ಭಾರತದ ಅತಿದೊಡ್ಡ ಫ್ಯಾಷನ್ ರಿಟೇಲ್ ಕಂಪನಿಗಳಲ್ಲಿ ಒಂದಾದ ಆದಿತ್ಯ ಬಿರ್ಲಾ ಫ್ಯಾಶನ್ ಅಂಡ್ ರಿಟೇಲ್ ಲಿಮಿಟೆಡ್ (ABFRL) ಡೇಟಾ ಲೀಕ್ ಆಗಿದೆ ಎಂದು ವರದಿಗಳು ಹೇಳಿವೆ. ಡೇಟಾ ಲೀಕ್ ಸಂಬಳದ ವಿವರಗಳು, ಧರ್ಮ ಮತ್ತು ಅವರ ವೈವಾಹಿಕ ಸ್ಟೇಟಸ್ ಸೇರಿದಂತೆ ಉದ್ಯೋಗಿಗಳ ವಿವರಗಳನ್ನು ಒಳಗೊಂಡಿದೆ ಎಂದು ಹೇಳಲಾಗಿದೆ.
Tech Desk: ಭಾರತದ ಅತಿದೊಡ್ಡ ಫ್ಯಾಷನ್ ರಿಟೇಲ್ ಕಂಪನಿಗಳಲ್ಲಿ ಒಂದಾದ ಆದಿತ್ಯ ಬಿರ್ಲಾ ಫ್ಯಾಶನ್ ಅಂಡ್ ರಿಟೇಲ್ ಲಿಮಿಟೆಡ್ (ABFRL) ಡೇಟಾ ಲೀಕ್ ಆಗಿದೆ ಎಂದು ವರದಿಗಳು ಹೇಳಿವೆ. ಆದಿತ್ಯ ಬಿರ್ಲಾ ಗ್ರೂಪ್ ಒಡೆತನದ ಪ್ಲಾಟ್‌ಫಾರ್ಮ್‌ನಿಂದ 5.4 ಮಿಲಿಯನ್ ಇಮೇಲ್ ವಿಳಾಸಗಳನ್ನು ಹೊಂದಿರುವ ಡೇಟಾವನ್ನು ಸ್ಕ್ರ್ಯಾಪ್ ಮಾಡಲಾಗಿದೆ ಮತ್ತು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಲೀಕ್ ಆಗಿರುವ ಡೇಟಾಬೇಸ್ ಹೆಸರುಗಳು, ಫೋನ್ ಸಂಖ್ಯೆಗಳು, ವಿಳಾಸಗಳು, ಜನ್ಮ ದಿನಾಂಕಗಳು, ಆರ್ಡರ್ ಹಿಸ್ಟರಿ, ಕ್ರೆಡಿಟ್ ಕಾರ್ಡ್ ವಿವರಗಳು ಸೇರಿದಂತೆ ಪಾಸ್‌ವರ್ಡ್‌ಗಳಂತಹ ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿದೆ ಎಂದು ಹೇಳಲಾಗಿದೆ. ಡೇಟಾ ಬ್ರೀಚ್ ಸಂಬಳದ ವಿವರಗಳು, ಧರ್ಮ ಮತ್ತು ಅವರ ವೈವಾಹಿಕ ಸ್ಥಿತಿ ಸೇರಿದಂತೆ ಉದ್ಯೋಗಿಗಳ ವಿವರಗಳನ್ನು ಕೂಡ ಒಳಗೊಂಡಿದೆ ಎಂದು ಹೇಳಲಾಗಿದೆ.
ಆದಿತ್ಯ ಬಿರ್ಲಾ ಫ್ಯಾಶನ್ ಮತ್ತು ರಿಟೇಲ್ ಡೇಟಾಬೇಸ್ ಅನ್ನು ಶೈನಿಹಂಟರ್ಸ್ ಎಂದು ಕರೆಯಲಾಗುವ ಹ್ಯಾಕರ್ ಗ್ರೂಪ್ ಸಾರ್ವಜನಿಕಗೊಳಿಸಿದೆ. ABFRL ಖಾತೆಗಳ ವಿವರ ಲೀಕ್ ಆದ ಸುದ್ದಿಯನ್ನು ಕೆಲವು ಗ್ರಾಹಕರಿಗೆ ಡೇಟಾ ಉಲ್ಲಂಘನೆ ಟ್ರ್ಯಾಕಿಂಗ್ ವೆಬ್‌ಸೈಟ್ Have I Been Pwned ಮೂಲಕ ತಿಳಿಸಲಾಗಿದೆ.
undefined
ಹ್ಯಾಕರ್ ಗ್ರೂಪ್‌ನ ಬೇಡಿಕೆಯನ್ನು ತಿರಸ್ಕಾರ: ಕಳೆದ ವರ್ಷದ ಡಿಸೆಂಬರ್‌ನಲ್ಲಿ 5,470,063 ಆದಿತ್ಯ ಬಿರ್ಲಾ ಫ್ಯಾಷನ್ ಮತ್ತು ರಿಟೇಲ್ ಲಿಮಿಟೆಡ್ ಖಾತೆಗಳನ್ನು ಲೀಕ್ ಮತ್ತು ರಾನ್ಸಮ್ ಮಾಡಲಾಗಿದೆ ಎಂದು ಹೇಳಲಾಗಿದೆ. ಹ್ಯಾಕರ್ ಗ್ರೂಪ್‌ನ ಬೇಡಿಕೆಯನ್ನು ತಿರಸ್ಕರಿಸಲಾಗಿತ್ತು ಎಂದು ಹೇಳಲಾಗಿದೆ . ಇದಾದ ಬಳಿಕ ಮತ್ತು ಡೇಟಾವನ್ನು ಜನಪ್ರಿಯ ಹ್ಯಾಕಿಂಗ್ ಫೋರಂನಲ್ಲಿ ಸಾರ್ವಜನಿಕವಾಗಿ ಪೋಸ್ಟ್ ಮಾಡಲಾಗಿದೆ. ನಿಮ್ಮ ಡೇಟಾ ಕೂಡ ಲೀಕ್ ಆಗಿದೆಯೇ ಎಂದು ಪರಿಶೀಲಿಸಲು, ಹ್ಯಾವ್ ಐ ಬೀನ್ ಪಿನ್ಡ್ ವೆಬ್‌ಸೈಟ್‌ಗೆ ಭೇಟಿ ನೀಡಿ ನಿಮ್ಮ ಇಮೇಲ್ ಅಥವಾ ಫೋನ್ ಸಂಖ್ಯೆಯನ್ನು ನಮೂದಿಸಿ ಚೆಕ್ ಮಾಡಬಹುದು.
ಇದನ್ನೂ ಓದಿ: I&B Ministry: ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಟ್ವೀಟರ್ ಖಾತೆ ಹ್ಯಾಕ್!
ಸಿಬ್ಬಂದಿಯ ಮಾಹಿತಿಯೂ ಲೀಕ್: "ಇದು ಅಗಾಧ ಪ್ರಮಾಣದ ಡೇಟಾ ಮತ್ತು ಇದು ಮೂಲ ಕೋಡ್ ಅನ್ನು ಒಳಗೊಂಡಿದೆ," ಎಂದು ಹ್ಯಾವ್ ಐ ಬೀನ್ ಪನ್ಡ್ ವೆಬ್‌ಸೈಟ್‌ನ ಸೃಷ್ಟಿಕರ್ತ ಟ್ರಾಯ್ ಹಂಟ್ ಹೇಳಿದ್ದಾರೆ ಎಂದು ಗ್ಯಾಜೆಟ್ 360 ವರದಿ ಮಾಡಿದೆ. "ಗ್ರಾಹಕರ ಸಾಕಷ್ಟು ವೈಯಕ್ತಿಕ ಮಾಹಿತಿ ಜತೆಗೆ ಅದರ ಸಿಬ್ಬಂದಿಯ ಮಾಹಿತಿಯೂ ಇದೆ. ಉದ್ಯೋಗಿಗಳ ವೈವಾಹಿಕ ಸ್ಟೇಟಸ್ ಮತ್ತು ವೈಯಕ್ತಿಕ ವಿಷಯಗಳ ಜೊತೆಗೆ ಧರ್ಮದಂತಹ ಸೂಕ್ಷ್ಮವಾದ ಮಾಹಿತಿಯನ್ನ ಅನ್ನು ಏಕೆ ಸಂಗ್ರಹಿಸುತ್ತಾರೆ ಎಂದು ನನಗೆ ತಿಳಿದಿಲ್ಲ. ಕೆಲಸ ಮಾಡಲು ಪೂರೈಸಲು ಇದು ಏಕೆ ಅಗತ್ಯವಾಗಿರುತ್ತದೆ ಎಂಬುದು ಸ್ಪಷ್ಟವಾಗಿಲ್ಲ." ಎಂದು ಟ್ರಾಯ್ ಹೇಳಿದ್ದಾರೆ.
ಇದನ್ನೂ ಓದಿ: Government Website Hack: ಹೋಟೆಲ್ ಐಡಿ ಬಳಸಿ ಸರ್ಕಾರಿ ಹಣಕ್ಕೇ ಕನ್ನ ಹಾಕಿದ ಶ್ರೀಕಿ..!
ಹಲವು ವೈಯುಕ್ತಿಕ ಮಾಹಿತಿ ಲೀಕ್: RestorePrivacy ಯ ವರದಿಯ ಪ್ರಕಾರ ShinyHunters ಹಲವು ವಾರಗಳವರೆಗೆ ABFRL ಡೇಟಾಬೇಸ್‌ಗೆ ಪ್ರವೇಶವನ್ನು ಪಡೆದಿತ್ತು. ವರದಿಯ ಪ್ರಕಾರ, ಹ್ಯಾಕ್ ಮಾಡಲಾಗಿದೆ ಎಂದು ಹೇಳಲಾದ ಮಾಹಿತಿಯು ಪೂರ್ಣ ಹೆಸರು, ಇಮೇಲ್, ಜನ್ಮ ದಿನಾಂಕ, ಭೌತಿಕ ವಿಳಾಸ, ಲಿಂಗ, ವಯಸ್ಸು, ವೈವಾಹಿಕ ಸ್ಥಿತಿ, ಸಂಬಳ, ಧರ್ಮ ಮತ್ತು ಹೆಚ್ಚಿನವುಗಳಂತಹ ABFRL ಉದ್ಯೋಗಿ ಡೇಟಾದ ವಿವರಗಳನ್ನು ಒಳಗೊಂಡಿದೆ ಎಂದು ಹೇಳಲಾಗಿದೆ.
ಇದು ABFRL ಗ್ರಾಹಕರ ಡೇಟಾ ಮತ್ತು ನೂರಾರು ಸಾವಿರ ಇನ್‌ವಾಯ್ಸ್‌ಗಳು ಮತ್ತು ಕಂಪನಿಯ ವೆಬ್‌ಸೈಟ್ ಮೂಲ ಕೋಡ್ ಮತ್ತು ಸರ್ವರ್ ವರದಿಗಳನ್ನು ಹೊಂದಿದೆ ಎಂದು ವರದಿಯಾಗಿದೆ. RestorePrivacy ಯ ವರದಿಯ ಪ್ರಕಾರ, ಡೇಟಾವು ABFRL ಭಾರತೀಯ ಬಟ್ಟೆ ಬ್ರ್ಯಾಂಡ್‌ಗಳಿಗೆ ಸರ್ವರ್ ಲಾಗ್‌ಗಳು ಮತ್ತು ಇತರ ವರದಿಗಳನ್ನು ಒಳಗೊಂಡಿದೆ, ಇದರಲ್ಲಿ ಅಮೇರಿಕನ್ ಈಗಲ್, ಪ್ಯಾಂಟಲೂನ್ಸ್, ಫಾರೆವರ್ 21, ದಿ ಕಲೆಕ್ಟಿವ್, ವ್ಯಾನ್ ಹ್ಯೂಸೆನ್, ಪೀಟರ್ ಇಂಗ್ಲೆಂಡ್, ಪ್ಲಾನೆಟ್ ಫ್ಯಾಶನ್, ಮತ್ತು ಶಂತನು ಮತ್ತು ನಿಖಿಲ್ ಸೇರಿವೆ.