ಏರ್'ಟೆಲ್'ನಿಂದ 6 ತಿಂಗಳು 60ಜಿಬಿ ಉಚಿತ ಡೇಟಾ; ಯಾರಿಗುಂಟು ಯಾರಿಗಿಲ್ಲ?

Published : Sep 17, 2017, 06:07 PM ISTUpdated : Apr 11, 2018, 12:59 PM IST
ಏರ್'ಟೆಲ್'ನಿಂದ 6 ತಿಂಗಳು 60ಜಿಬಿ ಉಚಿತ ಡೇಟಾ; ಯಾರಿಗುಂಟು ಯಾರಿಗಿಲ್ಲ?

ಸಾರಾಂಶ

ನಿಮ್ಮ ಸ್ಮಾರ್ಟ್'ಫೋನ್'ನಲ್ಲಿ ಮೈಏರ್'ಟೆಲ್ ಆ್ಯಪ್ ಇಲ್ಲದಿದ್ದರೆ ಮೊದಲು ಪ್ಲೇಸ್ಟೋರ್'ಗೆ ಹೋಗಿ ಡೌನ್'ಲೋಡ್ ಮಾಡಿಕೊಳ್ಳಿ. ಬಳಿಕ ಆ್ಯಪ್ ಓಪನ್ ಮಾಡಿ ಅಲ್ಲಿ ಕಾಣುವ "ಕ್ಲೈಮ್ ಫ್ರೀ ಡೇಟಾ" ಬ್ಯಾನರ್ ಕ್ಲಿಕ್ ಮಾಡಿರಿ. ನಂತರ, ಏರ್'ಟೆಲ್ ಟಿವಿ ಆ್ಯಪ್'ನ್ನು ಡೌನ್'ಲೋಡ್ ಮಾಡಿಕೊಳ್ಳುವ ಸೂಚನೆ ನಿಮಗೆ ಸಿಗುತ್ತದೆ. ಅದರಂತೆ, ಆ ಆ್ಯಪ್'ನ್ನು ಡೌನ್'ಲೋಡ್ ಮಾಡಿಕೊಂಡರೆ ಮಾತ್ರ 60 ಜಿಬಿ ಡೇಟಾ ಉಚಿತವಾಗಿ ನಿಮ್ಮ ಅಕೌಂಟ್'ಗೆ ಬಂದು ಸೇರುತ್ತದೆ. ಹಾಗೆಂದು, ಇಂದು ಏರ್'ಟೆಲ್ ಸಂಸ್ಥೆ ಹೇಳಿಕೊಂಡಿದೆ.

ನವದೆಹಲಿ(ಸೆ. 17): ರಿಲಾಯನ್ಸ್ ಜಿಯೋ ಆಗಮದ ಬಳಿಕ ಶುರುವಾದ ಡೇಟಾ ವಾರ್ ಇನ್ನೂ ಮುಂದುವರಿಯುತ್ತಿದೆ. ಏರ್'ಟೆಲ್ ಸಂಸ್ಥೆ ತನ್ನ ಗ್ರಾಹಕರಿಗೆ ಹೊಸ ಭರ್ಜರಿ ಆಫರ್ ಕೊಟ್ಟಿದೆ. 347 ರೂ ಮತ್ತು 399 ರೂಪಾಯಿ ಪ್ಯಾಕೇಜ್'ಗೆ 28 ಜಿಬಿ ಹಾಗೂ 84 ಜಿಬಿ ಡೇಟಾ ಸುಗ್ಗಿ ಜೊತೆಗೆ ಅನ್'ಲಿಮಿಟೆಡ್ ಕರೆಗಳನ್ನು ಗ್ರಾಹಕರಿಗೆ ನೀಡಿದ್ದ ಏರ್'ಟೆಲ್ ಇದೀಗ 6 ತಿಂಗಳ ಕಾಲ 60 ಜಿಬಿ ಡೇಟಾವನ್ನು ಗಿಫ್ಟ್ ಆಗಿ ನೀಡುವುದಾಗಿ ಘೋಷಣೆ ಮಾಡಿದೆ. ಅಂದರೆ, 6 ತಿಂಗಳ ಕಾಲ ಪ್ರತೀ ತಿಂಗಳು 10 ಜಿಬಿ ಉಚಿತ ಡೇಟಾ ಏರ್'ಟೆಲ್ ಗ್ರಾಹಕರಿಗೆ ಸಿಗಲಿದೆ. ಆದರೆ, ಈ ಉಚಿತ 60 ಜಿಬಿ ಡೇಟಾ ಪಡೆಯಲು ಕೆಲ ಕಂಡೀಷನ್'ಗಳಿವೆ.

ಏನೇನು ಕಂಡಿಷನ್ಸ್?
* ಇದು ಏರ್'ಟೆಲ್'ನ ಪೋಸ್ಟ್'ಪೇಯ್ಡ್ ಗ್ರಾಹಕರಿಗೆ ಮಾತ್ರ ಲಭ್ಯ
* ಫೋನ್'ನಲ್ಲಿ ಏರ್'ಟೆಲ್ ಟಿವಿ(Airtel TV) ಆ್ಯಪ್ ಇನ್ಸ್'ಟಾಲ್ ಮಾಡಿಕೊಳ್ಳಬೇಕು.
* ಫೋನ್'ನಲ್ಲಿ ಮೈಏರ್'ಟೆಲ್(MyAirtel) ಆ್ಯಪ್ ಕೂಡ ಇರಬೇಕು.

ಆಫರ್ ಹೇಗೆ ಪಡೆಯುವುದು?
ನಿಮ್ಮ ಸ್ಮಾರ್ಟ್'ಫೋನ್'ನಲ್ಲಿ ಮೈಏರ್'ಟೆಲ್ ಆ್ಯಪ್ ಇಲ್ಲದಿದ್ದರೆ ಮೊದಲು ಪ್ಲೇಸ್ಟೋರ್'ಗೆ ಹೋಗಿ ಡೌನ್'ಲೋಡ್ ಮಾಡಿಕೊಳ್ಳಿ. ಬಳಿಕ ಆ್ಯಪ್ ಓಪನ್ ಮಾಡಿ ಅಲ್ಲಿ ಕಾಣುವ "ಕ್ಲೈಮ್ ಫ್ರೀ ಡೇಟಾ" ಬ್ಯಾನರ್ ಕ್ಲಿಕ್ ಮಾಡಿರಿ. ನಂತರ, ಏರ್'ಟೆಲ್ ಟಿವಿ ಆ್ಯಪ್'ನ್ನು ಡೌನ್'ಲೋಡ್ ಮಾಡಿಕೊಳ್ಳುವ ಸೂಚನೆ ನಿಮಗೆ ಸಿಗುತ್ತದೆ. ಅದರಂತೆ, ಆ ಆ್ಯಪ್'ನ್ನು ಡೌನ್'ಲೋಡ್ ಮಾಡಿಕೊಂಡರೆ ಮಾತ್ರ 60 ಜಿಬಿ ಡೇಟಾ ಉಚಿತವಾಗಿ ನಿಮ್ಮ ಅಕೌಂಟ್'ಗೆ ಬಂದು ಸೇರುತ್ತದೆ. ಹಾಗೆಂದು, ಇಂದು ಏರ್'ಟೆಲ್ ಸಂಸ್ಥೆ ಹೇಳಿಕೊಂಡಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಓಲಾ ಸ್ಕೂಟರ್ಸ್‌ ಮಾತ್ರವಲ್ಲ, ಸರ್ವೀಸ್‌ ವಿಚಾರದಲ್ಲಿ ಮೋಟಾರ್‌ಸೈಕಲ್‌ದೂ ಅದೇ ಕಥೆ!
Viral Video: ಗಗನಯಾನ್‌ ಮಿಷನ್‌ ಲ್ಯಾಡಿಂಗ್‌ ಪ್ಯಾರಚೂಟ್‌ ಯಶಸ್ವಿ ಪರೀಕ್ಷೆ ನಡೆಸಿದ ಇಸ್ರೋ