ಸರ್ವಾಂತರ್ಯಾಮಿ ಆಗಿರುವ ಗೂಗಲ್ ಬದಲಾಗಿ ಮತ್ತೊಂದು ಸರ್ಚ್ ಇಂಜಿನ್ ಬರುತ್ತಾ. ಇಲ್ಲೆಲ್ಲಾ ಅದನ್ನೇ ಬಳಸಬೇಕಾಗುತ್ತಾ?
ನವದೆಹಲಿ (ಅ.30): ಗೂಗಲ್ ಕಂಪನಿಗೆ ಸಡ್ಡು ಹೊಡೆಯಲು ತನ್ನದೇ ಆದ ಸರ್ಚ್ ಎಂಜಿನ್ ಅಭಿವೃದ್ಧಿಪಡಿಸಲು ಆ್ಯಪಲ್ ಕಂಪನಿ ನಿರ್ಧರಿಸಿದ್ದು, ಇನ್ನುಮುಂದೆ ಆ್ಯಪಲ್‌ನ ಎಲ್ಲಾ ಉತ್ಪನ್ನಗಳಲ್ಲಿ ಗೂಗಲ್ ಬದಲು ಆ್ಯಪಲ್ ಸರ್ಚ್ ಎಂಜಿನ್ನನ್ನೇ ಬಳಕೆ ಮಾಡಬೇಕಾಗಿ ಬರುವ ಸಾಧ್ಯತೆಯಿದೆ.
ಸದ್ಯ ಗೂಗಲ್ ಕಂಪನಿಯು ತನ್ನ ಸರ್ಚ್ ಎಂಜಿನ್ನೇ ಆ್ಯಪಲ್ ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್ ಫೋನ್ ಹಾಗೂ ಟ್ಯಾಬ್‌ಗಳಲ್ಲಿ ಬಳಕೆಯಾಗಲಿ ಎಂದು ಪ್ರತಿ ವರ್ಷ ಆ್ಯಪಲ್ ಕಂಪನಿಗೆ 10 ಬಿಲಿಯನ್ ಡಾಲರ್ (ಸುಮಾರು 75 ಸಾವಿರ ಕೋಟಿ ರು.) ನೀಡುತ್ತದೆ. ಈ ಒಪ್ಪಂದ ಮುಕ್ತಾಯವಾಗುವ ಸಮಯ ಸಮೀಪಿಸಿದೆ. ಜೊತೆಗೆ, ಅಮೆರಿಕ ಸರ್ಕಾರವು ಈ ಒಪ್ಪಂದ ಕಾನೂನುಬಾಹಿರವಾಗಿರುವ ಬಗ್ಗೆ ತನಿಖೆ ನಡೆಸುತ್ತಿದೆ. ಹೀಗಾಗಿ ತನ್ನದೇ ಸರ್ಚ್ ಎಂಜಿನ್ ರೂಪಿಸಿ ಬಿಡುಗಡೆ ಮಾಡಲು ಆ್ಯಪಲ್ ಕಂಪನಿ ನಿರ್ಧರಿಸಿದೆ ಎಂದು ಹೇಳಲಾಗಿದೆ.
undefined
ಕೇವಲ 1,999 ರೂಪಾಯಿಗೆ ಬೋಟ್ ಸ್ಟಾರ್ಮ್ ಸ್ಮಾರ್ಟ್ ವಾಚ್! ...
ಈಗಾಗಲೇ ಆ್ಯಪಲ್ ಬಳಿ ಸ್ವಂತ ಸರ್ಚ್ ಎಂಜಿನ್ ಇದೆ. ಆದರೆ ಅದನ್ನು ವ್ಯಾಪಕವಾಗಿ ಬಳಸುವಂತೆ ಮಾಡಲು ಆ್ಯಪಲ್ ಕಂಪನಿಯೇ ಪ್ರಯತ್ನಿಸುತ್ತಿಲ್ಲ. ಇನ್ನು, ಜಾಹೀರಾತಿನಿಂದ ಹಣ ಗಳಿಸುವ ಗೂಗಲ್‌ನ ನೀತಿ ಆ್ಯಪಲ್ ಕಂಪನಿಯ ನೀತಿಗೆ ವಿರುದ್ಧವಾಗಿದೆ. ಆದರೆ, ಈಗ ತನ್ನದೇ ಸರ್ಚ್ ಎಂಜಿನ್ ರೂಪಿಸಿದರೆ ಗೂಗಲ್‌ನಿಂದ ಬರುತ್ತಿದ್ದ ದೊಡ್ಡ ಮೊತ್ತದ ಆದಾಯಕ್ಕೆ ಪ್ರತಿಯಾಗಿ ಆ್ಯಪಲ್ ಕಂಪನಿ ಕೂಡ ಜಾಹೀರಾತಿನಿಂದ ಹಣ ಗಳಿಸಲು ಆರಂಭಿಸುತ್ತದೆಯೇ ಎಂಬ ಪ್ರಶ್ನೆ ಕುತೂಹಲ ಮೂಡಿಸಿದೆ.