ಜಿಯೋಗೆ ಸೆಡ್ಡು: ಕೇವಲ 2 ಸಾವಿರಕ್ಕೆ ಏರ್ಟೆಲ್ ಸ್ಮಾರ್ಟ್'ಫೋನ್?

By Suvarna Web DeskFirst Published Sep 30, 2017, 1:34 PM IST
Highlights

ಏರ್'ಟೆಲ್ ಫೋನ್'ನ ಸ್ಪೆಸಿಫಿಕೇಶನ್ಸ್ ಏನು ಎಂಬ ನಿಖರ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ. ಆದರೆ, ಮೂಲಗಳ ಪ್ರಕಾರ ಮುಂಬದಿ ಮತ್ತು ಹಿಂಬದಿ ಕ್ಯಾಮೆರಾಗಳೆರಡೂ ಇರುತ್ತದೆ. ಬ್ಯಾಟರಿ ಬ್ಯಾಕಪ್ ಕೂಡ ಉತ್ತಮವಾಗಿರುತ್ತದೆ ಎಂದು ಇಂಡಿಯಾ ಟುಡೇ ವೆಬ್ ತಾಣದಲ್ಲಿ ತಿಳಿಸಲಾಗಿದೆ.

ಬೆಂಗಳೂರು(ಸೆ. 30): ಕಳೆದ ವರ್ಷ ರಿಲಾಯನ್ಸ್ ಸಂಸ್ಥೆಯು ಉಚಿತ ಜಿಯೋ ಡೇಟಾ ಆಫರ್ ಕೊಟ್ಟು ಟೆಲಿಕಾಂ ವಲಯದಲ್ಲಿ ಸಂಚಲನ ಮೂಡಿಸಿದ್ದು, ಬೇರೆ ಸಂಸ್ಥೆಗಳೂ ಫ್ರೀ ಆಫರ್ ಕೊಡುವಂತಾಗಿದ್ದು ಎಲ್ಲರಿಗೂ ಗೊತ್ತಿರುವಂಥದ್ದೇ. ಇತ್ತೀಚೆಗಷ್ಟೇ, ಜಿಯೋ ಫೋನ್'ಗಳು ಮಾರುಕಟ್ಟೆಯಲ್ಲಿ ಭರಾಟೆ ಮಾಡುತ್ತಿವೆ. ಈ ಸಂದರ್ಭದಲ್ಲಿ ಏರ್'ಟೆಲ್ ಕೂಡ ಅದೇ ಹಾದಿ ತುಳಿದಿದೆ. 2,000-2,500 ರೂಪಾಯಿ ಬೆಲೆಗೆ 4ಜಿ ಸ್ಮಾರ್ಟ್'ಫೋನ್'ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಏರ್'ಟೆಲ್ ಸಂಸ್ಥೆ ಯೋಜಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಏರ್'ಟೆಲ್ ಈ ಯೋಜನೆಯನ್ನು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ. ಏರ್'ಟೆಲ್ ಮೂಲಗಳ ಪ್ರಕಾರ, ವಿವಿಧ ಸ್ಮಾರ್ಟ್'ಫೋನ್ ತಯಾರಕರ ಜೊತೆ ಏರ್'ಟೆಲ್ ಮಾತುಕತೆ ನಡೆಸುತ್ತಿದೆ. ಫೋನ್ ತಯಾರಿಕೆಯ ಹಣಕಾಸು ವಿಚಾರದಲ್ಲಿ ಏರ್'ಟೆಲ್'ನ ಯಾವುದೇ ಪಾತ್ರವಿರುವುದಿಲ್ಲವೆನ್ನಲಾಗಿದೆ. ಆದರೆ, ಆ ಸ್ಮಾರ್ಟ್'ಫೋನ್'ಗಳಿಗೆ ಏರ್'ಟೆಲ್'ನ ಡೇಟಾ ಮತ್ತು ಕಾಲ್ ಪ್ಯಾಕೇಜ್'ಗಳನ್ನಷ್ಟೇ ಏರ್'ಟೆಲ್ ಒದಗಿಸುತ್ತದೆಯಂತೆ. ಈ ವರ್ಷಾಂತ್ಯಕ್ಕೆ ಏರ್'ಟೆಲ್ ಫೋನ್'ಗಳು ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ.

ಏನಿರುತ್ತೆ ಏರ್ಟೆಲ್ ಸ್ಮಾರ್ಟ್'ಫೋನ್'ನಲ್ಲಿ..?
ಏರ್'ಟೆಲ್ ಫೋನ್'ನ ಸ್ಪೆಸಿಫಿಕೇಶನ್ಸ್ ಏನು ಎಂಬ ನಿಖರ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ. ಆದರೆ, ಮೂಲಗಳ ಪ್ರಕಾರ ಮುಂಬದಿ ಮತ್ತು ಹಿಂಬದಿ ಕ್ಯಾಮೆರಾಗಳೆರಡೂ ಇರುತ್ತದೆ. ಬ್ಯಾಟರಿ ಬ್ಯಾಕಪ್ ಕೂಡ ಉತ್ತಮವಾಗಿರುತ್ತದೆ ಎಂದು ಇಂಡಿಯಾ ಟುಡೇ ವೆಬ್ ತಾಣದಲ್ಲಿ ತಿಳಿಸಲಾಗಿದೆ.

Latest Videos

* 4 ಇಂಚು ಸ್ಕ್ರೀನ್
* ಮುಂಬದಿ ಮತ್ತು ಹಿಂಬದಿ ಕ್ಯಾಮೆರಾ
* 1 ಜಿಬಿ RAM
* VoLTE ಸೌಲಭ್ಯ
* ಉತ್ತಮ ಬ್ಯಾಟರಿ

click me!