ಕೇವಲ 1,399 ರೂಪಾಯಿಗೆ ಏರ್'ಟೆಲ್ ಸ್ಮಾರ್ಟ್'ಫೋನ್

By Suvarna Web DeskFirst Published Oct 11, 2017, 5:17 PM IST
Highlights

ಕಾರ್ಬನ್ ಎ40 ಸ್ಮಾರ್ಟ್'ಫೋನ್'ನ ಜೊತೆ ಏರ್'ಟೆಲ್'ನ ವಿವಿಧ ಆಫರ್'ಗಳು ಒದಗಿ ಬರಲಿವೆ. 18 ತಿಂಗಳ ಕಾಲ ಪ್ರತೀ ತಿಂಗಳು 169 ರೂಪಾಯಿ ರೀಚಾರ್ಜ್ ಮಾಡಿಸಿದರೆ 500 ರೂಪಾಯಿ ರೀಫಂಡ್ ಆಗುತ್ತದೆ. ಗ್ರಾಹಕ ಇನ್ನೂ 18 ತಿಂಗಳು 169 ರೂ ರೀಚಾರ್ಜ್ ಮಾಡಿದರೆ ಮತ್ತೆ 1 ಸಾವಿರ ರೂಪಾಯಿ ರೀಫಂಡ್ ಆಗುತ್ತದೆ. ಅಲ್ಲಿಗೆ 36 ತಿಂಗಳು ನಿರಂತರವಾಗಿ ರೀಚಾರ್ಜ್ ಮಾಡಿದರೆ 1,500 ರೂಪಾಯಿ ರೀಫಂಡ್ ಆಗುತ್ತದೆ.

ನವದೆಹಲಿ(ಅ. 11): ರಿಲಾಯನ್ಸ್ ಜಿಯೋದ ಫೀಚರ್ ಫೋನ್'ಗೆ ಪ್ರತಿಯಾಗಿ ಏರ್'ಟೆಲ್ ತೀರಾ ಅಗ್ಗದ ಬೆಲೆಗೆ ಸ್ಮಾರ್ಟ್'ಫೋನ್ ಬಿಡುಗಡೆ ಮಾಡಿದೆ. 2,899 ರೂಪಾಯಿ ಕೊಟ್ಟರೆ ಏರ್'ಟೆಲ್'ನ 4ಜಿ ಸ್ಮಾರ್ಟ್'ಫೋನ್ ಲಭ್ಯವಾಗಲಿದೆ. ಮೂರು ವರ್ಷಗಳವರೆಗೆ ನಿಗದಿತ ರೀಚಾರ್ಜ್'ಗಳನ್ನು ಮಾಡಿಸಿದರೆ ಒಂದೂವರೆ ಸಾವಿರ ರೂಪಾಯಿಯನ್ನು ವಾಪಸ್ ಪಡೆದುಕೊಳ್ಳುವ ಅವಕಾಶವನ್ನೂ ಕಲ್ಪಿಸಿದೆ. ಅಲ್ಲಿಗೆ, ಏರ್'ಟೆಲ್ ಫೋನ್'ನ ಅಂತಿಮ ಬೆಲೆಯು 1,399 ರೂಪಾಯಿ ಆಗಲಿದೆ.

ಅಂದಹಾಗೆ, ಈ ಸ್ಮಾರ್ಟ್'ಫೋನ್ ತಯಾರಿಸಿದ್ದು ಏರ್'ಟೆಲ್ ಅಲ್ಲ. ಫೋನ್ ತಯಾರಕ ಕಾರ್ಬನ್ ಸಂಸ್ಥೆಯೊಂದಿಗೆ ಏರ್ಟೆಲ್ ಒಪ್ಪಂದ ಮಾಡಿಕೊಂಡಿದೆ. ಕಾರ್ಬನ್ ಸಂಸ್ಥೆಯು ಏರ್'ಟೆಲ್'ಗೋಸ್ಕರ ತನ್ನ ಎ40 ಇಂಡಿಯನ್ ಮಾಡೆಲ್'ನ ಸ್ಮಾರ್ಟ್'ಫೋನ್'ನ್ನು ತಯಾರಿಸಿ ಕೊಡುತ್ತಿದೆ. ಮುಂದಿನ ದಿನಗಳಲ್ಲಿ ಬೇರೆ ಬೇರೆ ಸ್ಮಾರ್ಟ್'ಫೋನ್ ಸಂಸ್ಥೆಗಳೊಂದಿಗೆ ಏರ್'ಟೆಲ್ ಟೈಯಪ್ ಮಾಡಿಕೊಳ್ಳುತ್ತದೆ. ಆಗ ಏರ್'ಟೆಲ್ ಗ್ರಾಹಕರಿಗೆ ಸ್ಮಾರ್ಟ್'ಫೋನ್'ಗಳ ಆಯ್ಕೆಗಳು ಹೆಚ್ಚಾಗಲಿವೆ.

ರೀಚಾರ್ಜ್ ಹಾಗೂ ಹಣ ವಾಪಸ್ ಹೇಗೆ?
ಕಾರ್ಬನ್ ಎ40 ಸ್ಮಾರ್ಟ್'ಫೋನ್'ನ ಜೊತೆ ಏರ್'ಟೆಲ್'ನ ವಿವಿಧ ಆಫರ್'ಗಳು ಒದಗಿ ಬರಲಿವೆ. 18 ತಿಂಗಳ ಕಾಲ ಪ್ರತೀ ತಿಂಗಳು 169 ರೂಪಾಯಿ ರೀಚಾರ್ಜ್ ಮಾಡಿಸಿದರೆ 500 ರೂಪಾಯಿ ರೀಫಂಡ್ ಆಗುತ್ತದೆ. ಗ್ರಾಹಕ ಇನ್ನೂ 18 ತಿಂಗಳು 169 ರೂ ರೀಚಾರ್ಜ್ ಮಾಡಿದರೆ ಮತ್ತೆ 1 ಸಾವಿರ ರೂಪಾಯಿ ರೀಫಂಡ್ ಆಗುತ್ತದೆ. ಅಲ್ಲಿಗೆ 36 ತಿಂಗಳು ನಿರಂತರವಾಗಿ ರೀಚಾರ್ಜ್ ಮಾಡಿದರೆ 1,500 ರೂಪಾಯಿ ರೀಫಂಡ್ ಆಗುತ್ತದೆ. 169 ರೂಪಾಯಿ ಬದಲು ಹೆಚ್ಚಿನ ಮೌಲ್ಯದ ರೀಚಾರ್ಜ್ ಕೂಡ ಮಾಡಿಸಬಹುದು. ಮೊದಲ 18 ತಿಂಗಳಲ್ಲಿ ಒಟ್ಟು 3 ಸಾವಿರ ರೂ ಮೌಲ್ಯದಷ್ಟು ರೀಚಾರ್ಜ್ ಮಾಡಬೇಕು; ನಂತರದ 18 ತಿಂಗಳೂ ಕೂಡ ಕನಿಷ್ಠ 3 ಸಾವಿರ ರೂನಷ್ಟು ರೀಚಾರ್ಜ್ ಮಾಡಿಸಬೇಕು. ಆಗ ಮಾತ್ರ ಒಂದೂವರೆ ಸಾವಿರ ರೀಫಂಡ್ ಆಗುತ್ತದೆ.

2,899 ರೂಪಾಯಿ ಕೊಟ್ಟು ಏರ್'ಟೆಲ್ ಸ್ಮಾರ್ಟ್'ಫೋನ್ ಕೊಳ್ಳುವ ಗ್ರಾಹಕ, ಮೂರು ವರ್ಷಗಳಲ್ಲಿ ನಿಗದಿತ ರೀತಿಯಲ್ಲಿ ರೀಚಾರ್ಜ್ ಮಾಡಿಸಿದರೆ 1,500 ರೂಪಾಯಿ ರೀಫಂಡ್ ಪಡೆಯುತ್ತಾನೆ. ಅಲ್ಲಿಗೆ, ಆತನಿಗೆ 1,399 ರೂಪಾಯಿಗೆ ಸ್ಮಾರ್ಟ್'ಫೋನ್ ಸಿಕ್ಕಂತಾಗುತ್ತದೆ.

ಏರ್'ಟೆಲ್ ಸ್ಮಾರ್ಟ್'ಫೋನ್ ವೈಶಿಷ್ಟ್ಯಗಳೇನು?
* ಕಾರ್ಬನ್ ಸಂಸ್ಥೆಯ ಎ40 ಇಂಡಿಯನ್ ಮಾಡೆಲ್'ನ ಫೋನ್
* 4 ಇಂಚು ಡಿಸ್'ಪ್ಲೇ ಸ್ಕ್ರೀನ್
* 1.3 ಗೀಗಾಹರ್ಟ್ಜ್ ಪ್ರೋಸೆಸರ್
* ಆಂಡ್ರಾಯ್ಡ್ ನೌಗಾಟ್ ಸಾಫ್ಟ್'ವೇರ್
* ಡುಯೆಲ್ ಸಿಮ್
* 1 ಜಿಬಿ RAM
* 8 ಜಿಬಿ ಇಂಟರ್ನಲ್ ಸ್ಟೋರೇಜ್
* 32 ಜಿಬಿ ಮೈಕ್ರೋ ಎಸ್'ಡಿ ಕಾರ್ಡ್ ಅವಕಾಶ
* 2 ಮೆಗಾಪಿಕ್ಸೆಲ್ ಹಿಂಬದಿ ಕೆಮರಾ
* 0.3 ಮೆಗಾಪಿಕ್ಸೆಲ್ ಮುಂಬದಿ ಕೆಮರಾ
* ವೈಫೈ, ಬ್ಲೂಟೂಥ್ ಮತ್ತು ಜಿಪಿಎಸ್ ಕನೆಕ್ಷನ್
* ಬ್ಯಾಟರಿ 1,400mAh

click me!