ಚಂದ್ರನ ಮೇಲೆ ಕಾಲಿಡುವ ಮೊದಲ ಮಹಿಳೆ ಸುನೀತಾ?

By Web DeskFirst Published Jun 16, 2019, 9:12 AM IST
Highlights

ಚಂದ್ರನ ಮೇಲೆ ಕಾಲಿಡುವ ಮೊದಲ ಮಹಿಳೆ ಸುನೀತಾ?|  2024ಕ್ಕೆ ನಾಸಾ ಚಂದ್ರಯಾನ| ಹಲವರು ರೇಸ್‌ನಲ್ಲಿ

ವಾಷಿಂಗ್ಟನ್‌[ಜೂ.16]: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ 50 ವರ್ಷಗಳ ಬಳಿಕ ಮತ್ತೊಮ್ಮೆ ಮಾನವ ಸಹಿತ ಚಂದ್ರಯಾನ ಕೈಗೊಳ್ಳಲು ಉದ್ದೇಶಿಸಿದೆ. 2024ಕ್ಕೆ ನಡೆಯಲಿರುವ ಈ ಯಾನದಲ್ಲಿ ಮೊದಲ ಬಾರಿಗೆ ಮಹಿಳಾ ಗಗನಯಾತ್ರಿಯೊಬ್ಬರು ಚಂದ್ರನ ಅಂಗಳದ ಮೇಲೆ ಕಾಲಿಡಲಿದ್ದಾರೆ. ಹೀಗಾಗಿ ಈ ಗಗನಯಾತ್ರಿ ಯಾರು ಎಂಬ ಕುತೂಹಲ ಇದೀಗ ಗರಿಗೆದರಿದೆ.

ನಾಸಾ ತನ್ನ ಮಹತ್ವಾಕಾಂಕ್ಷಿ ಯೋಜನೆಗೆ 12 ಮಹಿಳಾ ಗಗನಯಾತ್ರಿಗಳ ಪೈಕಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಲಿದೆ. ಇವರ ಪೈಕಿ ಭಾರತೀಯ ಮೂಲದವರಾದ ಸುನೀತಾ ವಿಲಿಯಮ್ಸ್‌ ಅವರ ಸಹ ಒಬ್ಬರಾಗಿದ್ದಾರೆ. ಮಹಿಳಾ ಗಗನಯಾತ್ರಿಯಾಗಿ ಬಾಹ್ಯಾಕಾಶ ನೌಕೆಯ ಹೊರಗೆ 50 ಗಂಟೆ 40 ನಿಮಿಷಗಳ ಕಾಲ ನಡೆದಾಡಿದ ಅನುಭವವನ್ನು ಸುನಿತಾ ಹೊಂದಿದ್ದಾರೆ. ಹೀಗಾಗಿ ನಾಸಾದ ಮಾನವ ಸಹಿತ ಗಗನಯಾತ್ರೆಗೆ ಸುನೀತಾ ವಿಲಿಯಮ್ಸ್‌ ನೆಚ್ಚಿನ ಆಯ್ಕೆ ಎನಿಸಿಕೊಂಡಿದ್ದಾರೆ.

1969ರಿಂದ 1972ರ ಅವಧಿಯಲ್ಲಿ ಅಪೋಲೋ ಗಗನನೌಕೆಯ ಮೂಲಕ ಚಂದ್ರನ ಮೇಲೆ ಕಾಲಿಟ್ಟಎಲ್ಲಾ 12 ಮಂದಿ ಗಗನಯಾತ್ರಿಗಳು ಪುರುಷರಾಗಿದ್ದಾರೆ. ನೀಲ್‌ ಆಮ್‌ರ್‍ ಸ್ಟ್ರಾಂಗ್‌ ಚಂದ್ರನ ಮೇಲೆ ಕಾಲಿಟ್ಟಮೊದಲ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 1983ರಲ್ಲಿ ಶೆಲ್ಲಿ ರೈಡ್‌ ಬಾಹ್ಯಾಕಾಶಕ್ಕೆ ಕಳುಹಿಸಲ್ಪಟ್ಟಮೊದಲ ಮಹಿಳಾ ಗಗನಯಾತ್ರಿ ಎನಿಸಿಕೊಂಡಿದ್ದರು.

click me!