
ಬೆಂಗಳೂರು (ಜು.17) : ಯಶವಂತಪುರ ರೈಲು ನಿಲ್ದಾಣದ ಮರು ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ನಾಳೆ ಜು.18ರಿಂದ ಪ್ಲಾಟ್‌ಫಾಮ್‌ರ್ ನಂ.1 (ಯಶವಂತಪುರ ಮಾರುಕಟ್ಟೆಬದಿ) ಪ್ರವೇಶ ತಾತ್ಕಾಲಿಕವಾಗಿ ಬಂದ್ ಆಗಲಿದೆ.
ಜನತೆ ಪ್ಲಾಟ್‌ಫಾಮ್‌ರ್‍ಗಳನ್ನು ಪ್ರವೇಶಿಸಲು ತುಮಕೂರು ರಸ್ತೆಯ ಯಶವಂತಪುರ ಮೆಟ್ರೋ ನಿಲ್ದಾಣದ ಕಡೆ ಇರುವ ಪ್ಲಾಟ್‌ಫಾಮ್‌ರ್ ಸಂಖ್ಯೆ 6 ರಿಂದ ಆಗಮಿಸಲು ನೈಋುತ್ಯ ರೈಲ್ವೇ ಬೆಂಗಳೂರು ವಲಯ ತಿಳಿಸಿದೆ. ಎಲ್ಲಾ ಪ್ಲಾಟ್‌ಫಾಮ್‌ರ್‍ಗಳು ನಿಲ್ದಾಣದ ಎರಡೂ ಬದಿಗಳಲ್ಲಿ ಪಾದಾಚಾರಿ ಸೇತುವೆಗಳೊಂದಿಗೆ ಸಂಪರ್ಕ ಹೊಂದಿವೆ. ಶುಲ್ಕ ನೀಡಿ ಬಳಸಬಹುದಾದ ಬ್ಯಾಟರಿ ಚಾಲಿತ ಕಾರ್ ವ್ಯವಸ್ಥೆಯೂ ಲಭ್ಯವಿದೆ.
ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ರೈಲಿನಲ್ಲಿ ಪ್ರಯಾಣಿಸುವ ಭಕ್ತರ ಗಮನಕ್ಕೆ
ಪ್ಲಾಟ್‌ಫಾಮ್‌ರ್ ಸಂಖ್ಯೆ 6ರ ಬಳಿಯಿಂದ ಮಾತ್ರ ನಿಲ್ದಾಣಕ್ಕೆ ಆಗಮಿಸುವವರಿಗೆ ವಾಹನ ನಿಲುಗಡೆ ಸೌಲಭ್ಯವಿದೆ. ನಿಲ್ದಾಣದಲ್ಲಿ ಡಿಜಿಟಲ್ ಮಾಹಿತಿ ಫಲಕಗಳ ಸೇವೆಯನ್ನು ಕೆಲವು ದಿನಗಳ ಕಾಲ ಸ್ಥಗಿತಗೊಳಿಸಲಾಗಿದ್ದು, ಈ ಅವಧಿಯಲ್ಲಿ ಪ್ರಕಟಣೆಗಳ ಮೂಲಕ ಮಾಹಿತಿಯನ್ನು ಪ್ರಸಾರ ಮಾಡಲಾಗುತ್ತದೆ. ಪ್ರಯಾಣಿಕರು ನೆರವಿಗಾಗಿ ಸ್ಟೇಷನ್ ಮಾಸ್ಟರ್, ಡೆಪ್ಯುಟಿ ಸ್ಟೇಷನ್ ಮಾಸ್ಟರ್, ಮುಖ್ಯ ಟಿಕೆಟ್ ಇನ್ಸ್‌ಪೆಕ್ಟರ್ ಅಥವಾ ಟಿಕೆಚ್ ತಪಾಸಣೆ ಸಿಬ್ಬಂದಿ ಸಂಪರ್ಕಿಸಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ