ಆ್ಯಪಲ್ X ಬಿಡುಗಡೆಯಲ್ಲಿ ಮುಜುಗರ; ತಮ್ಮ ಸಂಸ್ಥೆಯ ಮುಖ್ಯಸ್ಥನ ಮುಖವನ್ನೇ ಗುರುತಿಸಲಿಲ್ಲ ಐಫೋನ್!

By Suvarna Web DeskFirst Published Sep 13, 2017, 4:06 PM IST
Highlights

ಅತ್ಯುನ್ನತ ತಂತ್ರಜ್ಞಾನವನ್ನು ಹೊಂದಿರುವ ಬಹುನಿರೀಕ್ಷಿತ ಐಫೊನ್ ಎಕ್ಸ್ ಅನ್ನು ನಿನ್ನೆ ಲಾಂಚ್ ಮಾಡಲಾಗಿದೆ.  ಈಗ ಇಡೀ ಜಗತ್ತು ಐಫೋನ್ ಬಗ್ಗೆ ಮಾತನಾಡಿಕೊಳ್ಳುತ್ತಿದೆ. ಕೆಲವರು ಇದನ್ನು ಖರೀದಿಸಲು ಉತ್ಸುಕರಾಗಿದ್ದಾರೆ. ವಿಷಯ ಅದಲ್ಲ, ನಿನ್ನೆ ಐಫೋನ್ ಲಾಂಚ್ ಮಾಡುವಾಗ ಸ್ಟೇಜ್’ನಲ್ಲಿ ಮುಜುಗರಕ್ಕೀಡಾಗುವ ಘಟನೆ ನಡೆದಿದೆ.

ನವದೆಹಲಿ (ಸೆ.13): ಅತ್ಯುನ್ನತ ತಂತ್ರಜ್ಞಾನವನ್ನು ಹೊಂದಿರುವ ಬಹುನಿರೀಕ್ಷಿತ ಐಫೊನ್ ಎಕ್ಸ್ ಅನ್ನು ನಿನ್ನೆ ಲಾಂಚ್ ಮಾಡಲಾಗಿದೆ.  ಈಗ ಇಡೀ ಜಗತ್ತು ಐಫೋನ್ ಬಗ್ಗೆ ಮಾತನಾಡಿಕೊಳ್ಳುತ್ತಿದೆ. ಕೆಲವರು ಇದನ್ನು ಖರೀದಿಸಲು ಉತ್ಸುಕರಾಗಿದ್ದಾರೆ. ವಿಷಯ ಅದಲ್ಲ, ನಿನ್ನೆ ಐಫೋನ್ ಲಾಂಚ್ ಮಾಡುವಾಗ ಸ್ಟೇಜ್’ನಲ್ಲಿ ಮುಜುಗರಕ್ಕೀಡಾಗುವ ಘಟನೆ ನಡೆದಿದೆ.

ಫೋನನ್ನು ಅನ್’ಲಾಕ್ ಮಾಡಲು ಫಿಂಗರ್’ಪ್ರಿಂಟ್ ಬದಲು ಮುಖವನ್ನು ತೋರಿಸಿ ಅನ್’ಲಾಕ್ ಮಾಡುವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಆಯಪಲ್ ಕಂಪನಿಯ ಉಪಾಧ್ಯಕ್ಷ ಗ್ರೇಗ್ ಫೆಡರಯ್ ಐಫೋನ್ ಪರಿಚಯಿಸುವಾಗ ಅನ್’ಲಾಕ್ ಮಾಡಲು ತಮ್ಮ ಮುಖವನ್ನು ತೋರಿಸಿದರು. ಆದರೂ ಅನ್’ಲಾಕ್ ಮಾಡಲಾಗಲಿಲ್ಲ. ಮೊದಲ ಪ್ರಯತ್ನದಲ್ಲಿ ಐಫೋನ್ ಎಕ್ಸ್ ತಮ್ಮದೇ ಕಂಪನಿಯ ಮುಖ್ಯಸ್ಥನನ್ನು ಗುರುತಿಸಲು ವಿಫಲವಾಯಿತು!

ಆಯಪಲ್ ಕಂಪನಿ  ಈ ರೀತಿ ಮುಜುಗರಕ್ಕೀಡಾಗಿರುವುದು ಇದೇ ಮೊದಲಲ್ಲ. 2012 ರಲ್ಲಿ ಟ್ಯಾಬ್ಲೆಟ್’ವೊಂದನ್ನು ಬಿಡುಗಡೆ ಮಾಡಿದಾಗಲೂ ಸ್ವೀವ್ ಜಾಬ್ಸ್ ಇದೇ ರೀತಿ ಮುಜುಗರಕ್ಕಿಡಾಗಿದ್ದರು.  

click me!