ಈ 5 ಆ್ಯಪ್'ಗಳು ನಿಮ್ಮ ಮೊಬೈಲ್'ನಲ್ಲಿದ್ದರೆ ನಿಮ್ಮ ಖುಷಿಗೆ ಪಾರವೆ ಇಲ್ಲ

Published : Nov 13, 2017, 04:06 PM ISTUpdated : Apr 11, 2018, 12:49 PM IST
ಈ 5 ಆ್ಯಪ್'ಗಳು ನಿಮ್ಮ  ಮೊಬೈಲ್'ನಲ್ಲಿದ್ದರೆ  ನಿಮ್ಮ ಖುಷಿಗೆ ಪಾರವೆ ಇಲ್ಲ

ಸಾರಾಂಶ

ಇವು ಆರೋಗ್ಯಕ್ಕೆ ಸಂಬಂಧಿಸಿದ ಆ್ಯಪ್‌ಗಳು ಬೆಸ್ಟ್ ಫ್ರೆಂಡ್ ಥರ ನಿಮ್ಮ ಫಿಟ್‌ನೆಸ್, ಆರೋಗ್ಯ, ಡಯೆಟ್‌ಗೆ ಸಂಬಂಧಿಸಿ ಸಲಹೆ ಸೂಚನೆ ನೀಡುತ್ತವೆ.

1.ಸ್ವಾರ್ಕಿಟ್ (SWORKIT):  ಇದು ಫಿಟ್‌ನೆಸ್‌ಗೆ ಸಂಬಂಧಿಸಿದ ಆ್ಯಪ್. ತೂಕ ಇಳಿಸಿಕೊಳ್ಳೋದು, ಹೆಚ್ಚು ಸ್ಟ್ರಾಂಗ್ ಆಗೋದು, ದೇಹಕ್ಕೆ ಫ್ಲೆಕ್ಸಿಬಿಲಿಟಿ ತಂದುಕೊಳ್ಳೋದು ಸೇರಿದಂತೆ ನಿಮ್ಮ ಅಗತ್ಯಕ್ಕೆ ತಕ್ಕಂಥ ಹಲವಾರು ಎಕ್ಸರ್‌ಸೈಸ್'ಗಳು ಇದರಲ್ಲಿವೆ. ನಿಮ್ಮ ಅವಶ್ಯಕತೆ ತಿಳಿಸಿದರೆ ಅದಕ್ಕೆ ತಕ್ಕಂಥ ವ್ಯಾಯಾಮಗಳ ಪ್ಲಾನ್‌ನ್ನ ಈ ಆ್ಯಪ್ ಸಿದ್ಧಪಡಿಸಿಕೊಡುತ್ತೆ. ಅದಕ್ಕೆ ತಕ್ಕಂತೆ ವ್ಯಾಯಾಮ ಮಾಡಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತೆ. ಪ್ರತಿಯೊಂದು ವ್ಯಾಯಾಮ ಮಾಡುವ ಬಗೆಯನ್ನೂ ಇದೇ ಕಲಿಸಿಕೊಡುತ್ತೆ. ಯೋಗ, ಸ್ಟ್ರೆಚಿಂಗ್, ಕಾರ್ಡಿಯೊ ಸೇರಿದಂತೆ ಹಲವು ಎಕ್ಸರ್‌ಸೈಸ್‌ಗಳನ್ನು ಇದರಿಂದ ಕಲಿಯಬಹುದು.

2. ಯಮ್ಲೀ (YUMMLY):  ಡಯೆಟ್‌ಗೆ ಸಂಬಂಧಿಸಿದ ಆ್ಯಪ್ ಇದು. ಆರೋಗ್ಯಕರ ರೆಸಿಪಿಗಳು ಇದರಲ್ಲಿ ಸಿಗುತ್ತೆ. ಪೌಷ್ಟಿಕಾಂಶ ನಮ್ಮ ದೇಹಕ್ಕೆ ಎಷ್ಟು ಪ್ರಮಾಣದಲ್ಲಿ ಬೇಕು, ಅವು ಯಾವ ಆಹಾರ ಪದಾರ್ಥಗಳಲ್ಲಿರುತ್ತೆ, ಆ ಪದಾರ್ಥಗಳನ್ನು ಬಳಸಿಕೊಂಡು ಯಾವೆಲ್ಲ ರೆಸಿಪಿ ತಯಾರಿಸಬಹುದು ಅನ್ನೋ ವಿವರಗಳನ್ನೆಲ್ಲ ಈ ಆ್ಯಪ್ ನೀಡುತ್ತದೆ.

3. ಗುಡ್ ಮಾರ್ನಿಂಗ್ ಅಲರಾಂ ಕ್ಲಾಕ್: ಇದು ನಿದ್ದೆಗೆ ಸಂಬಂಧಿಸಿದ ಆ್ಯಪ್. ಇದರಲ್ಲಿ ನಿಮ್ಮ ನಿದ್ದೆಯ ಅವಧಿಯನ್ನು ಟ್ರ್ಯಾಕ್ ಮಾಡಲಾಗುತ್ತೆ. ದೇಹಕ್ಕೆ ಚೆನ್ನಾಗಿ ನಿದ್ದೆ ಸಿಕ್ಕಿದೆಯಾ ಇಲ್ಲವಾ ಅನ್ನೋದು ಗೊತ್ತಾಗುತ್ತೆ, ಮಲಗಿದ ಕೂಡಲೇ ಚೆನ್ನಾಗಿ ನಿದ್ದೆ ಮಾಡೋದು, ನಿದ್ರಾಚಕ್ರದ ಸಂಪೂರ್ಣ ಅವಧಿಯನ್ನು ಪೂರೈಸುವುದು ಸೇರಿದಂತೆ ಅತ್ಯುತ್ತಮ ನಿದ್ದೆಗೆ ಸಂಬಂಧಿಸಿದ ಟಿಪ್ಸ್ಗಳು ಈ ಆ್ಯಪ್‌ನಲ್ಲಿದೆ.

4. ವೈಟ್ ನಾಯ್ಸ್ ಆ್ಯಪ್ :  ಇಲ್ಲಿ ವೈಟ್‌ನಾಯ್ಸ್ ಅಂದರೆ ಏಕತಾನತೆಯಿಂದಿರುವ ಶಬ್ದಗಳು. ಹೆಚ್ಚು ಏರಿಳಿತಗಳಿಲ್ಲದ ಮನಸ್ಸಿಗೆ ಹಿತ ನೀಡುವ ಸಂಗೀತ ಇರಬಹುದು, ನಿರಂತರವಾಗಿ ಬೀಳುವ ಮಳೆ ಹನಿಯ ಶಬ್ದವಿರಬಹುದು. ಇದು ಮನಸ್ಸನ್ನು ರಿಲ್ಯಾಕ್ಸ್ ಮಾಡುತ್ತೆ. ಎಂಥಾ ಟೆನ್ಶನ್‌ನಲ್ಲಿ ಇದ್ದರೂ ಮನಸ್ಸಿಗೆ ಆರಾಮ ನೀಡುವ ಶಬ್ದಗಳಿವು. ಈ ಆ್ಯಪ್' ಇಂಥ ಶಬ್ದಗಳನ್ನು ಕೇಳಿಸಿ ನಿಮ್ಮ ಮನಸ್ಸನ್ನು ಹಾಯಾಗಿರಿಸುತ್ತೆ. ಪುಟ್ಟ ಮಕ್ಕಳನ್ನು ಮಲಗಿಸುವ ವೈಟ್‌ನಾಯ್ಸ್‌ಗಳೂ ಇದರಲ್ಲಿ ಸಿಗುತ್ತವೆ.

5. ಕ್ಲೂ ಪಿರಿಯಡ್ಸ್ ಟ್ರಾಕರ್: ಋತುಚಕ್ರದ ಬಗೆಗಿರುವ ಆ್ಯಪ್ ಇದು. ಪೀರಿಯಡ್ಸ್ ಸಮಯದಲ್ಲಾಗುವ ಮಾನಸಿಕ ದೈಹಿಕ ಏರುಪೇರುಗಳ ಬಗ್ಗೆ ತಿಳಿಸುತ್ತೆ. ಈ ನೋವುಗಳಿಂದ ಹೊರಬರುವ ಐಡಿಯಾಗಳನ್ನೂ ತಿಳಿಸುತ್ತೆ. ಋತುಚಕ್ರಕ್ಕೆ ಸಂಬಂಧಿಸಿ ನಮ್ಮ ಆಹಾರ ಕ್ರಮ, ಚಟುವಟಿಕೆಗಳು ಯಾವ ರೀತಿ ಇರಬೇಕು ಅನ್ನೋದನ್ನು ನಿರ್ದೇಶಿಸುತ್ತೆ.  ಹಾಗೇ ಮಗುವಿನ ನಿರೀಕ್ಷೆಯಲ್ಲಿರುವ ದಂಪತಿಗಳಿಗೆ ಟಿಪ್ಸ್ ಇದರಲ್ಲಿದೆ.

 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಪವಾಡ : ನಾಪತ್ತೆ ಆಗಿದ್ದ 1 ಉಪಗ್ರಹ ಕಕ್ಷೆಗೆ!
ನಾನು ಬದುಕಿದ್ದೇನೆ, ಎರಡು ದಿನ ಬಟನ್ ಒತ್ತಿಲ್ಲ ಅಂದ್ರೆ ... ಚೀನಾದಲ್ಲಿ ಫೇಮಸ್ ಆಗ್ತಿದೆ Are you dead ಆಪ್