ಇದೇನು ಸಿಲಿಕಾನ್ ಸಿಟಿನಾ? ಪಟ್ಟಾಯ ನಗರವಾ? HSR ಲೇಔಟಲ್ಲಿ ಬೆತ್ತಲೆ ಓಡಾಡಿದ ಯುವತಿ ವಿಡಿಯೋ ವೈರಲ್!

Published : May 04, 2025, 04:42 AM ISTUpdated : May 04, 2025, 07:07 AM IST
ಇದೇನು ಸಿಲಿಕಾನ್ ಸಿಟಿನಾ? ಪಟ್ಟಾಯ ನಗರವಾ? HSR ಲೇಔಟಲ್ಲಿ ಬೆತ್ತಲೆ ಓಡಾಡಿದ ಯುವತಿ ವಿಡಿಯೋ ವೈರಲ್!

ಸಾರಾಂಶ

ಯುವತಿಯೊಬ್ಬಳು ಹಾಡಹಗಲೇ ರಸ್ತೆಯಲ್ಲಿ ನಗ್ನವಾಗಿ ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.  

ಬೆಂಗಳೂರು (ಮೇ.4): ಯುವತಿಯೊಬ್ಬಳು ಹಾಡಹಗಲೇ ರಸ್ತೆಯಲ್ಲಿ ನಗ್ನವಾಗಿ ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕೆಲ ತಿಂಗಳ ಹಿಂದೆ ಎಚ್‌ಎಸ್‌ಆರ್‌ ಲೇಔಟ್‌ನ ಅಗರ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ಪೇಯಿಂಗ್‌ ಗೆಸ್ಟ್‌(ಪಿಜಿ)ನಲ್ಲಿ ತಂಗಿರುವ ಯುವತಿಯ ಈ ವರ್ತನೆ ಸ್ಥಳೀಯ ನಿವಾಸಿಗಳನ್ನು ಮುಜುಗರಕ್ಕೀಡು ಮಾಡಿದೆ. ಈ ಬಗ್ಗೆ ಪ್ರಶ್ನೆ ಮಾಡಿದ ಸ್ಥಳೀಯ ನಿವಾಸಿಗಳೊಂದಿಗೆ ಯುವತಿ ಅಸಭ್ಯವಾಗಿ ವರ್ತಿಸಿದ್ದಾಳೆ ಎನ್ನಲಾಗಿದೆ. ಈ ಭಾಗದಲ್ಲಿ ಪಿಜಿಗಳು ಹೆಚ್ಚಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಯುವಕ-ಯುವತಿಯರ ವರ್ತನೆಗಳು ಮಿತಿ ಮೀರಿವೆ. ಮಹಿಳೆಯರು, ಮಕ್ಕಳು, ವೃದ್ಧರು ರಸ್ತೆಗಳಲ್ಲಿ ಓಡಾಡಲು ತೊಂದರೆಯಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುವತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಬಾಲಕಿ ಮೇಲೆ ಬ್ಯಾಡ್ಮಿಂಟನ್‌ ಟ್ರೈನರ್‌ ರೇಪ್‌! ಐದಾರು ಬಾಲಕಿಯರ ನಗ್ನ ವಿಡಿಯೋ ಸಂಗ್ರಹ

ದೂರು ನೀಡಿದರೂ ಕ್ರಮವಿಲ್ಲ:

ಎಚ್‌ಎಸ್‌ಆರ್‌ ಬಡಾವಣೆಯ ಅಗರ ಲೇಔಟ್‌ನಲ್ಲಿ ಸಾಕಷ್ಟು ಪಿಜಿಗಳಿವೆ. ಆರೇಳು ಅಂತಸ್ತಿನ ಕಟ್ಟಡಗಳನ್ನು ನಿರ್ಮಿಸಿ, ಅದರೊಳಗೆ ಸಣ್ಣ ರೂಮ್‌ಗಳನ್ನು ಪಿಜಿಗಳಾಗಿ ಪರಿವರ್ತಿಸಲಾಗಿದೆ. ಹಣದಾಸೆಗೆ ಯಾವುದೇ ಅನುಮತಿ ಪಡೆಯದೆ ಅಕ್ರಮವಾಗಿ ಕಟ್ಟಡ ಮಾಲೀಕರು ಪಿಜಿಗಳನ್ನು ನಡೆಸುತ್ತಿದ್ದಾರೆ. ಹಗಲು-ರಾತ್ರಿ ಎನ್ನದೇ ಯುವಕ-ಯುವತಿಯರು ರಸ್ತೆಗಳಲ್ಲಿ ಓಡಾಡುತ್ತಾರೆ. ಸಾರ್ವಜನಿಕರ ಎದುರೇ ಅಸಭ್ಯವಾಗಿ ವರ್ತಿಸುತ್ತಾರೆ. ಈ ಬಗ್ಗೆ ಪೊಲೀಸರು, ಬಿಬಿಎಂಪಿ ಸೇರಿ ಸಂಬಂಧಿಸಿದವರಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: 10ನೇ ತರಗತಿ ಬಾಲಕನ ಬೆತ್ತಲೆಗೊಳಿಸಿ ವಿಡಿಯೋ ಮಾಡಿ ಬ್ಲಾಕ್‌ಮೇಲ್!

ಅಸಭ್ಯ ವರ್ತನೆ:

ಯುವಕ-ಯುವತಿಯರು ರಾತ್ರಿ ವೇಳೆ ಪಿಜಿಗಳಲ್ಲಿ ಪಾರ್ಟಿಗಳನ್ನು ಮಾಡುತ್ತಾರೆ. ಅಮಲಿನಲ್ಲಿ ರಸ್ತೆಗಳಿಗೆ ಬಂದು ಮುಜುಗರವಾಗುವಂತೆ ವರ್ತಿಸುತ್ತಾರೆ. ಕಟ್ಟಡಗಳಿಂದ ಕಟ್ಟಡಕ್ಕೆ ಜಿಗಿಯುತ್ತಾರೆ. ಮಹಿಳೆಯರು, ಹುಡುಗಿಯರು ಮಲಗಿರುವ ರೂಮ್‌ಗಳ ಕಿಟಿಕಿ ಬಳಿ ಬಂದು ಇಣುಕಿ ನೋಡುತ್ತಾರೆ. ಅಮಲಿನಲ್ಲಿ ಜೋರಾಗಿ ಕಿರುಚುವುದು, ಗಲಾಟೆ ಮಾಡುತ್ತಾರೆ. ಈ ಬಗ್ಗೆ ಪ್ರಶ್ನಿಸಿದರೆ, ಸ್ಥಳೀಯರ ಜೊತೆ ಜಗಳಕ್ಕೆ ಬರುತ್ತಾರೆ. ಈ ಪಿಜಿಗಳಿಂದ ಸ್ಥಳೀಯ ನಿವಾಸಿಗಳಿಗೆ ನೆಮ್ಮದಿ ಇಲ್ಲದಂತಾಗಿದೆ. ಕೂಡಲೇ ಪೊಲೀಸರು ಅಕ್ರಮ ಪಿಜಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌