
ಕಾರವಾರ (ಸೆ.22) ಕಾಮಿಡಿ ಯೂಟ್ಯೂಬರ್ ಮುಕಳೆಪ್ಪ ಮದುವೆ ಭಾರಿ ವಿವಾದಕ್ಕೆ ಕಾರಣವಾಗಿದೆ. ಹಿಂದೂ ಯುವತಿಯನ್ನು ಮದುವೆಯಾಗಿರುವ ಮುಕಳೆಪ್ಪ ವಿರುದ್ಧ ಹಲವು ಗಂಭೀರ ಆರೋಪ ಕೇಳಿಬಂದಿದೆ. ವಿಡಿಯೋ, ಟೂರ್ ಎಂದು ಕರೆದುಕೊಂಡು ಹೋಗಿ ಮಗಳಿಗೆ ಮೋಸ ಮಾಡಿದ್ದಾನೆ ಎಂದು ತಾಯಿ ಆರೋಪಿಸಿದ್ದರು. ಇದೀಗ ಸಬ್ ರಿಜಿಸ್ಟ್ರಟರ್ ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ ಮಕಳೆಪ್ಪ ಮದುವೆ ಮಾಡಿಸಿದ್ದಾರೆ ಎಂದು ಯುವತಿ ತಾಯಿ ಶಿವಕ್ಕ ಆರೋಪಿಸಿದ್ದಾರೆ. ಹಿಂದೂ ಪರ ಸಂಘಟನೆಗಳು ಸಬ್ ರಿಜಿಸ್ಟ್ರರ್ ಕಚೇರಿಗೆ ಮುತ್ತಿಗೆ ಹಾಕಿದೆ.
ಮುಕಳೆಪ್ಪ ಹಿಂದೂ ಯುವತಿಯರ ಜೊತೆಗೆ ಕಾಮಿಡಿ ವಿಡಿಯೋ ಮಾಡುತ್ತಿದ್ದ ಎಂದು ಹಿಂದೂ ಸಂಘಟನೆಗಳು ಆರೋಪಿಸಿದೆ. ವಿಡಿಯೋ, ಹೆಸರು, ಹಣದ ಆಮಿಷಕ್ಕೆ ಹಿಂದೂ ಯುವತಿಯರು ಈತನ ಜೊತೆ ಕಾಮಿಡಿ ವಿಡಿಯೋ ಮಾಡುತ್ತಿದ್ದಾರೆ. ಇದೀಗ ಹಿಂದೂ ಹೆಣ್ಣುಮಗಳಿಗೆ ಮೋಸ ಮಾಡಿದ್ದಾನೆ. ಸುಳ್ಳು ದಾಖಲೆ ನೀಡಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಸಬ್ ರಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದಾನೆ. ಸಬ್ ರಿಜಿಸ್ಟ್ರರ್ ಅಧಿಕಾರಿಗಳು ಹಣ ಪಡೆದು ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿದ್ದಾರೆ ಎಂದು ಗಾಯತ್ರಿ ತಾಯಿ ಶಿವಕ್ಕ ಆರೋಪಿಸಿದ್ದಾರೆ.
ಮಕಳೆಪ್ಪ ವಿವಾಹ ನಿಯಮ ಬಾಹಿರವಾಗಿದೆ.ಸಬ್ ರಿಜಿಸ್ಟ್ರಾರ್ ನಿಯಮ ಮೀರಿ ಹುಬ್ಬಳ್ಳಿ- ಧಾರವಾಡ ನಿವಾಸಿಗಳನ್ನು ಮುಂಡಗೋಡ ನಿವಾಸಿಗಳೆಂದು ಸುಳ್ಳು ದಾಖಲೆ ನೀಡಿದ್ದಾರೆ. ಜೂನ್ 5 ರಂದು ದಾಖಲೆ ನೀಡಿ ಜೂನ್ 5 ರಂದೇ ವಿವಾಹ ನೋಂದಣಿ ಮಾಡಲಾಗಿದೆ. ನಿಯಮದಂತೆ ವಿವಾಹವಾಗೋರು ಒಬ್ಬರಾದ್ರು ಸ್ಥಳೀಯರಾಗಿರಬೇಕು. ಆದರೆ ಇಲ್ಲಿ ಸುಳ್ಳು ದಾಖಲೆ ಸೃಷ್ಟಿಸಲಾಗಿದೆ ಎಂದು ಶಿವಕ್ಕ ಆರೋಪಿಸಿದ್ದಾರೆ.
ನಿಯಮವನ್ನೇ ಸಬ್ ರಿಜಿಸ್ಟ್ರಾರ್ ಗಾಳಿಗೆ ತೂರಿದ್ದಾರೆ. ಕರಾರು ಪತ್ರ ಪಡೆದಿರುವ ದಿನವೇ ವಿವಾಹ ನೋಂದಣಿ ಮಾಡಲಾಗಿದೆ. ಇದು ಹೇಗೆ ಸಾಧ್ಯ ಎಂದು ಶಿವಕ್ಕ ಪ್ರಶ್ನಿಸಿದ್ದಾರೆ . ಸಬ್ ರಿಜಿಸ್ಟ್ರಾರ್ ವಿರುದ್ಧ ಮುಂಡಗೋಡು ಠಾಣೆಯಲ್ಲಿ ದೂರು ನೀಡಲು ತಾಯಿ ಶಿವಕ್ಕ ಮುಂದಾಗಿದ್ದಾರೆ.
ಹಿಂದೂಪರ ಸಂಘಟನೆಗಳು ಸಬ್ ರಿಜಿಸ್ಟರ್ ಕಚೇರಿಗೆ ಮುತ್ತಿಗೆ ಹಾಕಿದೆ. ಮಕಳೆಪ್ಪ ವಿವಾಹ ಇದೀಗ ಭಾರಿ ಕೋಲಾಹಲ ಸೃಷ್ಟಿಸಿದೆ. ಸ್ಪಷ್ಟನೆ ನೀಡುವಂತೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಪಟ್ಟು ಹಿಡಿದ ಘಟನೆ ನಡೆದಿದೆ. ಪೊಲೀಸರು ಮಧ್ಯಪ್ರವೇಶಿಸಿ ಹೋರಾಟ ತಿಳಿಗೊಳಿಸುವ ಪ್ರಯತ್ನ ಮಾಡಿದ್ದಾರೆ.
ಹಿಂದೂ ಯುವತಿಯರು ಟಾರ್ಗೆಟ್ , ಹಿಂದೂ ಧರ್ಮಕ್ಕೆ ಅವಮಾನ
ಮಕಳೆಪ್ಪ ವಿರುದ್ದ ಹಿಂದೂ ಪರ ಸಂಘಟನೆಗಳು ಬಜರಂಗದಳ ಕೂಡ ಆಕ್ರೋಶಗೊಂಡಿದೆ. ಹಿಂದೂ ಯುವತಿಯರನ್ನೇ ಟಾರ್ಗೆಟ್ ಮಾಡಿ ವಿಡಿಯೋ ಮಾಡುತ್ತಾನೆ. ಆತನ ಸಮುದಾಯದ ಹೆಣ್ಣುಮಕ್ಕಳನ್ನು ಬಳಸಿಕೊಂಡು ವಿಡಿಯೋ ಮಾಡುವುದಿಲ್ಲ. ವಿಡಿಯೋ ಮಾಡಲು ಹಿಂದೂ ಯುವತಿಯರೇ ಬೇಕು. ಕೆಲ ವಿಡಿಯೋದಲ್ಲಿ ಮುಕಳೆಪ್ಪ ಹಿಂದೂ ಧರ್ಮಕ್ಕೆ ಅವಮಾನ ಮಾಡಿದ್ದಾನೆ ಎಂದು ಬಜರಂಗದಳ ಆರೋಪಿಸಿದೆ. ಇಷ್ಟೇ ಅಲ್ಲ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ