ಜಿಯೋವನ್ನೂ ಮೀರಿಸುವ ಭರ್ಜರಿಯಾದ ಆಫರ್ ನೀಡಿದ ಬಿಎಸ್ಎನ್ಎಲ್

Published : Feb 15, 2018, 11:11 AM ISTUpdated : Apr 11, 2018, 01:11 PM IST
ಜಿಯೋವನ್ನೂ ಮೀರಿಸುವ ಭರ್ಜರಿಯಾದ ಆಫರ್ ನೀಡಿದ ಬಿಎಸ್ಎನ್ಎಲ್

ಸಾರಾಂಶ

ಕೆಲ ದಿನಗಳ ಹಿಂದಷ್ಟೇ ಮೂರು ತಿಂಗಳ ಭರ್ಜರಿ ಆಫರ್ ನೀಡಿದ್ದ ಬಿಎಸ್ಎನ್ಎಲ್ ಇದೀಗ ಮತ್ತೊಂದು ಹೊಸ ಆಫರ್ ನೀಡಿದೆ.

ನವದೆಹಲಿ : ರಿಲಾಯನ್ಸ್ ಜಿಯೋ ಗ್ರಾಹಕರಿಗೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಸೇವಾ ಸೌಲಭ್ಯವನ್ನು ಒದಗಿಸಿದ ಬೆನ್ನಲ್ಲೇ ಪೈಪೋಟಿ ನೀಡಲು ಅನೇಕ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ವಿವಿಧ ರೀತಿಯಾದ ಆಫರ್ ನೀಡಿದವು.

ಆಫರ್ ನೀಡುವಲ್ಲಿ ಸರ್ಕಾರಿ ಒಡೆತನದ ಟೆಲಿಕಾಂ ಸಂಸ್ಥೆಯಾದ ಬಿಎಸ್ಎನ್ಎಲ್ ಕೂಡ ಹಿಂದೆ ಬಿದ್ದಿಲ್ಲ. ಕೆಲ ದಿನಗಳ ಹಿಂದಷ್ಟೇ ಮೂರು ತಿಂಗಳ ಭರ್ಜರಿ ಆಫರ್ ನೀಡಿದ್ದ ಬಿಎಸ್ಎನ್ಎಲ್ ಇದೀಗ ಮತ್ತೊಂದು ಹೊಸ ಆಫರ್ ನೀಡಿದೆ.

999 ರೂ. ರಿಚಾರ್ಜ್ ಮಾಡಿಸಿಕೊಂಡಲ್ಲಿ  ಒಂದು ವರ್ಷಗಳ ಕಾಲ ಪ್ರತಿದಿನ 1 ಜಿಬಿ ಚಿತ ಡೇಟಾ ಹಾಗೂ 181 ದಿನಗಳ ಕಾಲ ಉಚಿತ ಅನಿಯಮಿತ ಕರೆ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಸ್ಥಳೀಯ ಹಾಗೂ ಎಸ್’ಟಿಡಿಗೆ ಕರೆಯ ಉಚಿತ ಸೌಲಭ್ಯವಿದೆ.

ಆದರೆ ಈ ಸೌಲಭ್ಯವು ಅಸ್ಸಾಂ, ಜಮ್ಮು ಕಾಶ್ಮೀರದಂತ ರಾಜ್ಯಗಳಲ್ಲಿ ಲಭ್ಯವಿರುವುದಿಲ್ಲ.

 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಆ್ಯಪಲ್‌ನಿಂದ ಕ್ರಿಯೆಟರ್ ಸ್ಟುಡಿಯೋ ಲಾಂಚ್, ಒಂದೇ ಕಡೆ ಎಲ್ಲಾ ಫೀಚರ್ಸ್
15 ಲಕ್ಷ ವೆಚ್ಚದಲ್ಲಿ 10 ಸ್ನೇಹಿತರಿಗೆ iPhone 17 Pro Max ಫೋನ್ ಗಿಫ್ಟ್ ನೀಡಿದ ವ್ಯಕ್ತಿ: ಭಾವುಕರಾದ ಗೆಳೆಯರು