ಹೊಸ ಫೀಚರ್: ವಾಟ್ಸ್’ಆ್ಯಪ್ ಅಡ್ಮಿನ್’ಗಳಿಗೆ ಹೆಚ್ಚಿನ ‘ಅಧಿಕಾರ’

By Suvarna Web DeskFirst Published Dec 3, 2017, 12:28 PM IST
Highlights

ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ನಿಮಗೆ ಕಿರಿಕಿರಿ ಎನಿಸುವ ಸಂದೇಶಗಳು ಬರುತ್ತಿವೆಯೇ? ಹಾಗಾದರೆ, ಮುಂದಿನ ದಿನಗಳಲ್ಲಿ ಈ ಬಗ್ಗೆ ಚಿಂತಿಸಬೇಕಿಲ್ಲ.

ಸ್ಯಾನ್‌ಫ್ರಾನ್ಸಿಸ್ಕೊ: ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ನಿಮಗೆ ಕಿರಿಕಿರಿ ಎನಿಸುವ ಸಂದೇಶಗಳು ಬರುತ್ತಿವೆಯೇ? ಹಾಗಾದರೆ, ಮುಂದಿನ ದಿನಗಳಲ್ಲಿ ಈ ಬಗ್ಗೆ ಚಿಂತಿಸಬೇಕಿಲ್ಲ.

ಇಂಥ ಸಮಸ್ಯೆಗಳನ್ನು ಮನಗಂಡಿರುವ ವಾಟ್ಸ್‌ಆ್ಯಪ್, ಗ್ರೂಪ್‌ಗಳಲ್ಲಿ ಕಿರಿಕಿರಿಯಾಗುವ ಸಂದೇಶ, ಚಿತ್ರ, ಧ್ವನಿ ಮತ್ತು ವಿಡಿಯೋಗಳನ್ನು ರವಾನಿಸದಂತೆ ಸದಸ್ಯರನ್ನು ನಿರ್ಬಂಧಿಸುವ ಅವಕಾಶವನ್ನು ಗ್ರೂಪ್ ಅಡ್ಮಿನ್‌ಗೆ ನೀಡಲು ಮುಂದಾಗಿದೆ.

ಇದಕ್ಕಾಗಿ ವಾಟ್ಸ್‌ಆ್ಯಪ್ ಅನ್ನು ಗೂಗಲ್ ಪ್ಲೇಸ್ಟೋರ್‌ನಲ್ಲಿ ಅಪ್ಡೇಟ್ ಮಾಡಿಕೊಳ್ಳ ಬೇಕಿದ್ದು, ಬಳಿಕ ವಾಟ್ಸಪ್ ಸೆಟ್ಟಿಂಗ್‌ನಲ್ಲಿ ‘ರಿಸ್ಟ್ರಿಕ್ಟೆಡ್ ಗ್ರೂಪ್ಸ್’ ಎಂಬ ಆಯ್ಕೆಯನ್ನು ಗ್ರೂಪ್ ಅಡ್ಮಿನ್ ಆಯ್ಕೆ ಮಾಡಿಕೊಳ್ಳಬೇಕು.

 

click me!