‘ಆ್ಯಂಡ್ರಾಯ್ಡ್‌’ಗೆ ಇನ್ನು ಸಿಹಿ ತಿನಿಸಿನ ಹೆಸರಿಲ್ಲ!

By Web Desk  |  First Published Aug 23, 2019, 9:07 AM IST

ಗೂಗಲ್‌ ಕಂಪನಿಯ ಮೊಬೈಲ್‌ ಆಪರೇಟಿಂಗ್‌ ಸಿಸ್ಟಂ ‘ಆ್ಯಂಡ್ರಾಯ್ಡ್‌’ ಇನ್ನು ಮುಂದೆ ಸಿಹಿ ತಿನಿಸಿನ ಹೆಸರನ್ನು ಹೊಂದಿರುವುದಿಲ್ಲ. ಸದ್ಯದಲ್ಲೇ ಬಿಡುಗಡೆಯಾಗಲಿರುವ ನೂತನ ಆ್ಯಂಡ್ರಾಯ್ಡ್‌ ವರ್ಷನ್‌ಗೆ ‘ಕ್ಯೂ’ ಹೆಸರಿನಿಂದ ಆರಂಭವಾಗುವ ತಿನಿಸಿನ ಹೆಸರಿನ ಬದಲಾಗಿ ‘ಆ್ಯಂಡ್ರಾಯ್ಡ್‌ 10’ ಎಂದಷ್ಟೇ ನಾಮಕರಣ ಮಾಡಲು ಗೂಗಲ್‌ ನಿರ್ಧರಿಸಿದೆ.


ನವದೆಹಲಿ (ಆ. 23): ಗೂಗಲ್‌ ಕಂಪನಿಯ ಮೊಬೈಲ್‌ ಆಪರೇಟಿಂಗ್‌ ಸಿಸ್ಟಂ ‘ಆ್ಯಂಡ್ರಾಯ್ಡ್‌’ ಇನ್ನು ಮುಂದೆ ಸಿಹಿ ತಿನಿಸಿನ ಹೆಸರನ್ನು ಹೊಂದಿರುವುದಿಲ್ಲ. ಸದ್ಯದಲ್ಲೇ ಬಿಡುಗಡೆಯಾಗಲಿರುವ ನೂತನ ಆ್ಯಂಡ್ರಾಯ್ಡ್‌ ವರ್ಷನ್‌ಗೆ ‘ಕ್ಯೂ’ ಹೆಸರಿನಿಂದ ಆರಂಭವಾಗುವ ತಿನಿಸಿನ ಹೆಸರಿನ ಬದಲಾಗಿ ‘ಆ್ಯಂಡ್ರಾಯ್ಡ್‌ 10’ ಎಂದಷ್ಟೇ ನಾಮಕರಣ ಮಾಡಲು ಗೂಗಲ್‌ ನಿರ್ಧರಿಸಿದೆ.

ಪ್ರತಿ ಬಾರಿ ಆ್ಯಂಡ್ರಾಯ್ಡ್‌ ವರ್ಷನ್‌ ಸುಧಾರಣೆ ಮಾಡಿದಾಗ ಅದಕ್ಕೆ ಇಂಗ್ಲಿಷ್‌ ವರ್ಣಮಾಲೆಯ ಅಕ್ಷರಗಳಿಂದ ಆರಂಭವಾಗುವ ಹೆಸರನ್ನು ನಾಮಕರಣ ಮಾಡಿಕೊಂಡು ಗೂಗಲ್‌ ಬಂದಿತ್ತು. 2009ರ ಏಪ್ರಿಲ್‌ 27ರಂದು ಬಿಡುಗಡೆಯಾದ ‘ಸಿ’ ಹೆಸರಿನ ಆವೃತ್ತಿಗೆ ‘ಕಪ್‌ಕೇಕ್‌’ ಎಂಬ ಹೆಸರಿಟ್ಟಿತ್ತು. ಆನಂತರ ಬಿಡುಗಡೆಯಾದ ಆವೃತ್ತಿಗಳಿಗೆ ವರ್ಣಮಾಲೆಯ ಅಕ್ಷರಗಳಿಗೆ ಅನುಗುಣವಾಗಿ ಸಿಹಿತಿನಿಸಿನ ಹೆಸರನ್ನು ನಾಮಕರಣ ಮಾಡಿತ್ತು.

Tap to resize

Latest Videos

ಕಳೆದ ವರ್ಷ ಬಿಡುಗಡೆಯಾದ ಆ್ಯಂಡ್ರಾಯ್ಡ್‌ ಆವೃತ್ತಿಗೆ ‘ಪೈ’ ಎಂಬ ಹೆಸರಿಟ್ಟಿತ್ತು. ಈ ವರ್ಷ ಬಿಡುಗಡೆಯಾಗುವ ವರ್ಷನ್‌ಗೆ ‘ಕ್ಯೂ’ನಿಂದ ಹೆಸರನ್ನಿಡಬೇಕಿತ್ತು. ಯಾವ ಹೆಸರನ್ನು ಗೂಗಲ್‌ ಆರಿಸಲಿದೆ ಎಂದು ಜನ ನಿರೀಕ್ಷೆಯಲ್ಲಿರುವಾಗಲೇ ಹೆಸರಿನ ಬದಲು ನಂಬರ್‌ಗೆ ಕಂಪನಿ ಮೊರೆ ಹೋಗಿದೆ.

ಆ್ಯಂಡ್ರಾಯ್ಡ್‌ಗೆ ನಾಮಕರಣ ಮಾಡಲಾದ ಹಲವು ಸಿಹಿ ತಿನಿಸುಗಳು ಜಗತ್ತಿನ ಜನರಿಗೆ ಅರ್ಥವಾಗದ ಕಾರಣ, ಸಂಖ್ಯೆಯನ್ನು ಸುಲಭವಾಗಿ ಗ್ರಹಿಸಬಹುದಾದ ಕಾರಣ ಈ ಬದಲಾವಣೆ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ. ಅಲ್ಲದೆ ಲಾಂಛನವನ್ನೂ ಬದಲಿಸಿದೆ.

click me!