ಆ್ಯಂಡ್ರಾಯಿಡ್ ಮೊಬೈಲ್ ಫೋನ್‌ವುಳ್ಳವರಿಗೆ ಕೆಟ್ಟ ಸುದ್ದಿ!

By Web DeskFirst Published Aug 24, 2018, 5:29 PM IST
Highlights

ಆ್ಯಂಡ್ರಾಯಿಡ್ ಫೋನ್‌ಗಳಲ್ಲಿರುವ ಗೂಗಲ್‌ನ ಕ್ರೋಮ್ ಬ್ರೌಸರ್ ಬರೇ ಬ್ರೌಸರ್ ಮಾತ್ರವಲ್ಲ! ನೀವಿರುವ ಸ್ಥಳದ ಬಗ್ಗೆ ಮಾಹಿತಿಯನ್ನು ಗೂಗಲ್‌ಗೆ ನಿರಂತರವಾಗಿ ರವಾನಿಸುತ್ತದೆ! 

ಲೊಕೇಶನ್  ಟ್ರ್ಯಾಕಿಂಗ್ ಗೆ ಸಂಬಂಧಿಸಿದಂತೆ   ಗೂಗಲ್ ಈ ಹಿಂದೆ  ಬಳಕೆದಾರರ ಆಕ್ರೋಶಕ್ಕೆ ಗುರಿಯಾಗಿತ್ತು. ಇದೀಗ ಆ ಆರೋಪವನ್ನು ಇನ್ನೂ ಪುಷ್ಠೀಕರಿಸುವಂತಹ ಸಂಶೋಧನೆಯೊಂದು ವರದಿಯಾಗಿದೆ. ಕ್ರೋಮ್ ಇರುವ  ಆ್ಯಂಡ್ರಾಯಿಡ್ ಪೋನ್ ಚಲನೆಯಲ್ಲಿಲ್ಲದಿದ್ದರೂ , ಐಫೋನ್ ಸಫಾರಿಗಿಂತ 50 ಪಟ್ಟು ಹೆಚ್ಚು ಮಾಹಿತಿಯನ್ನು  ರವಾನಿಸುತ್ತದೆ ಎಂದು ಹೇಳಲಾಗಿದೆ.

ವಾಂಡರ್ಬಿಲ್ಟ್ ವಿವಿಯ ಪ್ರೊಫೆಸರ್ ಒಬ್ಬರು ಮಂಡಿಸಿರುವ ಸಂಶೋಧನಾ ಪ್ರಬಂಧದಲ್ಲಿ ಈ ವಿಚಾರ ಇದೀಗ ಬಹಿರಂಗವಾಗಿದೆ.  ಅವರ ಪ್ರಕಾರ, ಫೋನ್ ನಲ್ಲಿ ಕ್ರೋಮ್ ಇದ್ದರೆ, ಅದು ದಿನಕ್ಕೆ 340 ಬಾರಿ [ಗಂಟೆಗೆ 14 ಬಾರಿ] ಲೊಕೇಶನ್  ಮಾಹಿತಿಯನ್ನು ಗೂಗಲ್ ಗೆ ರವಾನಿಸುತ್ತದೆ.

ಪ್ರೈವೆಸಿ ಸೆಟ್ಟಿಂಗನ್ನು ಬದಲಾವಣೆ ಮಾಡಿಕೊಂಡ ಬಳಿಕವೂ  ಗೂಗಲ್  ಮತ್ತು ಐಫೋನ್ ಗಳು ಲೊಕೇಶನ್ ಮಾಹಿತಿಗಳನ್ನು ಸಂಗ್ರಹಿಸಿಡುತ್ತವೆ ಎಂದು ಅಸೋಸಿಯೇಟೆಡ್ ಪ್ರೆಸ್ ನ ತನಿಖೆ ಯಿಂದ ಈ ಹಿಂದೆ ತಿಳಿದುಬಂದಿತ್ತು. 

ಆ ಬಳಿಕ ಕಂಪ್ಯೂಟರ್ ವಿಜ್ಞಾನಿಗಳು ಕೂಡಾ ಆ ಮಾತನ್ನು ಖಚಿತಪಡಿಸಿದ್ದರು. ಅದಾದ ಬಳಿಕ ನ್ಯಾಯಾಲಯದಲ್ಲಿ ಆ ಬಗ್ಗೆ ದೂರನ್ನು ಕೂಡಾ ದಾಖಲಿಸಲಾಗಿತ್ತು.

ಬಳಕೆದಾರರು ಲೊಕೇಶನ್ ಸೇವೆಗಳನ್ನು ಆಫ್ ಮಾಡಿದ ಬಳಿಕ ಅದನ್ನು ಸಂಗ್ರಹಿಸಲಾಗುವುದಿಲ್ಲವೆಂದು ಗೂಗಲ್ ಹೇಳುತ್ತದೆಯಾದರೂ, ಗೂಗಲ್ ಬಳಕೆದಾರರ ಲೊಕೇಶನ್ ಹಿಸ್ಟರಿಯನ್ನು ಸಂಗ್ರಹಿಸಿಡುತ್ತದೆಯೆಂದು ಸ್ಯಾನ್ ಫ್ರಾನ್ಸಿಸ್ಕೋ ಫೆಡರಲ್ ಕೋರ್ಟಿನಲ್ಲಿ ಸಲ್ಲಿಸಲಾದ  ಆ ದೂರಿಯಲ್ಲಿ ಹೇಳಲಾಗಿದೆ.  

click me!