ಕುಣಿಗಲ್ ತಾಲ್ಲೂಕಿನ ಎಡೆಯೂರಿನಲ್ಲಿರುವ ಸಿದ್ದಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕುಟುಂಬದಿಂದ ಕಲ್ಯಾಣ ಮಂಟಪ ನಿರ್ಮಿಸಲಾಗಿದೆ. ಅಂದಾಜು 1.5 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ಕಲ್ಯಾಣ ಮಂಟಪಕ್ಕೆ ದಿ. ಮೈತ್ರಾದೇವಿ ಯಡಿಯೂರಪ್ಪ ಮಂಗಳ ಭವನ ಎಂದು ಹೆಸರಿಡಲಾಗಿದೆ.
ಮಹಂತೇಶ್ ಕುಮರ್ ಏಷ್ಯನೆಟ್ ಸುವರ್ಣ ನ್ಯೂಸ್
ತುಮಕೂರು (ನ.13) : ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಎಡೆಯೂರಿನಲ್ಲಿರುವ ಸಿದ್ದಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕುಟುಂಬದಿಂದ ಕಲ್ಯಾಣ ಮಂಟಪ ನಿರ್ಮಿಸಲಾಗಿದೆ. ಅಂದಾಜು 1.5 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ಕಲ್ಯಾಣ ಮಂಟಪಕ್ಕೆ ದಿ. ಮೈತ್ರಾದೇವಿ ಯಡಿಯೂರಪ್ಪ ಮಂಗಳ ಭವನ ಎಂದು ಹೆಸರಿಡಲಾಗಿದೆ. ಯಡಿಯೂರಪ್ಪ ಕುಟುಂಬದ ಪಿಇಎಸ್ ಟ್ರಸ್ಟ್ ವತಿಯಿಂದ ಈ ಕಲ್ಯಾಣ ಮಂಟಪ ನಿರ್ಮಾಣವಾಗಿದ್ದು, ಇಂದು ಲೋಕಾರ್ಪಣೆ ಮಾಡಲಾಗಿದೆ.
ಮುಂಜಾನೆಯಿಂದ ವಿವಿಧ ಪೂಜೆ, ಹೋಮ-ಹವನದ ಮೂಲಕ ಅದ್ದೂರಿಯಾಗಿ ಕಲ್ಯಾಣ ಮಂಟಪ (Wedding Hall) ಉದ್ಘಾಟಿಸಲಾಗಿದೆ. ಸಿದ್ದಗಂಗಾ ಮಠದ ಸಿದ್ದಲಿಂಗಸ್ವಾಮೀಜಿ (siddhalinga Swamiji) ಕಾರ್ಯಕ್ರಮದ ನೇತೃತ್ವವಹಿಸಿದ್ದರು. ಯಡಿಯೂರಪ್ಪ (Yadiyurappa) ಅಧ್ಯಕ್ಷತೆಯಲ್ಲಿ ಉದ್ಘಾಟನಾ ಕಾರ್ಯ ಸಾಂಗವಾಗಿ ನೇರವೇರಿದೆ. ಬಿಜೆಪಿ ಮುಖಂಡ ಬಿ.ವೈ. ವಿಜಯೇಂದ್ರ (Vijayendra), ಸಂಸದ ಬಿ.ವೈ. ರಾಘವೇಂದ್ರ (Raghavendra), ಸಚಿವ ಮಾಧುಸ್ವಾಮಿ (Madhuswamy), ಶಾಸಕ ಮಸಾಲೆ ಜಯರಾಮ್ (Masale Jayaram) ಸೇರಿದಂತೆ ಹಲವು ಬಿಜೆಪಿ ನಾಯಕರು ಪಾಲ್ಗೊಂಡಿದ್ದರು, ಅಲ್ಲದೆ ಯಡಿಯೂರಪ್ಪ ಕುಟುಂಬದ ಮಕ್ಕಳು, ಮೊಮ್ಮಕ್ಕಳು ಹಾಗೂ ಕುಟುಂಬದ ಸದಸ್ಯರು ಕಲ್ಯಾಣ ಮಂಟಪದ ಪೂಜೆಯಲ್ಲಿ ಭಾಗವಹಿಸಿದ್ದರು.
ಸಾಮೂಹಿಕ ಮದುವೆ: ಕಲ್ಯಾಣ ಮಂಟಪ ಉದ್ಘಾಟನೆಯಲ್ಲಿ ಸಾಮೂಹಿಕ ವಿವಾಹವನ್ನು (Mass Marriage)ಕೂಡ ನೆರವೇರಿಸಲಾಗಿದೆ. ಬಡವರಿಗೆ ಅನುಕೂಲವಾಗುವ ದೃಷ್ಟಿಯಿಂದ ಕಲ್ಯಾಣ ಮಂಟಪ ನಿರ್ಮಿಸಲಾಗಿದೆ. ಪಿಇಎಸ್ ಟ್ರಸ್ಟ್ ಮೂಲಕ ಕಲ್ಯಾಣ ಮಂಟಪ ನಿರ್ವಹಣೆ ನಡೆಯಲಿದೆ. ಕೈಗೆಟಕುವ ದರದಲ್ಲಿ ಕಲ್ಯಾಣ ಮಂಟಪ ಬಾಡಿಗೆ ಇರಲಿದ್ದು, ಯಾವುದೇ ವಾಣಿಜ್ಯ ದೃಷ್ಟಿಕೋನದಿಂದ ಮಂಗಳ ಭವನ ನಿರ್ಮಿಸಿಲ್ಲ ಎಂದು ವಿಜಯೇಂದ್ರ ತಿಳಿಸಿದ್ದಾರೆ.
ಶಿಕಾರಿಪುರ, ಶಿರಾಳಕೊಪ್ಪ ಅಭಿವೃದ್ಧಿಗೆ ಬಿಎಸ್‌ವೈ ಕೊಡುಗೆ ಅಪಾರ: ಸಂಸದ ರಾಘವೇಂದ್ರ
ಎಡೆಯೂರು ಸಿದ್ದಲಿಂಗೇಶ್ವರ (Siddalingeswara) ಮನೆ ದೇವರಾಗಿದ್ದು, ನಮ್ಮ ಕುಟುಂಬಸ್ಥರು ಅನೇಕ ಬಾರಿ ದೇವಾಲಯಕ್ಕೆ ಭೇಟಿ (Temple Visit)ನೀಡಿ ವಿವಿಧ ಪೂಜೆ ಸಲ್ಲಿಸುವುದು ಮಾಮೂಲಿಯಾಗಿದೆ. ಹಲವು ವರ್ಷಗಳ ಹಿಂದೆ ಕಲ್ಯಾಣ ಮಂಟಪ ನಿರ್ಮಾಣ ಮಾಡಬೇಕೆಂಬುದು ನಮ್ಮ ಕನಸಾಗಿದ್ದು, ಅದು ಈಗ ಈಡೇರಿದೆ.
ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ