
ಬೆಂಗಳೂರು (ಆ.21): ಆಪಲ್ ಭಾರತದಲ್ಲಿ ತನ್ನ ಮೂರನೇ ಅಧಿಕೃತ ರಿಟೇಲ್ ಸ್ಟೋರ್ ಆರಂಭವನ್ನು ಅಧಿಕೃತವಾಗಿ ಘೋಷಣೆ ಮಾಡಿದೆ. ಆಪಲ್ ಹೆಬ್ಬಾಳವನ್ನು ಬೆಂಗಳೂರಿನಲ್ಲಿ ಪ್ರಾರಂಭ ಮಾಡುತ್ತಿರುವುದಾಗಿ ತಿಳಿಸಿದೆ. ಈ ಸ್ಟೋರ್ 2025ರ ಸೆಪ್ಟೆಂಬರ್ 2 ರಂದು ಬಳ್ಳಾರಿ ರಸ್ತೆಯಲ್ಲಿರುವ ಬ್ಯಾಟರಾಯನಪುರದ ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ತೆರೆಯಲಿದೆ. ಇದು ಮುಂಬೈ (ಬಿಕೆಸಿ) ಮತ್ತು ನವದೆಹಲಿ (ಸಾಕೇತ್) ನಲ್ಲಿರುವ ಆಪಲ್‌ನ ಈಗಾಗಲೇ ಇರುವ ಸ್ಟೋರ್‌ಗಳ ಸಾಲಿಗೆ ಹೊಸ ಸೇರ್ಪಡೆಯಾಗಿದೆ.
ಆಪಲ್ ಹೆಬ್ಬಾಳವು ಆಪಲ್‌ನ ಇತರ ಸ್ಟೋರ್‌ಗಳಂತೆಯೇ ಪೂರ್ಣ ಶ್ರೇಣಿಯ ಸೇವೆಗಳನ್ನು ನೀಡುತ್ತದೆ. ಗ್ರಾಹಕರು ಡಿವೈಸ್‌ಗಳನ್ನು ಆಯ್ಕೆ ಮಾಡುವ ಮತ್ತು ವೈಶಿಷ್ಟ್ಯಗಳನ್ನು ಅನ್ವೇಷಿಸುವ ಕುರಿತು ಮಾರ್ಗದರ್ಶನಕ್ಕಾಗಿ ಆಪಲ್ ತಜ್ಞರನ್ನು ಸಂಪರ್ಕಿಸಬಹುದು. ಈ ಸ್ಟೋರ್ 'ಟುಡೇ ಅಟ್ ಆಪಲ್' ಅವಧಿಗಳನ್ನು ಸಹ ಆಯೋಜಿಸುತ್ತದೆ, ಇದನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು. ಈ ಅವಧಿಗಳು ಬಳಕೆದಾರರಿಗೆ ಆಪಲ್ ಉತ್ಪನ್ನಗಳೊಂದಿಗೆ ಪ್ರಾಯೋಗಿಕ ಅನುಭವವನ್ನು ಪಡೆಯಲು, ಸಾಫ್ಟ್‌ವೇರ್ ಪರಿಕರಗಳನ್ನು ಕಲಿಯಲು ಮತ್ತು ಸೃಜನಶೀಲ ಯೋಜನೆಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ.
ಹೊಸ ಆಪಲ್ ಡಿವೈಸ್‌ಗಳನ್ನು ಖರೀದಿಸುವ ಗ್ರಾಹಕರು ಉಚಿತ ಇಂಗ್ರಾವಿಂಗ್ ಸರ್ವೀಸ್ ಲಾಭವನ್ನು ಪಡೆಯಬಹುದು. ಈ ಸ್ಟೋರ್‌ಗಳು ಟ್ರಬಲ್ ಶೂಟಿಂಗ್, ದುರಸ್ತಿ ಮತ್ತು ತಾಂತ್ರಿಕ ಸಹಾಯಕ್ಕಾಗಿ ಜೀನಿಯಸ್ ಬಾರ್ ಬೆಂಬಲವನ್ನು ಸಹ ಒದಗಿಸುತ್ತದೆ, ಗ್ರಾಹಕರು ತಮ್ಮ ಸಾಧನಗಳೊಂದಿಗೆ ಸಮಗ್ರ ಸಹಾಯವನ್ನು ಪಡೆಯುವುದನ್ನು ಖಚಿತಪಡಿಸುತ್ತದೆ.
ಆಪಲ್ ಹೆಬ್ಬಾಳವು ಡೆಲಿವರಿ ಮತ್ತು ಪಿಕಪ್ ಸೇವೆಗಳನ್ನು ಬೆಂಬಲಿಸುತ್ತದೆ, ಗ್ರಾಹಕರು ಆಪಲ್ ಇಂಡಿಯಾ ಆನ್‌ಲೈನ್ ಸ್ಟೋರ್ ಮೂಲಕ ಆರ್ಡರ್‌ಗಳನ್ನು ನೀಡಲು ಮತ್ತು ಅವುಗಳನ್ನು ಸ್ಟೋರ್‌ಗಳಲ್ಲಿ ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ. ಈ ಸಂಯೋಜನೆಯು ವೈಯಕ್ತಿಕ ಪಿಕಪ್‌ನ ಫ್ಲೆಕ್ಸಿಬಿಲಿಯೊಂದಿಗೆ ಅನುಕೂಲಕರ ಆನ್‌ಲೈನ್ ಶಾಪಿಂಗ್‌ಗೆ ಅನುವು ಮಾಡಿಕೊಡುತ್ತದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.