
ಬೆಂಗಳೂರು(ಡಿ.05): ದೇಶದ ಅತಿ ದೊಡ್ಡ ಟೆಲಿ ಸಂವಹನ ಸೇವಾ ಸಂಸ್ಥೆ ಭಾರತಿ ಏರ್‌ಟೆಲ್ ಕರ್ನಾಟಕದಲ್ಲಿ ‘ವೋಲ್ಟೆ’ (ಅಂದರೆ ಎಚ್‌ಡಿ ಗುಣಮಟ್ಟದ ವಾಯ್ಸ್ ಕಾಲ್ ಮಾಡುವ ಸೌಲಭ್ಯ) ಸೇವೆ ಆರಂಭಿಸಿದೆ.
4 ಜಿ ಆಧಾರದಲ್ಲಿ ಕಾರ್ಯ ನಿರ್ವಹಿಸುವ ಸೇವೆ ಇದಾಗಿದೆ. ಕರ್ನಾಟಕದ ಏರ್‌ಟೆಲ್ ಗ್ರಾಹಕರು ಯಾವ ನೆಟ್‌ವರ್ಕ್‌ಗೆ ಬೇಕಾದರೂ ಕರೆ ಮಾಡಬಹುದು. ಇದಕ್ಕೆ ಹೆಚ್ಚುವರಿ ಡಾಟಾ ಶುಲ್ಕ ವಿರುವುದಿಲ್ಲ. ಈ ಸೇವೆಯ ಮತ್ತೊಂದು ವಿಶೇಷವೆಂದರೆ, ಗ್ರಾಹಕರಿಗೆ ಒಂದು ವೇಳೆ 4ಜಿ ನೆಟ್‌ವರ್ಕ್ ಲಭ್ಯವಾಗದಿದ್ದರೆ ವೋಎಲ್‌ಟಿಇ ಕರೆಗಳು ಸ್ವಯಂ 3ಜಿ ಅಥವಾ 2ಜಿ ನೆಟ್‌ವಕ್ಗೆರ್ ಹೊಂದಿಕೊಳ್ಳುತ್ತವೆ. ಈ ಮೂಲಕ ಗ್ರಾಹಕರು ಸತತ ಸಂಪರ್ಕ ಸಾಧಿಸಬಹುದು. ಈ ಸೇವೆ ಪ್ರಸ್ತುತ ಆಂಧ್ರಪ್ರ ದೇಶ, ತೆಲಂಗಾಣ, ಮಹಾರಾಷ್ಟ್ರ, ಗೋವಾ, ಗುಜರಾತ್, ಮಧ್ಯಪ್ರದೇಶ ಛತ್ತೀಸ್‌ಗಡಗಳಲ್ಲಿ ಲಭ್ಯವಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.