ಚಿತ್ರದುರ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಪರವಾಗಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ವೇಳೆ ಎದೆನೋವೆಂದು ಆಸ್ಪತ್ರೆಗೆ ದಾಖಲಾದ ಸಚಿವ ಜಮೀರ್ ಅಹಮದ್ ಖಾನ್ ಕೆಲವೇ ನಿಮಿಷಗಳಲ್ಲಿ ಪ್ರಚಾರಕ್ಕೆ ವಾಪಸ್ ಬಂದು ಸೇರಿಕೊಂಡರು.
ಚಿತ್ರದುರ್ಗ (ಏ.15): ರಾಜ್ಯದಾದ್ಯಂತ ಲೋಕಸಭಾ ಚುನಾವಣಾ ಕಾವು ಜೋರಾಗಿದೆ. ಸೋಮವಾರ ಚಿತ್ರದುರ್ಗದ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡುವಾಗ ಎದೆನೋವು ಕಾಣಿಸಿಕೊಂಡು ದಿಢೀರನೆ ಆಸ್ಪತ್ರೆಗೆ ದಾಖಲಾದ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝಡ್. ಜಮೀರ್ ಅಹಮದ್ ಖಾನ್ ಅವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪುನಃ ಕಾಂಗ್ರೆಸ್ ಸಮಾವೇಶದ ವೇದಿಕೆಯಲ್ಲಿ ಬಂದು ಪಾಲ್ಗೊಂಡ ಘಟನೆ ನಡೆಯಿತು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್ ಚಂದ್ರಪ್ಪ ಪರ ಮತಯಾಚನೆಗೆ ಆಗಮಿಸಿದ್ದ ಸಚಿವ ಜಮೀರ್ ಅಹಮದ್ ಖಾನ್ ಅವರು, ಪ್ರಚಾರದ ರ್ಯಾಲಿಯ ವೇಳೆ ಎದೆನೋವೆಂದು ಕುಳಿತುಕೊಂಡರು. ಕೂಡಲೇ ಅವರ ಸಹಚರರು ಹತ್ತಿರದ ಬಸವೇಶ್ವರ ಆಸ್ಪತ್ರೆಗೆ ದಾಖಲು ಮಾಡಿದರು. ಆಗ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞ ಡಾ.ಕಾರ್ತಿಕ್ ಅವರಿಂದ ಚಿಕಿತ್ಸೆ ಪಡೆದ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ನಾರ್ಮಲ್ ಇದೆ ಎಂದು ಮಾಹಿತಿ ನೀಡಿದರು. ಇಸಿಜಿ, ಎಕೋ ನಾರ್ಮಲ್ ಇದೆ ಎಂದು ವೈದ್ಯರು ತಿಳಿಸಿದ ನಂತರ ಪುನಃ ಆಸ್ಪತ್ರೆಯಿಂದ ಚುನಾವಣಾ ಪ್ರಚಾರದ ಕಾರ್ಯಕ್ಕೆ ವಾಪಸ್ ಬಂದರು ಮತಯಾಚನೆಯಲ್ಲಿ ಪಾಲ್ಗೊಂಡರು.
undefined
ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕ ಹಾಗೂ ಎಂಎಲ್‌ಸಿ ಟಿ.ಎ. ಶರವಣಗೆ ಲಘು ಹೃದಯಾಘಾತ
ಚಿತ್ರದುರ್ಗ ಬಸವೇಶ್ವರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಹೊರಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಜಮೀರ್ ಅಹಮದ್ ಖಾನ್ ಅವರು, ಬೆಳಗ್ಗೆ ಎರಡು ಒಡೆ ತಿಂದ ಕಾರಣಕ್ಕೆ ಗ್ಯಾಸ್ಟ್ರಿಕ್ ಪ್ರಾಬ್ಲಂ ಆಗಿತ್ತು. ಹೀಗಾಗಿ, ಎದೆ ನೋವು ಕಾಣಿಸಿಕೊಂಡಂತಾಗಿ ಆಸ್ಪತ್ರೆಗೆ ದಾಖಲಾಗಿದ್ದೆನು. ಅಲ್ಲಿ ಹೃದ್ರೋಗ ತಜ್ಞ ವೈದ್ಯರು ತಪಾಸಣೆ ಮಾಡಿದ್ದಾರೆ. ಜೊತೆಗೆ, ಇಸಿಜಿ, ಎಕೋ ಎಲ್ಲ ಪರೀಕ್ಷೆಗಳನ್ನು ಮಾಡಲಾಗಿದ್ದು, ಎಲ್ಲವೂ ನಾರ್ಮಲ್ ಇದೆ ಡೋಂಟ್ ವರಿ ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ, ನಾನು ಪುನಃ ಕಾಂಗ್ರೆಸ್ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಹೇಳಿದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ 2.90 ಕೋಟಿ ರೂ. ದಾಖಲೆಗಳಿಲ್ಲದ ಹಣ ಜಪ್ತಿ
ಎದೆನೋವೆಂದು ಆಸ್ಪತ್ರೆಗೆ ದಾಖಲಾದ ಸಚಿವ ಜಮೀರ್ ಅಹಮದ್ ಖಾನ್ ಅವರ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅವರ ಹಿಂಬಾಲಕರು ಆಸ್ಪತ್ರೆ ಬಳಿಯೇ ಎದುರು ನೋಡುತ್ತಿದ್ದರು. ಆಸ್ಪತ್ರೆಯಿಂದ ಹೊರ ಬಂದು ಕಾರಿನಲ್ಲಿ ಹತ್ತಿಕೊಂಡು ಜನರತ್ತ ಕೈ ಬೀಸುತ್ತಾ ತಾವು ಆರೋಗ್ಯವಾಗಿದ್ದೇವೆ ಎಂಬ ಮಾಹಿತಿಯನ್ನು ರವಾನಿಸಿದ್ದಾರೆ. ನಂತರ, ತಾವು ಚಿತ್ರದುರ್ಗದ ಉಮಾಪತಿ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಕಾಂಗ್ರೆಸ್ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿ ಅಲ್ಲಿಂದ ತೆರಳಿದರು.