ಬಿಎಸ್‌ಎನ್‌ಎಲ್ ವಿಆರ್‌ಎಸ್‌ಗೆ 22 ಸಾವಿರ ಉದ್ಯೋಗಿಗಳು ಅರ್ಜಿ

By Kannadaprabha News  |  First Published Nov 8, 2019, 10:46 AM IST

ಬಿಎಸ್ ಎನ್ ಎಲ್ ನಷ್ಟ ತಗ್ಗಿಸುವ ಉದ್ದೇಶದಿಂದ ತನ್ನ ನೌಕರರಿಗೆ ಸ್ವಯಂ ನಿವೃತ್ತಿ ಯೋಜನೆ ಆರಂಭಿಸಿದೆ. ಸುಮಾರು 70 ಸಾವಿರ ಉದ್ಯೋಗಿಗಳು ಇದರ ಪ್ರಯೋಜನ ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಈಗಾಗಲೇ 22 ಸಾವಿರ ಜನ ಅರ್ಜಿ ಹಾಕಿದ್ದಾರೆ. 


ನವದೆಹಲಿ (ನ. 08): ನಷ್ಟದ ಸುಳಿಯಲ್ಲಿ ಸಿಲುಕಿರುವ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ನೌಕರರಿಗೆ ಕೇಂದ್ರ ಸರ್ಕಾರ ಪರಿಚಯಿಸಿದ ಸ್ವಯಂ ನಿವೃತ್ತಿ ಯೋಜನೆಗೆ ಮೂರೇ ದಿನಗಳಲ್ಲಿ 22 ಸಾವಿರಕ್ಕೂ ಹೆಚ್ಚು ಉದ್ಯೋಗಿ ಗಳು ಅರ್ಜಿ
ಸಲ್ಲಿಸಿದ್ದಾರೆ.

ನ.5 ರಂದು ಬಿಎಸ್‌ಎನ್‌ಎಲ್ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಯೋಜನೆ (ವಿಆರ್ ಎಸ್) ಆರಂಭಿಸಲಾಗಿದ್ದು, ಡಿ. 3 ರ ವರೆಗೆ ಮುಂದುವರಿಯಲಿದೆ. ಆದರೆ, ಈಗಾಗಲೇ 22 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ಸುಮಾರು 70-80 ಸಾವಿರ ಉದ್ಯೋಗಿಗಳು ವಿಆರ್ ಎಸ್‌ಗೆ ಅರ್ಜಿ ಸಲ್ಲಿಸುವ ನಿರೀಕ್ಷೆಯಿದ್ದು, ಇದರಿಂದ ವೇತನದ ಖರ್ಚಿನಲ್ಲಿ 7 ಸಾವಿರ ಕೋಟಿ ರು.ನಷ್ಟು ಕಂಪನಿಗೆ ಉಳಿತಾಯವಾಗಲಿದೆ.

Tap to resize

Latest Videos

undefined

BSNL ನಿಂದ VRS ಯೋಜನೆ ಜಾರಿ: ಏನಿದು VRS?

50 ವರ್ಷ ವಯಸ್ಸು ದಾಟಿದ ನೌಕರರು ವಿಆರ್‌ಎಸ್‌ಗೆ ಅರ್ಹರು ಎಂದು ‘ಬಿಎಸ್‌ಎನ್‌ಎಲ್ ವಿಆರ್‌ಎಸ್ ಯೋಜನೆ- 2019 ಯಲ್ಲಿ ಹೇಳಲಾಗಿದ್ದು, 1.50 ಲಕ್ಷ ನೌಕರರ ಪೈಕಿ ವಿಆರ್ ಎಸ್‌ಗೆ 1 ಲಕ್ಷ ನೌಕರರು ಅರ್ಹರಾಗಿದ್ದಾರೆ.

ಏನಿದು?  :ವಿಆರ್‌ಎಸ್ ಪಡೆದವರಿಗೆ ಈವರೆಗೆ ಸೇವೆ ಸಲ್ಲಿಸಿದ ಪ್ರತಿ ವರ್ಷದ 35 ದಿನದ ವೇತನ ಹಾಗೂ ಇನ್ನೂ ಬಾಕಿ ಇರುವ ಪ್ರತಿ ಸೇವಾ ವರ್ಷದ 25 ದಿನದ ವೇತನವನ್ನು  ಪರಿಹಾರವಾಗಿ ನೀಡಲಾಗುತ್ತದೆ. ಎಂಟಿಎನ್‌ಎಲ್‌ನಿಂದಲೂ: ಇನ್ನು ಮುಂಬೈ ಹಾಗೂ ದಿಲ್ಲಿಯಲ್ಲಿರುವ ಬಿಎಸ್ಸೆನ್ನೆಲ್‌ನ ಸೋದರ ಸಂಸ್ಥೆ ಮಹಾನಗರ ಸಂಚಾರ ನಿಗಮ ನಿಯಮಿತ (ಎಂಟಿಎನ್‌ಎಲ್) ಡಿ. 3 ರವರೆಗೆ ತನ್ನ ನೌಕರರಿಗೆ ವಿಆರ್‌ಎಸ್ ಯೋಜನೆ ಜಾರಿಗೊಳಿಸಿದೆ. 

ಬಿಎಸ್‌ಎನ್‌ಎಲ್ ಹಾಗೂ ಎಂಟಿಎನ್‌ಎಲ್‌ಗಳನ್ನು ವಿಲೀನ ಮಾಆಡಿ ಈ ಕಂಪನಿಗಳ ಪುನಶ್ಚೇತನಕ್ಕೆ ಕಳೆದ ತಿಂಗಳು ಕೇಂದ್ರ ಸರ್ಕಾರ 69 ಸಾವಿರ ಕೋಟಿ ರು. ಪ್ಯಾಕೇಜ್ ಪ್ರಕಟಿಸಿತ್ತು ಹಾಗೂ ವಿಆರ್‌ಎಸ್ ಯೋಜನೆ ಜಾರಿಗೆ ನಿರ್ಧರಿಸಿತ್ತು.

 

click me!