ಬೆಂಗಳೂರು(ಜು.02): ದೇಶದಲ್ಲಿ ಕೋಮುಸಂಘರ್ಷದ ವಾತಾವರಣ ಹೆಚ್ಚಾಗುತ್ತಿರುವ ಹಿನ್ನಲ್ಲೇ ಇದೀಗ ರಾಜ್ಯದಲ್ಲಿ ಕೆಲ ಬೆಳವಣಿಗೆಗಳು ಆತಂಕ ತಂದಿದೆ. ಚಿಂತಕಿ ಡಾ. ಬಿ. ಟಿ.ಲಲಿತಾನಾಯಕ್‌ಗೆ ಕೂಲೆ ಬೆದರಿಕೆ ಪತ್ರ ಬಂದಿದೆ. ಈ ಪತ್ರದಲ್ಲಿ ಬಿಟಿ ಲಲಿತಾ ನಾಯಕ್ ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹೆಚ್‌ಡಿ ಕುಮಾರಸ್ವಾಮಿ ಹೆಸರನ್ನು ಉಲ್ಲೇಖಿಸಲಾಗಿದೆ.
ಲಲತಾನಾಯಕ್ ರವರ ಸಂಜಯನಗರ ನಿವಾಸದ ವಿಳಾಸಕ್ಕೆ ಪತ್ರ ಬರೆದಿರುವ ಕಿಡಿಗೇಡಿಗಳು, ನೀವು ನಿಜವಾದ ದೇಶ ದ್ರೋಹಿಗಳು ಎಂದಿದ್ದಾರೆ. ಪಠ್ಯದಲ್ಲಿ ದೇಶ ಪ್ರೇಮ,ದೇಶ ಭಕ್ತಿ,ದೇಶ ರಕ್ಷಣೆ ಪಾಠ ಸೇರಿಸಿದಕ್ಕೆ ನಿಮ್ಗೆಲ್ಲ ಭಯವಾಗುತ್ತಿದೆ. ಭಯೋತ್ಪಾದಕರು ,ನಕ್ಸಲೈಟ್ ಗಳು,ಮಾವವಾದಿಗಳು ,ದೇಶ ದ್ರೋಹಿ ಮುಸ್ಲಿಂಮರಿಗೆ ಬೆಂಬಲವಾಗಿ ನಿಂತಿದ್ದೀರಿ. ಪಿಎಫ್ ಐ ಕಾರ್ಯಕ್ರಮದಲ್ಲಿ ನಮ್ಮ ವೀರ ಸೈನಿಕರ ಬಗ್ಗೆ ಅಗೌರವವಾಗಿ ಮಾತನಾಡಿದ್ದೀರಿ. ನಿಮ್ಮನ್ನೆಲ್ಲಾ ದೇಶ ಬಿಟ್ಟು ಓಡಿಸಬೇಕು. ಇಷ್ಟೇ ಸಾಲದು ಗುಂಡಿಟ್ಟು ಸಾಯಿಸ ಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
'ನಾಡಿನ ಅಭಿವೃದ್ಧಿ ಮರೆತು ಮಸೀದಿಗಳಲ್ಲಿ ಶಿವಲಿಂಗ ಹುಡುಕಾಟ'
ಪತ್ರದಲ್ಲಿ ಜೈ ಶ್ರೀರಾಮ್, ಭಾರತ ಮಾತೆ, ಕರ್ನಾಟಕ ಮಾತೆ ಅಂತಾ ಬರೆದಿದ್ದಾರೆ. ಯಾರು ಮುಸ್ಲಿಂಮರ ಪರವಾಗಿ ಮಾತಾಡ್ತಾರೋ ಅಂತವರು ರಕ್ತ ಹೀರುವವರು ಎಂದು ಉಲ್ಲೇಖಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಬಿಕೆ ಹರಿಪ್ರಸಾದ್, ಮಾಜಿ ಸಿಎಂ ಕುಮಾರಸ್ವಾಮಿ ಜೊತೆಗೆ ನನ್ ಹೆಸರನ್ನೂ ಸೇರಿಸಿದ್ದಾರೆ ಎಂದು ಬಿಟಿ ಲಲಿತಾ ನಾಯಕ್ ಹೇಳಿದ್ದಾರೆ.
ಕೆಲ ಸಂಘಟನೆ ಬಗ್ಗೆ ಉಲ್ಲೇಖಿಸಿದ್ದಾರೆ. ನಡುವೆ ನನ್ನ ಹೆಸರು ಸೇರಿಸಿ ಕೊನೆಯದಾಗಿ ನಿಮ್ಮನ್ನ ಹೊರತುಪಡಿಸಿ ಎಂದೂ ಬರೆದಿದ್ದಾರೆ. ಈ ಪತ್ರದಲ್ಲಿ ಉದ್ದೇಶ ಪೂರ್ವಕವಾಗಿ ತಪ್ಪು ತಪ್ಪಾಗಿಯೂ ಬರೆದಿದ್ದಾರೆ. ತುಂಬಾ ತಿಳಿದುಕೊಂಡಿರುವವರೇ ಇದನ್ನ ಬರೆದಿದ್ದಾರೆ. ಒದಿದರೆ ಅರ್ಥವಾಗದ ರೀತಿಯಲ್ಲಿ ಪದಗಳ ಬಳಕೆ ಮಾಡಿದ್ದಾರೆ ಎಂದು ಲಲಿತಾ ನಾಯಕ್ ಹೇಳಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರದಿಂದ ಕಣಕ್ಕೆ; BT Lalitha Naik
ರಕ್ತದ ಸಂಖೇತ ಅನ್ನೋ ಹಾಗೆ ಕೆಂಪು ಇಂಕ್ ನಲ್ಲಿ ಪತ್ರ ಬರೆದಿದ್ದಾರೆ. ಈ ವರೆಗೆ ಮೂರು ಬಾರಿ ಪತ್ರ ಬಂದಿದೆ..ಈ ಬಗ್ಗೆ ಮುಂಚೆ ಠಾಣೆಗೆ ದೂರು ಕೊಟ್ಟಿದ್ದೇನೆ. ಪ್ರೊಟೆಕ್ಷನ್ ಕೊಟ್ಟು ಗನ್ ಮ್ಯಾನ್ ನನ್ನೂ ಕೊಟ್ಟಿದ್ದರು. ಪೊಲೀಸರು ದೂರು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನೂಪೂರ್ ಶರ್ಮಾ ವಿವಾದಿತ ಹೇಳಿಕೆ ವಿಚಾರವಾಗಿ ಒಬ್ರನ್ನ ಕೊಲ್ಲಲಾಗಿದೆ. ನೂಪುರ್ ಬಿಟ್ಟು ಇತರರನ್ನು ಕೊಲ್ಲಲಾಗುತ್ತಿದೆ ಎಂದು ಲಲಿತಾ ನಾಯಕ್ ಹೇಳಿದ್ದಾರೆ.