ಬಿಎಸ್ ಎನ್ ಎಲ್ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್

By Web Desk  |  First Published Aug 4, 2018, 9:58 AM IST

ಬಿಎಸ್ ಎನ್ ಎಲ್ ಗ್ರಾಹಕರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್. ಶ್ರಾವಣ ಮಾಸದ ಈ ಸಂದರ್ಭದಲ್ಲಿ ಬಿಎಸ್ ಎನ್ ಎಲ್ ನಿಮಗೆ ನೀಡುತ್ತಿದೆ ಅತ್ಯುತ್ತಮ ಆಫರ್. ಶಿವಮೊಗ್ಗ ಜಿಲ್ಲೆಯ ಗ್ರಾಹಕರು ಇದರ ಉಪಯೋಗ ಪಡೆದುಕೊಳ್ಳಬಹುದು. 


ಶಿವಮೊಗ್ಗ: ಭಾರತ ಸಂಚಾರ ನಿಗಮವು ಆಗಸ್ಟ್ ತಿಂಗಳಾದ್ಯಂತ ಶ್ರಾವಣ ಸಂಭ್ರಮವನ್ನು ಆಚರಿಸುತ್ತಿದ್ದು, ಸಾರ್ವಜನಿಕರಿಗೆ ಅತ್ಯಗತ್ಯವಾದ ಸ್ಥಿರ ದೂರವಾಣಿ, ಬ್ರಾಡ್‌ಬ್ಯಾಂಡ್, ಎಫ್‌ಟಿಟಿಎಚ್, ಮೊಬೈಲ್ ಸಿಮ್ ಮುಂತಾದ ಸಂಪರ್ಕ ಸೇವೆಯನ್ನು ಅತಿ ಕನಿಷ್ಠ ಬೆಲೆಯಲ್ಲಿ ಜಿಲ್ಲೆಯಾದ್ಯಂತ ತನ್ನ ಗ್ರಾಹಕ ಸೇವಾ ಕೇಂದ್ರಗಳು, ಬಿ.ಎಸ್.ಎನ್.ಎಲ್ ಫ್ರಾಂಚೈಸಿಗಳು ಮತ್ತು ಡಿ. ಎಸ್.ಎ.ಗಳ ಮೂಲಕ ಒದಗಿಸುತ್ತಿದೆ. ಸಾರ್ವಜನಿಕರು ಈ ಯೋಜನೆಗಳ ಪ್ರಯೋಜನವನ್ನು ಸದುಪಯೋಗ ಪಡೆದುಕೊಳ್ಳುವಂತೆ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಮಾಹಿತಿಗೆ ವೆಬ್‌ಸೈಟ್  www. karnataka.bsnl.co.in <http://www.karnataka.bsnl.co. in  08182&251900, 231365, 261252

Tap to resize

Latest Videos

click me!