ಹೊಸ ಜನರೇಶನ್‌ಗೆಂದೇ ವಿನ್ಯಾಸಗೊಳಿಸಲಾಗಿರುವ ಎರಡು ಮಾದರಿಯ ಲ್ಯಾಪ್‌ಟಾಪ್‌ಗಳನ್ನು ಆಸೂಸ್ ಕಂಪನಿ ಬಿಡುಗಡೆ ಮಾಡಿದೆ. ಇವುಗಳಲ್ಲಿರುವ ಫೀಚರ್‌ಗಳಿಗೆ ಹೋಲಿಸಿದರೆ ಬೆಲೆ ಅಗ್ಗವೇ ಆಗಿದೆ.
ಅಸೂಸ್ ಕಂಪೆನಿ ವಿಂಡೋಸ್10 ಆವೃತ್ತಿಯ ವಿವೋಬುಕ್ S15 ಹಾಗೂ S14 ಎಂಬ ಎರಡು ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸುತ್ತಿದೆ. ಎಂಟನೇ ಜನರೇಶನ್‌ಗೆಂದು ಸಿದ್ಧಪಡಿಸಿರುವ ಈ ಎರಡು ಲ್ಯಾಪ್‌ಟಾಪ್‌ಗಳಲ್ಲಿ ವಿವೋ S15 ಬೆಲೆ ₹54990. S15 ವಿವೋ ಬುಕ್ ಬೆಲೆ 69990ರು.
ನವೆಂಬರ್ 15ರ ಬಳಿಕ ಇವು ಅಸೂಸ್ ಸ್ಟೋರ್ಗಳಲ್ಲಿ ಸಿಗಲಿವೆ. ಸದ್ಯಕ್ಕೀಗ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿವೆ.
ಅಷ್ಟಕ್ಕೂ ಇವುಗಳಲ್ಲಿರುವ ಫೀಚರ್‌ಗಳಿಗೆ ಹೋಲಿಸಿದರೆ ಈ ಬೆಲೆ ಅಗ್ಗವೇ. ಈ ಬುಕ್‌ನ ಮೊದಲ ಅನುಕೂಲ ಎಂದರೆ ಇವು ಬಹಳ ಹಗುರ. ಟ್ರಾವೆಲಿಂಗ್, ಟ್ರೆಕ್ಕಿಂಗ್ನಲ್ಲೂ ಕೊಂಡೊಯ್ಯಬಹುದು. ಮತ್ತೊಂದು ವಿಶೇಷತೆ ಇದರ ಲುಕ್.
ಐದು ಬಣ್ಣಗಳ ಆಯ್ಕೆ ಇರುವ ಈ ಲ್ಯಾಪ್ ಬಹಳ ಕ್ಯೂಟ್ ಅಂತ ವಿಶ್ಲೇಷಕರು ಹೇಳುತ್ತಾರೆ. ಐಸೈಕಲ್ ಗೋಲ್ಡ್, ಕಡುಹಸಿರು, ಸಿಲ್ವರ್ ಬ್ಲ್ಯೂ, ಸ್ಟಾರ್ ಗ್ರೇ ಮತ್ತು ಗನ್ ಮೆಟಲ್ ಬಣ್ಣಗಳಲ್ಲಿ ಈ ಲ್ಯಾಪ್ಗಳು ಲಭ್ಯ.
ಟೈಪ್ ಮಾಡಲು ಸಲೀಸಾಗುವಂಥ ಕೀಬೋರ್ಡ್ ವಿನ್ಯಾಸವಿರೋ ಕಾರಣ ಇಡೀ ದಿನ ಈ ಲ್ಯಾಪ್ಟಾಪ್ನಲ್ಲಿ ಕೆಲಸ ಮಾಡಿದರೂ ಸುಸ್ತಾಗದು.
ಲ್ಯಾಪ್‌ಟಾಪ್‌ನ ಮೂರು ಬದಿಗಳಲ್ಲಿ ನ್ಯಾನೋ ಎಡ್ಜ್ ಡಿಸೈನ್ ಇದೆ. ಸ್ಕ್ರೀನ್ ಟು ಬಾಡಿ ರೇಶ್ಯೂ S15ನಲ್ಲಿ 86 ಶೇ.ದಷ್ಟಿದ್ದರೆ, S14ನಲ್ಲಿ ಶೇ.84ರಷ್ಟಿದೆ. ಇಂಟೆಲ್ಕೋರ್ i7 ಪ್ರೊಸೆಸರ್ ಹೊಂದಿದೆ.