ಕೇರಳ, ಮಧ್ಯಪ್ರದೇಶ, ಛತ್ತೀಸ್'ಘಡ, ಕೋಲ್ಕತ್ತಾ, ಪಶ್ಚಿಮ ಬಂಗಾಳ ಹಾಗೂ ಅಂಡಮಾನ್ ನಿಕೋಬಾರ್, ಅಸ್ಸಾಂ ಹಾಗೂ ಈಶಾನ್ಯ ಭಾರತದಲ್ಲಿ 5000 ವೈಫೈ ಹಾಟ್'ಸ್ಪಾಟ್ ಕೇಂದ್ರಗಳನ್ನು ಸ್ಥಾಪಿಸಲು ಬಿಡ್'ಗಳನ್ನು ಆಹ್ವಾನಿಸಿದೆ. ಕಳೆದ 2 ವರ್ಷಗಳಲ್ಲಿ ಭಾರತದಾತ್ಯಂತ 10 ಸಾವಿರ ಹಾಟ್'ಸ್ಪಾಟ್ ಕೇಂದ್ರ ಸ್ಥಾಪಿಸಲಾಗಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.