ಉತ್ತರ ಪ್ರದೇಶ ರಾಜ್ಯ ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪ್ರಮಾಣ ವಚನ ಸ್ವೀಕಾರದ ಬೃಹತ್ ಸಮಾರಂಭದಲ್ಲಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಭಾಗವಹಿಸಿದ್ದರು.
ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಮಾ.25): ಉತ್ತರ ಪ್ರದೇಶ ರಾಜ್ಯ ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರ ಪ್ರಮಾಣ ವಚನ ಸ್ವೀಕಾರದ ಬೃಹತ್ ಸಮಾರಂಭದಲ್ಲಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ (Sri Vishwa Prasanna Tirtha) ಶ್ರೀಪಾದರು ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಲ್ಲಿ ಒಬ್ಬರಾಾಗಿ ಪಾಲ್ಗೊಂಡಿದ್ದು ಗಮನಸೆಳೆಯಿತು. ರಾಜ್ಯದಿಂದ ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ , ಇಸ್ಕಾನ್‌ನ ಮಧುಪಂಡಿತ ದಾಸ್ ಕೂಡಾ ಆಗಮಿಸಿದ್ದರು.
ದೇಶಾದ್ಯಂತ ಅನೇಕ ರಾಜ್ಯಗಳಿಂದ ನೂರಾರು ಸಾಧು ಸಂತರನ್ನು ಆಮಂತ್ರಿಸಲಾಗಿದ್ದು, ಅವರ ಆತಿಥ್ಯಕ್ಕಾಗಿ ಹಿರಿಯ ಅಧಿಕಾರಿಗಳಾದ ಅವನೀಶ್ ಅವಸ್ಥಿ ,ಆರ್ ಪಿ ಸಿಂಗ್ , ಅಶೋಕ್ ತಿವಾರಿ, ಆರ್ ಬಿ ಎಸ್ ರಾವತ್ ಮೊದಲಾದವರ ನೇತೃತ್ವದಲ್ಲಿ ಪ್ರತ್ಯೇಕ ತಂಡ ರಚಿಸಲಾಗಿತ್ತು ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪೇಜಾವರಶ್ರೀಗಳ ಆಪ್ತರು ತಿಳಿಸಿದ್ದಾರೆ. ಆಹ್ವಾನಿತ ಅತಿಥಿಗಳ ಸುವ್ಯವಸ್ಥೆಯ ಆಸ್ಥೆ ವಹಿಸಲಾಗಿತ್ತು . ಸಮಾರಂಭದಲ್ಲೂ ಮಠಾಧೀಶರು ಸ್ವಾಮೀಜಿಯವರಿಗೆ ಪ್ರತ್ಯೇಕ ಆಸನ ವ್ಯವಸ್ಥೆಗೊಳಿಸಲಾಗಿತ್ತು .
UP New CM ಯೋಗಿ ಪ್ರಮಾಣವಚನ ಸ್ವೀಕರಿಸಿದ ಕ್ರೀಡಾಂಗಣ ಕಟ್ಟಿದ್ದು ನಾವು, ಅಖಲೇಶ್ ಯಾದವ್ ಹೇಳಿಕೆಗೆ ಆಕ್ರೋಶ!
ಉತ್ತರಪ್ರದೇಶದಲ್ಲಿ ಸಂಭ್ರಮ: ಯೋಗಿ ಆದಿತ್ಯನಾಥ್ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವುದನ್ನು ಉತ್ತರ ಪ್ರದೇಶದ ಜನ ಸಂಭ್ರಮಿಸುತ್ತಿರುವುದು ಎಲ್ಲೆಲ್ಲೂ ಕಂಡು ಬಂತು. ರಸ್ತೆ ಇಕ್ಕೆಲಗಳಲ್ಲಿ , ವಿಮಾನ ನಿಲ್ದಾಣ ,ಬಸ್ ನಿಲ್ದಾಣ ಗಳಲ್ಲಿ ನೂರಾರು ನೃತ್ಯ ತಂಡಗಳ ನೃತ್ಯ ಪ್ರದರ್ಶನ ಬ್ಯಾಂಡ್ ಇತ್ಯಾದಿ ವಾದ್ಯಗಳನ್ನು ನುಡಿಸುತ್ತಾ ಸಂಭ್ರಮಿಸುತ್ತಿದ್ದರು ಎಂದು ಶ್ರೀಗಳ ಜೊತೆ ಉಡುಪಿಯಿಂದ ತೆರಳಿದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಶ್ರೀಗಳ ಜೊತೆ ಬೆಂಗಳೂರಿನ ಉದ್ಯಮಿ ರಾಮ್ ಪ್ರಸಾದ್ , ವಾಸುದೇವ ಭಟ್ ಪೆರಂಪಳ್ಳಿ , ದೆಹಲಿ ಪೇಜಾವರ ಮಠದ ಮೆನೇಜರ್ ದೇವಿಪ್ರಸಾದ್ ಭಟ್ ಕೃಷ್ಣ ಭಟ್ ಉಪಸ್ಥಿತರಿದ್ದರು .
ಸ್ವಾಮೀಜಿಯವರನ್ನು ಕಾಡಿದ ಟ್ರಾಫಿಕ್ ಜಾಮ್: ಲಕ್ನೋದಲ್ಲಿ ಶುಕ್ರವಾರ ಎಲ್ಲೆಂದರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು .ಲಕ್ಷಾಂತರ ಜನ ಸಮಾರಂಭಕ್ಕೆ ಆಗಮಿಸಿದ್ದರಿಂದ ಮತ್ತು ಮೋದಿ ಅಮಿತ್ ಶಾ ಸೇರಿದಂತೆ ಗಣ್ಯಾತಿಗಣ್ಯರ ದಂಡೇ ಆಗಮಿಸಿದ್ದರಿಂದ ಅವರ ಬೆಂಗಾವಲು ವಾಹನಗಳ ಸರತಿ ಸಾಲೇ ಪ್ರಮುಖ ರಸ್ತೆಗಳಲ್ಲಿ ಸೇರಿತ್ತು. ಇದರಿಂದ ಉಂಟಾದ ಟ್ರಾಫಿಕ್ ಜಾಮ್ ನಲ್ಲಿ ಅನೇಕರು ಸಿಲುಕಿದರು .ಸ್ಚತಃ ಪೇಜಾವರ ಶ್ರೀಗಳ ವಾಹನವೂ ಸರತಿಯಲ್ಲಿ ಮುಂದೆ ಹೋಗದ ಪರಿಸ್ಥಿತಿ ಎದುರಾಯ್ತು. ಈ ವೇಳೆ ಶ್ರೀಗಳು ವಾಹನದಿಂದ ಇಳಿದು ಸುಮಾರು ಎರಡು ಕಿ ಮೀ ನಡೆದೇ ತೆರಳಿ ಸ್ಟೇಡಿಯಂ ತಲುಪಿದರು.
Uttar Pradesh ಯೋಗಿ ಜೊತೆ ಇಬ್ಬರು ಉಪಮುಖ್ಯಮಂತ್ರಿ, 47 ಸಚಿವರ ಪ್ರಮಾಣವಚನ, 70 ನಾಯಕರಿಗೆ RT PCR ಟೆಸ್ಟ್!
ಮೋದಿ, ಶಾ ಭಾಗಿ: ಉತ್ತರ ಪ್ರದೇಶದಲ್ಲಿ ದಾಖಲೆಯ 2ನೇ ಅವಧಿಗೆ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈಶ್ವರನ ಹೆಸರಿನಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ಅಟಲ್ ಬಿಹಾರಿ ವಾಜಪೇಯಿ ಇಕಾನಾ ಸ್ಟೇಡಿಯಂನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಯುಪಿ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಪ್ರತಿಜ್ಞಾವಿಧಿ ಬೋಧಿಸಿದರು. ಯೋಗಿ ಪ್ರಮಾಣವಚನ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಬಿಜೆಪಿ ಆಡಳಿತದ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದಾರೆ. ಇನ್ನು ಇಬ್ಬರು ಉಪ ಮುಖ್ಯಮಂತ್ರಿಗಳಾಗಿ ಕೇಶವ್ ಪ್ರಸಾದ್ ಮೌರ್ಯ ಹಾಗೂ ಬ್ರಜೇಶ್ ಪಾಠಕ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ ಈ ಬಾರಿ ಯೋಗಿ ಸಂಪುಟದಲ್ಲಿ ಇಬ್ಬರು ಉಪಮುಖ್ಯಮಂತ್ರಿಗಳು ಕಾರ್ಯನಿರ್ವಹಿಸಲಿದ್ದಾರೆ.