ಕೊರೋನಾ ಕಂಟಕದ ಮಧ್ಯೆ ನೀರಿನ ಸಂಕಷ್ಟ: ಮಾಹಾ ಮೊರೆ ಹೋದ ಬಿಎಸ್‌ವೈ...!

By Suvarna News  |  First Published May 2, 2020, 10:11 PM IST

ಲಾಕ್‌ಡೌನ್ ಮಧ್ಯೆ ಬಡ ಹಾಗೂ ನಿರ್ಗತಿಕ ಜನರಗೆ ಕೂಲಿ ಇಲ್ಲದೆ ಹಣ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಆಹಾರಕ್ಕೂ ಪರದಾಡುವಂತಾಗಿದೆ. ಅಲ್ಲದೇ ಇದೀಗ ನೀರಿನ ಸಮಸ್ಯೆ ಎದುರಾಗಿದ್ದು, ಈ ಬಗ್ಗೆ ಸಿಎಂ ಮಾಹಾ ಮೊರೆ ಹೋಗಿದ್ದಾರೆ.


ಬೆಂಗಳೂರು, (ಮೇ.02): ಒಂದೆಡೆ ಕೊರೋನಾ ವೈರಸ್ ಕಟ್ಟಿಕಾಡುತ್ತಿದ್ರೆ, ಮತ್ತೊಂದೆಡೆ ರಾಜ್ಯದಲ್ಲಿ ನೀರಿನ ತೀವ್ರ ಅಭಾವ ಎದುರಾಗಿದೆ. 

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ತೀವ್ರ ಕುಡಿಯುವ ನೀರು ಸಮಸ್ಯೆ ಎದುರಾಗಿದ್ದು, ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಮೂರು ಟಿಎಂಸಿ, ಉಜಿನಿ ಜಲಾಶಯದಿಂದ ಭೀಮಾ ನದಿಗೆ ಇನ್ನೂ ಮೂರು ಟಿಎಂಸಿ ನೀರು ಬಿಡುಗಡೆ ಮಾಡಬೇಕೆಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಮನವಿ ಮಾಡಿದ್ದಾರೆ.

Latest Videos

undefined

8 ತಬ್ಲೀಘಿ ಮೇಲೆ ಮರ್ಡರ್ ಕೇಸ್, ಅಲಿಯಾ ನೀಡಿದ್ರಾ iಫೋನ್ ಪೋಸ್? ಮೇ.2ರ ಟಾಪ್ 10 ಸುದ್ದಿ! 

ರಾಜ್ಯದಲ್ಲಿ ತೀವ್ರ ಒಣ ಹವೆ ಮುಂದುವರಿದಿರುವ ಹಿನ್ನಲೆಯಲ್ಲಿ ಬೆಳಗಾವಿ, ವಿಜಯಪುರ, ಬಾಗಲಕೋಟ, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ತೀವ್ರ ತೊಂದರೆಯಿದ್ದು, ಮಹಾರಾಷ್ಟ್ರ ದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಹಾಗೂ ಉಜನಿ ಜಲಾಶಯದಿಂದ ಭೀಮಾ ನದಿಗೆ ತಲಾ 3.00 ಟಿಎಂಸಿ ನೀರು ಬಿಡುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕ ಸರ್ಕಾರ ಈ ಹಿಂದೆ ಮಾಡಿಕೊಂಡಿದ್ದ ಎಲ್ಲ ಮನವಿಗಳಿಗೆ ಮಹಾರಾಷ್ಟ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿ ಕೊಯ್ನಾ ಜಲಾಶಯದಿಂದ ರಾಜ್ಯಕ್ಕೆ ನೀರು ಬಿಡುಗಡೆ ಮಾಡಿದೆ ಎಂಬುದನ್ನು ಪತ್ರದಲ್ಲಿ ಸ್ಮರಿಸಿರುವ ಬಿಎಸ್‌ವೈ, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಿ ರಾಜ್ಯಕ್ಕೆ ನೀರು ಬಿಡುಗಡೆ ಮಾಡಬೇಕು ಎಂದು ಪತ್ರದ ಮೂಲಕ ಕೋರಿಕೊಂಡಿದ್ದಾರೆ.

ಕುಡಿವ ನೀರಿಗಾಗಿ ಮಹಾರಾಷ್ಟ್ರಕ್ಕೆ ಮುಖ್ಯಮಂತ್ರಿ ಮನವಿ

ಮುಖ್ಯಮಂತ್ರಿ ಶ್ರೀ ಅವರು, ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದು, ಮಹಾರಾಷ್ಟ್ರದ ಜಲಾಶಯಗಳಿಂದ ಕರ್ನಾಟಕದ ನದಿಗಳಿಗೆ ನೀರು ಹರಿಸುವಂತೆ ಕೋರಿದ್ದಾರೆ.
1/2 pic.twitter.com/sjJrKb1sEX

— CM of Karnataka (@CMofKarnataka)
click me!