
ಮುಂಬೈ(ನ.11): ಟೆಲಿಕಾಂ'ನ ದೈತ್ಯ ಸಂಸ್ಥೆ ಜಿಯೋ ಪ್ರೈಮ್ ಗ್ರಾಹಕರಿಗಾಗಿ 399 ರೂ.ಗಳು ಹಾಗೂ ಮೇಲ್ಪಟ್ಟ ರಿಚಾರ್ಜ್'ಗೆ 2599 ರೂ. ತನಕ ಟ್ರಿಪಲ್ ಕ್ಯಾಶ್ ಬ್ಯಾಕ್ ಆಫರ್ ಪ್ರಕಟಿಸಿದೆ.
ಪ್ರತಿ ರಿಚಾರ್ಜ್ ಮೇಲೆ 300 ರೂ. ತನಕ ಅಮೆಜಾನ್,ಆಕ್ಸಿಸ್'ಪೇ, ಫ್ರೀಚಾರ್ಜ್, ಮೊಬಿಕ್ವಿಕ್, ಪೇಟಿಎಂ ಮತ್ತು ಫೋನ್'ಪೇ ನಂತಹ ಜಿಯೋದ ಸಹಭಾಗಿ ವ್ಯಾಲೆಟ್'ಗಳಿಂದ ದೊರೆಯುತ್ತದೆ. ಈ ವೋಚರ್'ಗಳಲ್ಲದೆ ಅಜಿಯೋ, ಯಾತ್ರಾ ಡಾಟ್ ಕಾಂ ಮತ್ತು ರಿಲಯನ್ಸ್ ಟ್ರೆಂಡ್ಸ್ ಡಾಟ್'ನಂತಹ ವ್ಯಾಲೆಟ್'ಗಳಿಂದ ಕೂಡ ವೋಚರ್'ಗಳು ದೊರೆಯುತ್ತವೆ. ajio.com ಕನಿಷ್ಠ 1500 ರೂ. ಖರೀದಿ ನಡೆಸಿದರೆ ಗ್ರಾಹಕರಿಗೆ 399 ರೂ. ಕಡಿತ ಹಾಗೂ yatra.com ಮೂಲಕ ಬುಕ್ ಮಾಡುವ ದೇಶೀಯ ಆಲ್ರೌಂಡ್ ಟ್ರಿಪ್ ಟಿಕೆಟ್'ಗಳ ಮೇಲೆ 1000 ರೂ. ರಿಯಾಯ್ತಿ ಮತ್ತು ಒನ್ ವೇ ಟಿಕೆಟ್ಗಳ ಮೇಲೆ 500 ರೂ. ರಿಯಾಯ್ತಿಯನ್ನು ಜಿಯೋ ಪ್ರೈಮ್ ಗ್ರಾಹಕರು ಪಡೆಯಲಿದ್ದಾರೆ.
ಅಂತಿಮವಾಗಿ reliancetrends.com ನಲ್ಲಿ ಶಾಪಿಂಗ್ ಮಾಡುವಾಗ ಜಿಯೋ ಪ್ರೈಮ್ ಗ್ರಾಹಕರು 1999 ರೂ. ಮತ್ತು ಮೇಲಿನ ಖರೀದಿ ಮೇಲೆ 500 ರೂ. ತಕ್ಷಣದ ರಿಯಾಯ್ತಿ ಪಡೆಯುತ್ತಾರೆ. ಈ ಆಫರ್'ಗಳು ನ.10ರಿಂದ ಒಳಗೊಂಡು ನ.25ರವರೆಗೆ ಲಭ್ಯವಿರಲಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.