ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಲಾಭಗಳನ್ನು ನೀಡುವ ಹೊಸ ಪ್ಲಾನ್‌ಗಳನ್ನು ಪರಿಚಯಿಸಿದೆ. 997 ರೂಪಾಯಿಗಳ ರೀಚಾರ್ಜ್ ಪ್ಲಾನ್‌ನಲ್ಲಿ 160 ದಿನಗಳ ವ್ಯಾಲಿಡಿಟಿ, ದೈನಂದಿನ 2GB ಡೇಟಾ ಮತ್ತು ಅನಿಯಮಿತ ಕರೆಗಳನ್ನು ನೀಡಲಾಗುತ್ತಿದೆ.
ನವದೆಹಲಿ: ಟೆಲಿಕಾಂ ಮಾರುಕಟ್ಟೆಯಲ್ಲಿ ಖಾಸಗಿ ಕಂಪನಿಗಲೇ ಟಾಪ್‌ನಲ್ಲಿದ್ದು, ಟ್ಯಾರಿಫ್ ಏರಿಕೆ ಬೆನ್ನಲ್ಲೇ ಅತ್ಯಾಕರ್ಷಕ ಆಫರ್‌ಗಳನ್ನು ಘೋಷಣೆ ಮಾಡುತ್ತಿವೆ. ಖಾಸಗಿ ಕಂಪನಿಗಳಾದ ರಿಲಯನ್ಸ್ ಜಿಯೋ, ಏರ್‌ಟೆಲ್, ವೊಡಾಫೋನ್ ಐಡಿಯಾಗಳಿಗೆ ಟಕ್ಕರ್ ನೀಡಲು ಸರ್ಕಾರಿ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್ ಹೊಸ ಪ್ಲಾನ್ ಅನೌನ್ಸ್ ಮಾಡಿದೆ. ಖಾಸಗಿ ಟೆಲಿಕಾಂ ಕಂಪನಿಗಳು ಬಳಕೆದಾರರು ಯಾವುದೇ ಪ್ಲಾನ್ ಆಕ್ಟಿವೇಟ್ ಮಾಡಿಕೊಂಡರೂ ಅನ್‌ಲಿಮಿಟೆಡ್ ವಾಯ್ಸ್ ಕಾಲಿಂಗ್ ಮತ್ತು 100 ಎಸ್‌ಎಂಎಸ್‌ಗಳನ್ನು ಬೆನೆಫಿಟ್ ನೀಡುತ್ತಿವೆ. ಆದ್ರೆ ಬಿಎಸ್ಎನ್‌ಎಲ್ ಮಾತ್ರ ಇದುವರೆಗೂ ಯಾವುದೇ ಟ್ಯಾರಿಫ್ ಪ್ಲಾನ್ ಹೆಚ್ಚಿಸಿಲ್ಲ.
ಭಾರತ ಸಂಚಾರ ನಿಗಮ ಲಿಮಿಟೆಡ್ ತನ್ನ ಗ್ರಾಹಕರ ಹಿತವನ್ನು ಕಾಪಾಡಿಕೊಳ್ಳುವ ಉದ್ದೇಶದಲ್ಲಿ ಬೆಲೆ ಏರಿಕೆ ಮಾಡಿಲ್ಲ. ಇದರ ಜೊತೆಗೆ ಕಡಿಮೆ ಬೆಲೆಯಲ್ಲಿ ಅತ್ಯಧಿಕ ಲಾಭಗಳನ್ನು ನೀಡುವ ಪ್ಲಾನ್‌ಗಳನ್ನು ಬಿಎಸ್‌ಎನ್‌ಎಲ್ ಪರಿಚಯಿಸುವ ಮೂಲಕ ಖಾಸಗಿ ಕಂಪನಿಗಳಿಗೆ ಟಕ್ಕರ್ ನೀಡುತ್ತಿದೆ. ಬಿಎಸ್‌ಎನ್‌ಎಲ್ 997 ರೂಪಾಯಿಯ 160 ದಿನ ವ್ಯಾಲಿಡಿಟಿಯ ಪ್ಲಾನ್ ಹೆಚ್ಚು ಜನಪ್ರಿಯವಾಗಿದೆ.
undefined
ಬಿಎಸ್‌ಎನ್‌ಎಲ್: 997 ರೂಪಾಯಿ ರೀಚಾರ್ಜ ಪ್ಲಾನ್
ನೀವು 997 ರೂಪಾಯಿ ರೀಚಾರ್ಜ್ ಮಾಡಿಕೊಂಡರೆ ಪ್ರತಿದಿನ 2 ಜಿಬಿ ಡೇಡಾ ಸಿಗುತ್ತದೆ. 160 ದಿನದಲ್ಲಿ ನಿಮಗೆ ಒಟ್ಟು 320 ಜಿಬಿ ನೆಟ್ ಲಭ್ಯವಾಗುತ್ತದೆ. ಖಾಸಗಿ ಕಂಪನಿಗಳು ನೀಡುತ್ತಿರುವ ಅನ್‌ಲಿಮಿಟೆಡ್ ಕಾಲಿಂಗ್ ಮತ್ತು ಪ್ರತಿದಿನ 100 ಎಸ್‌ಎಂಎಸ್ ಸಹ ಈ ರೀಚಾರ್ಜ್‌ನಲ್ಲಿ ಬಿಎಸ್ಎನ್ ಎಲ್ ನೀಡುತ್ತಿದೆ. ಇದೆಲ್ಲದರ ಜೊತೆಯಲ್ಲಿ ಹಲವು ಆಪ್‌ಗಳ ಚಂದಾದಾರಿಕೆಯೂ ಬಳಕೆದಾರರಿಗೆ ಸಿಗುತ್ತದೆ.
ಜಿಯೋ ಬಳಿಯಲ್ಲಿರೋ ಆಫರ್ ಏನು?
ರಿಲಯನ್ಸ್ ಜಿಯೋ 98 ದಿನ ವ್ಯಾಲಿಡಿಟಿಯ ಪ್ಲಾನ್ ಬೆಲೆ 999 ರೂಪಾಯಿ ಆಗಿದೆ. ಈ ಪ್ಲಾನ್‌ನಲ್ಲಿ ಪ್ರತಿದಿನ 2 ಜಿಬಿ ಡೇಟ, ಅನ್‌ಲಿಮಿಟೆಡ್ ಕಾಲ್, 100 ಎಸ್‌ಎಂಎಸ್ ಸೇರಿದಂತೆ ಕೆಲ ಆಪ್‌ಗಳ ಚಂದಾದಾರಿಕೆ ಸಿಗುತ್ತದೆ. 98 ದಿನದಲ್ಲಿ ಒಟ್ಟು 196 ಜಿಬಿ ಡೇಟಾ ಪ್ಯಾಕ್ ಲಭ್ಯವಾಗಲಿದೆ. ಜಿಯೋ ನೀಡುತ್ತಿರುವ ಪ್ಲಾನ್ ಬಿಎಸ್‌ಎನ್‌ಎಲ್ ಗಿಂತ 2 ರೂಪಾಯಿ ತುಟ್ಟಿ ಮತ್ತು 2 ತಿಂಗಳ ವ್ಯಾಲಿಡಿಟಿ ಅಧಿಕವಾಗಿದೆ. ಬಿಎಸ್ಎನ್ಎಲ್‌ನಲ್ಲಿ ಹೆಚ್ಚುವರಿಯಾಗಿ 124 ಜಿಬಿ ನೆಟ್ ಸಿಗುತ್ತದೆ.
ಏರ್‌ಟೆಲ್ ನೀಡುವ ಆಫರ್ ಏನು?
ಏರ್‌ಟೆಲ್ 979 ರೂ. ರೀಚಾರ್ಜ್ ಪ್ಲಾನ್‌ನಲ್ಲಿ ಪ್ರತಿದಿನ 2 ಜಿಬಿ ಡೇಟಾ, ಅನ್‌ಲಿಮಿಟೆಡ್ ಕಾಲಿಂಗ್, 100 ಎಸ್‌ಎಂಎಸ್ ಸಿಗುತ್ತದೆ. ಒಟ್ಟು 168 ಜಿಬಿ ಸಿಗುವ ಪ್ಲಾನ್ 84 ದಿನದ ವ್ಯಾಲಿಡಿಟಿಯನ್ನು ಹೊಂದಿದೆ. ಬಿಎಸ್‌ಎನ್‌ಎಲ್ ಗಿಂತ ಬೆಲೆ ಕಡಿಮೆಯಾದ್ರೂ ವ್ಯಾಲಿಡಿಯೋ ಕಡಿಮೆ ಇರೋ ಕಾರಣ ಗ್ರಾಹಕರು ಬಿಎಸ್ಎನ್‌ಎಲ್ ಆಯ್ಕೆ ಮಾಡಿಕೊಳ್ಳಬಹುದು.