ನಿಮ್ಮ ವಾಟ್ಸಾಪ್‌ಗೆ ಈ ಸಂದೇಶ ಬಂತಾ ಎಚ್ಚರ ಎಚ್ಚರ.. ಅದನ್ನು ಓಪನ್ ಮಾಡಿದರೂ ಎದುರಾಗಲಿದೆ ಭಾರೀ ಸಮಸ್ಯೆ
ನವದೆಹಲಿ (ಡಿ.18): ಮನೆಯಿಂದಲೇ ಕೆಲಸ ಮಾಡುವ ಅರೆಕಾಲಿಕ ಉದ್ಯೋಗ ಲಭ್ಯವಿದೆ. ಮನೆಯಲ್ಲಿ ಇದ್ದುಕೊಂಡೇ ದಿನಕ್ಕೆ 1000ದಿಂದ 5000 ರು.ವರೆಗೂ ಗಳಿಸಿ. ಈ ಉದ್ಯೋಗವನ್ನು ಪಡೆಯಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ
ಈ ರೀತಿಯ ಸಂದೇಶಗಳು ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿವೆ. ಒಂದು ವೇಳೆ ಈ ರೀತಿಯ ಸಂದೇಶಗಳು ನಿಮ್ಮ ವಾಟ್ಸ್‌ಆ್ಯಪ್‌ಗೆ ಬಂದಿದ್ದರೆ ಎಚ್ಚರ. ಅಪ್ಪಿ ತಪ್ಪಿಯೂ ಅವುಗಳ ಮೇಲೆ ಕ್ಲಿಕ್ ಮಾಡಬೇಡಿ. ಇದೊಂದು ನಕಲಿ ಸಂದೇಶವಾಗಿದ್ದು, ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಮೊಬೈಲ್‌ಗೆ ವೈರಸ್‌ಗಳು ಇನ್‌ಸ್ಟಾಲ್ ಆಗಬಹುದು. ಕೆಲವೊಮ್ಮೆ ಈ ರೀತಿಯ ಸಂದೇಶಗಳಲ್ಲಿ ಹಣಕಾಸು ವಿವರ, ಎಟಿಎಂ ಪಿನ್, ಮತ್ತಿತರ ವಿವರಗಳನ್ನು ಕೇಳಲಾಗುತ್ತದೆ ಎಂದು ವರದಿಗಳು ತಿಳಿಸಿವೆ.
undefined
ಇನ್ಸ್‌ಟಾಗ್ರಾಮ್‌ನಲ್ಲಿ ಮೂವೀ ನೋಡಲು ‘ವಾಚ್ ಟುಗೆದರ್’ ಫೀಚರ್! ..
ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ ಸಂದೇಶಗಳು ಗೂಢಲಿಪಿಯಾಗಿ ಪರಿವರ್ತನೆ ಆಗುವ ಕಾರಣ ಅವುಗಳ ಮೂಲವನ್ನು ಪತ್ತೆಹಚ್ಚಲು ಸಾಧ್ಯವಿಲ್ಲ. ಜೊತೆಗೆ ಇಂತಹ ಸಂದೇಶಗಳನ್ನು ಬರದಂತೆ ತಡೆಯುವುದು ಅಸಾಧ್ಯ. ಹೀಗಾಗಿ ವಾಟ್ಸ್‌ಆ್ಯಪ್‌ನಲ್ಲಿ ಹಣ ಆಮಿಷ ಒಡ್ಡುವ ಸಂದೇಶಗಳ ಬಗ್ಗೆ ಎಚ್ಚರದಿಂದ ಇರುವುದು ಒಳಿತು ಎಂದು ಚೆಕ್ ಪಾಯಿಂಟ್ ಸಾಫ್ಟ್‌ವೇರ್ ಟೆಕ್ನಾಲಜೀಸ್‌ನ ವ್ಯವಸ್ಥಾಪಕ ನಿರ್ದೇಶಕ ಬಾಲಸುಬ್ರಹ್ಮಣ್ಯಂ ತಿಳಿಸಿದ್ದಾರೆ.