BSNLಗೆ ಒಂದೆಡೆ ಖಾಸಗಿ ಟೆಲಿಕಾಂ ಆಪರೇಟರ್‌ಗಳು ದೊಡ್ಡ ಸವಾಲಿಗೆ ನಿಂತಿವೆ, ಇನ್ನೊಂದೆಡೆ ಇಂಟರ್ನೆಟ್ ಆಧಾರಿತ ಕರೆ ಸೌಲಭ್ಯ ಒದಗಿಸುವ ಅಂತಾರಾಷ್ಟ್ರೀಯ ದೈತ್ಯ ಟೆಕ್ ಕಂಪನಿಗಳು. ಇವುಗಳ ನಡುವೆ ತನ್ನ ವ್ಯಾಪಾರವನ್ನು ವಿಸ್ತರಿಸುವುದು ಸುಲಭವಲ್ಲ. ಈಗ ಹೊಸ ಪ್ರಯೋಗವೊಂದನ್ನು ಮಾಡಲು ಹೊರಟಿದೆ ಸರ್ಕಾರಿ ಸ್ವಾಮ್ಯದ BSNL
ಬೆಂಗಳೂರು (ಜು.06): ಖಾಸಗಿ ಕಂಪನಿಗಳಿಗೆ ಸೆಡ್ಡುಹೊಡೆಯಲು ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ BSNL ಹೊಸ ಪ್ರಯೋಗಕ್ಕೆ ಮುಂದಾಗಿದೆ. ತನ್ನ ವ್ಯಾಪಾರವನ್ನು ಬಲಪಡಿಸುವ ನಿಟ್ಟಿನಲ್ಲಿ Voice over Wi-Fi ಸೇವೆಯನ್ನು ಒದಗಿಸುವ ಕೆಲಸಕ್ಕೆ ಕೈ ಹಾಕಿದೆ.
VoWiFi (Voice over Wi-Fi) ವ್ಯವಸ್ಥೆಯಲ್ಲಿ ಮೊಬೈಲ್ ನೆಟ್ವರ್ಕ್ ಇಲ್ಲದಿದ್ದರೂ, ಬಳಕೆದಾರರು ವೈ-ಫೈ ಇಂಟರ್ನೆಟ್ ಬಳಸಿ ಕರೆಗಳನ್ನು ಮಾಡಬಹುದಾಗಿದೆ.ಡೇಟಾ ಬಳಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಮೊಬೈಲ್ ಬಳಕೆದಾರರು ಇಂಟರ್ನೆಟ್ ಕಾಲ್‌ಗಳನ್ನು ಹೆಚ್ಚೆಚ್ಚು ನೆಚ್ಚಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ | ಟ್ರಿಣ್ ಟ್ರಿಣ್ ಟ್ರೀನ್ ಟ್ರೀನ್.. ಟ್ರೀಈನ್...... BSNL ಅಂತ್ಯ ಸನ್ನಿಹಿತ?
VoWiFi ತಂತ್ರಜ್ಞಾನದ ಆಧಾರದಲ್ಲಿ ಕೆಲಸ ಮಾಡೋ ಸ್ಕೈಪ್, ವಾಟ್ಸಪ್‌ನಂತಹ ಕಂಪನಿಗಳಿಗೆ ಪೈಪೋಟಿ ನೀಡಲು ಭಾರ್ತಿ ಏರ್ಟೆಲ್ ಹಾಗೂ ರಿಲಯನ್ಸ್ ಜಿಯೋ ಈಗಾಗಲೇ ಈ ತಂತ್ರಜ್ಞಾನವನ್ನು ಪರೀಕ್ಷಿಸುತ್ತಿದ್ದು, ಶೀಘ್ರದಲ್ಲೇ ಚಾಲನೆ ನೀಡಲಿವೆ.
ಮೊಬೈಲ್ ಸಿಗ್ನಲ್ ಇಲ್ಲದೆಯೂ ಕರೆ ಮಾಡುವ ಸೌಲಭ್ಯ ಒದಗಿಸುವ Over-The-Top (OTT) ಕಂಪನಿಗಳಾಗಿರುವ ವಾಟ್ಸಪ್, ಹೈಕ್, ಸ್ಕೈಪ್, ಫೇಸ್ಬುಕ್, ಗೂಗಲ್‌ನಂತಹ ಕಂಪನಿಗಳು ಹೆಚ್ಚಾಗುತ್ತಿದ್ದು, ಮೊಬೈಲ್ ಕಂಪನಿಗಳ ಆದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬಿದ್ದಿದೆ. ಅವುಗಳ ಬಗ್ಗೆ ಭಾರತೀಯ ಟೆಲಿಕಾಂ ಕಂಪನಿಗಳು ದೂರು ಸಲ್ಲಿಸುತ್ತಲೇ ಬಂದಿವೆ. ಆ ಸೇವೆಗಳನ್ನು ‘ಪರವಾನಿಗೆ’ ವ್ಯಾಪ್ತಿಗೆ ತರಬೇಕೆಂದು ಅವು ಆಗ್ರಹಿಸಿವೆ.
ಇದನ್ನೂ ಓದಿ | BSNLನಿಂದ ಬಿಗ್ ಆಫರ್; ಇಂಟರ್ನೆಟ್ ಬಳಕೆದಾರರಿಗೆ ಹೊಸ, ಉಚಿತ ಸೇವೆ!
ಮೊಬೈಲ್ ನೆಟ್ವರ್ಕ್ ದುರ್ಬಲವಿರುವ ಅಥವಾ ಅಲಭ್ಯವಿರುವ ಕಡೆಗಳಲ್ಲಿ ಈ ಸೇವೆಯನ್ನು ಆರಂಭಿಸಲು BSNL ನಿರ್ಧರಿಸಿದೆ. ಮುಂದಿನ ಹಂತಗಳಲ್ಲಿ ದೇಶದ ಎಲ್ಲಾ ಕಡೆ ಇದನ್ನು ವಿಸ್ತರಿಸುವ ಯೋಜನೆ BSNL ಹಾಕಿದೆ.