Top Searched Personalities 2021: ಗೂಗಲ್‌ ಸರ್ಚ್ ಟಾಪ್ 10ನಲ್ಲಿ ರಾಜ್‌ ಕುಂದ್ರಾ, ಆರ್ಯನ್‌ ಖಾನ್!

By Suvarna News  |  First Published Dec 27, 2021, 1:58 PM IST

ಗೂಗಲ್ ತನ್ನ 'ಇಯರ್ ಇನ್ ಸರ್ಚ್' ವರದಿಯಲ್ಲಿ ಆರ್ಯನ್ ಖಾನ್, ಶೆಹನಾಜ್ ಗಿಲ್ ಮತ್ತು ರಾಜ್ ಕುಂದ್ರಾ ಈ ವರ್ಷ ಭಾರತದಲ್ಲಿನ ಅಗ್ರ ಐದು ಸೆಲೆಬ್ರಿಟಿ ಹುಡುಕಾಟಗಳಲ್ಲಿ ಸೇರಿದ್ದಾರೆ ಎಂದು ಬಹಿರಂಗಪಡಿಸಿದೆ.


Tech desk: ಗೂಗಲ್ ತನ್ನ 'ಇಯರ್ ಇನ್ ಸರ್ಚ್' ಪಟ್ಟಿಯನ್ನು ಇತ್ತೀಚೆಗೆ ಹಂಚಿಕೊಂಡಿತ್ತು. ಭಾರತದಲ್ಲಿ 2021ರಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳ ಪಟ್ಟಿ ಬಿಡುಗಡೆ ಮಾಡಿತ್ತು. 2021ರಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳ ಪಟ್ಟಿಯಲ್ಲಿ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಮತ್ತು ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರು  ಕಾಣಿಸಿಕೊಂಡಿದ್ದಾರೆ. ಅವರಿಬ್ಬರೂ ಈ ವರ್ಷ ಹಲವು ವಿವಾದಗಳನ್ನು ಸೃಷ್ಟಿಸಿ ಕೋರ್ಟ್‌ ಮೆಟ್ಟಿಲೇರಿದ್ದರು ಹಾಗೂ ದೇಶಾದ್ಯಂತರ ಸಾಕಷ್ಟು ಸುದ್ದಿ ಮಾಡಿದ್ದರು.

ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಾಡಿದ ಪಟ್ಟಿಯಲ್ಲಿ ಒಲಂಪಿಕ್ಸ್‌ ಹಿರೋ, ಚಿನ್ನದ ಹುಡುಗ ನೀರಜ್‌ ಚೋಪ್ರಾ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ. ಡ್ರಗ್‌ ಜಾಲದಲ್ಲಿ ಸುದ್ದಿಯಾಗಿದ್ದ ಆರ್ಯನ್ ಖಾನ್ ಎರಡನೇ ಸ್ಥಾನದಲ್ಲಿದ್ದರೆ, ಹಿಂದಿ ಬಿಗ್‌ ಸ್ಪರ್ಧಿ ಹಾಗು ಗಾಯಕಿ ಶೆಹನಾಜ್ ಗಿಲ್ ಮೂರನೇ ಸ್ಥಾನದಲ್ಲಿದ್ದಾರೆ. ಶಿಲ್ಪಾ ಪತಿ ರಾಜ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ವಿಕ್ಕಿ ಕೌಶಲ್ ಆರನೇ ಸ್ಥಾನದಲ್ಲಿದ್ದರೆ, ವರುಣ್ ಧವನ್ ಪತ್ನಿ ನತಾಶಾ ದಲಾಲ್ ಹತ್ತನೇ ಸ್ಥಾನದಲ್ಲಿದ್ದಾರೆ.

Tap to resize

Latest Videos

undefined

ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಟಾಪ್‌ 10 ವ್ಯಕ್ತಿಗಳ ಪಟ್ಟಿ ಇಲ್ಲಿದೆ

1. ನೀರಜ್ ಚೋಪ್ರಾ

2. ಆರ್ಯನ್ ಖಾನ್

3. ಶೆಹನಾಜ್ ಗಿಲ್

4. ರಾಜ್ ಕುಂದ್ರಾ

5. ಎಲೋನ್ ಮಸ್ಕ್

6. ವಿಕ್ಕಿ ಕೌಶಲ್

7. ಪಿವಿ ಸಿಂಧು

8. ಬಜರಂಗ್ ಪುನಿಯಾ

9. ಸುಶೀಲ್ ಕುಮಾರ್

10. ನತಾಶಾ ದಲಾಲ್

ಚಿನ್ನದ ಹುಡುಗ ನೀರಜ್‌ ಚೋಪ್ರಾ!

ಟೋಕಿಯೋ ಒಲಿಂಪಿಕ್ಸ್‌ ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ಐತಿಹಾಸಿಕ ಚಿನ್ನ ಗೆದ್ದ ಬಳಿಕ ಭಾರತದ ನೀರಜ್‌ ಚೋಪ್ರಾ ವಿಶ್ವ ರ‍್ಯಾಂಕಿಂಗ್‌ನಲ್ಲಿ 2ನೇ ಸ್ಥಾನಕ್ಕೆ ಏರಿದ್ದರು. 23 ವರ್ಷದ ನೀರಜ್‌ ರ‍್ಯಾಂಕಿಂಗ್‌ನಲ್ಲಿ 14 ಸ್ಥಾನಗಳ ಏರಿಕೆ ಕಂಡಿದ್ದು, ಮೊದಲ ಸ್ಥಾನದಲ್ಲಿರುವ ಜರ್ಮನಿಯ ಜೊಹಾನಸ್‌ ವೆಟ್ಟರ್‌ಗಿಂತ ಕೇವಲ 81 ಅಂಕಗಳಿಂದ ಹಿಂದಿದ್ದಾರೆ. ವೆಟ್ಟರ್‌ 1396 ಅಂಕಗಳನ್ನು ಹೊಂದಿದ್ದರೆ, ನೀರಜ್‌ 1315 ಅಂಕಗಳನ್ನು ಪಡೆದಿದ್ದಾರೆ. ವೆಟ್ಟರ್‌ರಿಂದ ತೀವ್ರ ಪೈಪೋಟಿ ನಿರೀಕ್ಷಿಸಿದ್ದ ನೀರಜ್‌ ಒಲಿಂಪಿಕ್ಸ್‌ ಫೈನಲ್‌ನಲ್ಲಿ 87.57 ಮೀ. ದೂರಕ್ಕೆ ಜಾವೆಲಿನ್‌ ಎಸೆದು ಚಿನ್ನ ಗೆದ್ದರೆ, ವೆಟ್ಟರ್‌ 9ನೇ ಸ್ಥಾನ ಪಡೆಯಲಷ್ಟೇ ಸಫಲರಾಗಿದ್ದರು.

ಪ್ರತಿಷ್ಠಿತ ಟೈಮ್‌ ಮ್ಯಾಗಝೀನ್ ವರ್ಷದ ವ್ಯಕ್ತಿ!

ಸದಾ ಒಂದಿಲ್ಲಲ್ಲೊಂದು ವಿಷಯಕ್ಕೆ ಸುದ್ದಿಯಲ್ಲಿರುವ ಎಲಾನ್‌ ಮಸ್ಕ ವಿಶ್ವದ ನಂ.1 ಶ್ರೀಮಂತ ಖ್ಯಾತಿಯ ಟೆಸ್ಲಾ (Tesla) ಕಂಪನಿಯ ಸಂಸ್ಥಾಪಕ ಸಿಇಒ ಎಲಾನ್‌ ಮಸ್ಕ್‌ (Elon Musk) ಅವರು ಅಮೆರಿಕದ ಪ್ರತಿಷ್ಠಿತ ‘ಟೈಮ್‌’ ನಿಯತಕಾಲಿಕೆಯ ವರ್ಷದ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ . ಮಸ್ಕ್‌ ಅವರ ನೇತೃತ್ವದ ಎಲೆಕ್ಟ್ರಿಕ್‌ ಕಾರು ಕಂಪನಿ ವಿಶ್ವದಲ್ಲೇ ಅತ್ಯಮೂಲ್ಯದ ಕಾರು ಕಂಪನಿ ಎಂಬ ಕೀರ್ತಿಗೆ ಭಾಜನವಾಗಿತ್ತು. ಪ್ರಪಂಚದಲ್ಲಿರುವ  ಸವಾಲುಗಳು ಮತ್ತು ಬಿಕ್ಕಟ್ಟುಗಳಿಗೆ ಉತ್ತಮ ಪರಿಹಾರಗಳನ್ನು ಹುಡುಕುವುದರ ಜತೆಗ ಸಮಾಜದಲ್ಲಿ ಹೆಚ್ಚಿನ ಧೈರ್ಯಶಾಲಿ ಪ್ರೊಜೆಕ್ಟ್‌ಗಳನ್ನು ಕೈಗೆತ್ತಿಕೊಳ್ಳುವ ಹಿನ್ನೆಲೆಯಲ್ಲಿ ಮಸ್ಕ್‌ ಅವರನ್ನು ಟೈಮ್‌-2021ರ ವರ್ಷದ ವ್ಯಕ್ತಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಟೈಮ್‌ ನಿಯತಕಾಲಿಕೆಯ ಪ್ರಧಾನ ಸಂಪಾದಕ ಎಡ್ವರ್ಡ್‌ ಫೆಲ್ಸೆಂಥಲ್‌ (Edward Felsenthal) ಅವರು ತಿಳಿಸಿದ್ದರು.

ಆರ್ಯನ್‌ಗೆ ಬಾಂಬೆ ಹೈಕೋರ್ಟ್ ಜಾಮೀನು!

ಅಕ್ಟೋಬರ್‌ನಲ್ಲಿ ಮುಂಬೈ ಕರಾವಳಿಯಲ್ಲಿ ಕ್ರೂಸ್ ಹಡಗಿನಲ್ಲಿ ರೇವ್ ಪಾರ್ಟಿಯ ಮೇಲೆ ದಾಳಿ ನಡೆಸಿದ ನಂತರ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಆರ್ಯನ್‌ನನ್ನು ಬಂಧಿಸಿತ್ತು. ಆರ್ಥರ್ ರೋಡ್ ಜೈಲಿನಲ್ಲಿ ಮೂರು ವಾರಗಳಿಗಿಂತ ಹೆಚ್ಚು ಕಾಲ ಕಳೆದ ನಂತರ, ಅವರಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿತು.

ಹಾಡಿನ ಮೂಲಕ ಸಿದ್ಧಾರ್ಥ್‌ಗೆ  ಶ್ರದ್ಧಾಂಜಲಿ!

ಶೆಹನಾಜ್ ಈ ವರ್ಷ ಭುಲಾ ದೂಂಗಾ, ಕುರ್ತಾ ಪೈಜಾಮ ಮತ್ತು ಶೋನಾ ಶೋನಾ ಸೇರಿದಂತೆ ಹಲವಾರು ಸಂಗೀತ ವೀಡಿಯೊಗಳಲ್ಲಿ ಕಾಣಿಸಿಕೊಂಡರು. ಅವಳು ಪಂಜಾಬಿ ಚಿತ್ರ ಹೊನ್ಸ್ಲಾ ರಖ್ (Honsla Rakh) ನಲ್ಲಿ ದಿಲ್ಜಿತ್ ದೋಸಾಂಜ್ ಜೊತೆ ನಟಿಸಿದ್ದಾರೆ. ಸೆಪ್ಟೆಂಬರ್‌ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ತನ್ನ  ಗೆಳೆಯ ಸಿದ್ಧಾರ್ಥ್ ಶುಕ್ಲಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ವೀಡಿಯೊವನ್ನು ಸಹ ಅವರು ಬಿಡುಗಡೆ ಮಾಡಿದ್ದಾರೆ.

ಜಾಮೀನಿನ ಮೇಲೆ ಹೋರಗಿರುವ ಶಿಲ್ಪಾ ಪತಿ!

ಅಶ್ಲೀಳ ವೀಡಿಯೊಗಳ ನಿರ್ಮಾಣ ಮತ್ತು ಸ್ಟ್ರೀಮಿಂಗ್‌ನಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ರಾಜ್ ಅವರನ್ನು ಜುಲೈನಲ್ಲಿ ಬಂಧಿಸಲಾಯಿತು. ಭಾರತೀಯ ದಂಡ ಸಂಹಿತೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಜಾಮೀನಿನ ಮೇಲೆ ರಾಜ್  ಹೊರಗಿದ್ದಾರೆ.

ವಿಕ್ಕಿ-ಕತ್ರಿನಾ ಟ್ರೆಂಡಿಂಗ್!

ವೃತ್ತಿಪರ ಹಾಗೂ ವೈಯಕ್ತಿಕ ಕಾರಣಗಳಿಗಾಗಿ ವಿಕ್ಕಿ ಸುದ್ದಿಯಲ್ಲಿದ್ದರು. ಅವರು ಸರ್ದಾರ್ ಉದಾಮ್ನಲ್ಲಿ (Sardar Udham) ಕಾಣಿಸಿಕೊಂಡರು ಮತ್ತು ಭೂಮಿ ಪೆಡ್ನೇಕರ್ ಮತ್ತು ಕಿಯಾರಾ ಅಡ್ವಾಣಿ  ಜತೆ ಅವರ ಮುಂದಿನ ಯೋಜನೆಯಾದ ಗೋವಿಂದ ನಾಮ್ ಮೇರಾ (Govinda Naam Mera) ಕೂಡ ಘೋಷಿಸಿದ್ದಾರೆ. ಅವರು ರಾಜಸ್ಥಾನದ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ  ಸಮಾರಂಭದಲ್ಲಿ ಕತ್ರಿನಾ ಕೈಫ್ ಅವರನ್ನು ವಿವಾಹವಾದರು. ವಿವಾಹದ ಮೊದಲು, ಅವರ ನಿಶ್ಚಿತಾರ್ಥದ ವದಂತಿಗಳು ಆನ್‌ಲೈನ್‌ನಲ್ಲಿ ಹಲವಾರು ಬಾರಿ ಟ್ರೆಂಡ್ ಆಗಿದ್ದವು.‌ ಮದುವೆ ಬಳಿಕ ಮದುವೆ ಕಾರ್ಯಕ್ರಮದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿ ಮಾಡಿವೆ.

ವರುಣ್ ಜೊತೆ  ನತಾಶಾ  ವಿವಾಹ!

ಹಲವಾರು ವರ್ಷಗಳಿಂದ ವರುಣ್ ಜೊತೆ ಸಂಬಂಧದಲ್ಲಿದ್ದ ನತಾಶಾ ಈ ವರ್ಷದ ಫೆಬ್ರವರಿಯಲ್ಲಿ ವರುಣ್ ಜೊತೆ ವಿವಾಹವಾದರು. ಅವರು ಅಲಿಬಾಗ್‌ನಲ್ಲಿ  ಸಮಾರಂಭದಲ್ಲಿ ವಿವಾಹವಾದರು, ಕೇವಲ ಆಪ್ತ ಸ್ನೇಹಿತರು ಮತ್ತು ಕುಟುಂಬದವರು ಮಾತ್ರ ಹಾಜರಿದ್ದರು.

ಇದನ್ನೂ ಓದಿ:

1) Google Most Searched: ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ನಟರ ಪೈಕಿ ನಮ್ಮ ಪುನೀತ್ ರಾಜ್‌ಕುಮಾರ್!

2) Best Smartphones 2021: ಈ ವರ್ಷದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು ಯಾವುವು ಗೊತ್ತಾ? ಇಲ್ಲಿದೆ ಪಟ್ಟಿ

3) Most Admired Women 2021- ಏಂಜಲೀನಾ ಜೋಲಿ ಜೊತೆ ಸ್ಥಾನ ಪಡೆದ ಐಶ್ವರ್ಯಾ, ಪ್ರಿಯಾಂಕಾ!

click me!