ವಿಶ್ವದ 2ನೇ ಅತ್ಯಂತ ಜನದಟ್ಟಣೆ ನಗರ ಬೆಂಗಳೂರಿಗೆ ಮತ್ತೊಂದು ಕುಖ್ಯಾತಿ, ದೆಹಲಿಯ ಮೀರಿಸಿದ ಉದ್ಯಾನನಗರಿ!

Published : Jan 13, 2024, 09:26 PM IST
ವಿಶ್ವದ 2ನೇ ಅತ್ಯಂತ ಜನದಟ್ಟಣೆ ನಗರ ಬೆಂಗಳೂರಿಗೆ ಮತ್ತೊಂದು ಕುಖ್ಯಾತಿ, ದೆಹಲಿಯ ಮೀರಿಸಿದ ಉದ್ಯಾನನಗರಿ!

ಸಾರಾಂಶ

ಈಗಾಗಲೇ ಟ್ರಾಫಿಕ್‌ ಸಂತೆಯಲ್ಲಿ ಸುಸ್ತಾಗಿ ಹೋಗಿರುವ ಬೆಂಗಳೂರು ಜನತೆಗೆ ಮತ್ತೊಂದು ಆಘಾತಕಾರಿ ಸುದ್ದಿ ಇದು. ದೇಶದಲ್ಲಿಯೇ ಗರಿಷ್ಠ ಖಾಸಗಿ ಕಾರ್‌ಗಳನ್ನು ಹೊಂದಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು, ರಾಷ್ಟ್ರ ರಾಜಧಾನಿ ದೆಹಲಿಯನ್ನು ಮೀರಿಸಿದೆ.

ಬೆಂಗಳೂರು (ಜ.13): ರಾಷ್ಟ್ರದಲ್ಲಿಯೇ ಗರಿಷ್ಠ ಖಾಸಗಿ ಕಾರ್‌ಗಳನ್ನು ಹೊಂದಿರುವ ನಗರವಾಗಿ ಬೆಂಗಳೂರು ಹೊರಹೊಮ್ಮಿದೆ. ಈಗಾಗಲೇ ಟ್ರಾಫಿಕ್‌ ಜಂಜಾಟದಲ್ಲಿ ನಲುಗಿರುವ ಬೆಂಗಳೂರು ಜನತೆಯ ಪಾಲಿಗೆ ಇದು ಮತ್ತೊಂದು ಕೆಟ್ಟ ಸುದ್ದಿ ಎನಿಸಿದೆ. ರಾಷ್ಟ್ರ ರಾಜಧಾನಿ ದೆಹಲಿ 20.7 ಲಕ್ಷ ಖಾಸಗಿ ಕಾರ್‌ಗಳನ್ನು ಹೊಂದಿದ್ದರೆ, ಬೆಂಗಳೂರಿನಲ್ಲಿ 23.1 ಲಕ್ಷ ಖಾಸಗಿ ಕಾರ್‌ಗಳಿವೆ. ದೆಹಲಿ ಈಗಾಗಲೇ ಹಳೆಯ ಕಾಲದ ಗುಜರಿ ವಾಹನಗಳನ್ನು ಡಿರಿಜಿಸ್ಟರ್‌ ಮಾಡುವ ನಿಟ್ಟನಲ್ಲಿ ಈಗಾಗಲೇ ನಿಯಮಗಳನ್ನು ಜಾರಿಗೆ ತಂದಿದೆ. ದೆಹಲಿ ಅಂಕಿಅಂಶಗಳ ಕೈಪಿಡಿ 2023ಯಲ್ಲಿ ಈ ಮಾಹಿತಿ ತಿಳಿಸಲಾಗಿದ್ದು, 2023ರ ಮಾರ್ಷ್‌ 31ರ ವೇಳೆಗೆ ಬೆಂಗಳೂರಿನಲ್ಲಿ 223.1 ಲಕ್ಷ ಖಾಸಗಿ ಕಾರ್‌ಗಳಿದ್ದರೆ, ದೆಹಲಿಯಲ್ಲಿ 20.1 ಲಕ್ಷ ಖಾಸಗಿ ಖಾರ್‌ಗಳಿವೆ. ಇನ್ನೊಂದೆಡೆ ದೆಹಲಿಯಲ್ಲಿ ಒಟ್ಟು 79.5 ಲಕ್ಷ ವಾಹಗಳು ರಿಜಿಸ್ಟರ್‌ ಆಗಿದೆ ಎಂದು ಮಾಹಿತಿ ತಿಳಿಸಿದೆ.

ಇತ್ತೀಚಿನ ವರ್ಷಗಳಲ್ಲಿ, ದೆಹಲಿಯ ಸಾರಿಗೆ ಇಲಾಖೆಯು ಹಳೆಯದಾದ ಮತ್ತು ಗುಜರಿಯಾದ ವಾಹನಗಳ ನೋಂದಣಿಯನ್ನು ರದ್ದುಗೊಳಿಸಲು ಮತ್ತು ಸ್ಕ್ರ್ಯಾಪ್ ಮಾಡಲು ಕ್ರಮಗಳನ್ನು ಕೈಗೊಂಡಿದೆ. 2021-22 ಮತ್ತು 2022-23 ವರ್ಷಗಳಲ್ಲಿಯೇ, ಸುಮಾರು 55 ಲಕ್ಷ ಕಾರುಗಳ ನೋಂದಣಿ ರದ್ದುಗೊಳಿಸಲಾಗಿದೆ, 1.4 ಲಕ್ಷ ಸ್ಕ್ರ್ಯಾಪ್ ಮಾಡಲಾಗಿದೆ ಮತ್ತು 6.2 ಲಕ್ಷಕ್ಕೂ ಹೆಚ್ಚು ಜನರು ಇತರ ರಾಜ್ಯಗಳಲ್ಲಿ ಮರು-ನೋಂದಣಿ ಮಾಡಲು ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆದಿದ್ದಾರೆ. 2018 ರಲ್ಲಿ ಜಾರಿಗೆ ಬಂದ ನಿಯಮದ ಪ್ರಕಾರ, ದೆಹಲಿಯಲ್ಲಿ ಕ್ರಮವಾಗಿ 10 ಮತ್ತು 15 ವರ್ಷಗಳಿಗಿಂತ ಹಳೆಯದಾದ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಮೇಲೆ ಸುಪ್ರೀಂ ಕೋರ್ಟ್ ನಿಷೇಧವನ್ನು ಅನುಸರಿಸಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

ಸಾಮಾನ್ಯವಾಗಿ ಭಾರತದ ಸಿಲಿಕಾನ್‌ ವ್ಯಾಲಿ ಎಂದೇ ಕರೆಸಿಕೊಳ್ಳುವ ಬೆಂಗಳೂರು ತನ್ನ ಟ್ರಾಫಿಕ್‌ ಕಾರಣಕ್ಕಾಗಿ ಜಗತ್ತಿನಲ್ಲಿಯೇ ಕುಖ್ಯಾತಿ ಪಡೆದುಕೊಂಡಿದೆ. ಕಳಪೆ ಮೂಲಸೌಕರ್ಯ ಹಾಗೂ ಸಾರ್ವಜನಿಕ ಸಾರಿಗೆಯ ವಿಚಾರವಾಗಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ಬೆಂಗಳೂರಿನ ಇಂದಿನ ಕೆಟ್ಟ ಟ್ರಾಫಿಕ್‌ ಸ್ಥಿತಿಗೆ ಕಾರಣವಾಗಿದೆ. ಇನ್ನು ಮಳೆ ಹಾಗೂ ಹಬ್ಬಗಳ ಸಂದರ್ಭದಲ್ಲಿ ಬೆಂಗಳೂರಿನ ಟ್ರಾಫಿಕ್‌ನಲ್ಲಿ ಪ್ರಯಾಣ ಮಾಡುವುದೇ ಕಷ್ಟ.  2022 ರಲ್ಲಿ ನಗರಗಳ ಜಾಗತಿಕ ಸಂಚಾರ ದಟ್ಟಣೆ ಶ್ರೇಯಾಂಕದಲ್ಲಿ ಬೆಂಗಳೂರು ಎರಡನೇ ಸ್ಥಾನವನ್ನು ಪಡೆದುಕೊಂಡಿದೆ, ಇದು ಸಮಸ್ಯೆಯ ತೀವ್ರತೆಯನ್ನು ಎತ್ತಿ ತೋರಿಸುತ್ತದೆ.

ಕಳೆದ ವರ್ಷ, ಬೆಂಗಳೂರು 2022 ರಲ್ಲಿ ಜಾಗತಿಕವಾಗಿ ಎರಡನೇ ಅತಿ ಹೆಚ್ಚು ದಟ್ಟಣೆಯ ನಗರ ಎನ್ನುವ ಕುಖ್ಯಾತಿಯನ್ನೂ ಪಡೆದಿದೆ. ಲಂಡನ್‌ ನಂತರದ ಸ್ಥಾನದಲ್ಲಿ ಬೆಂಗಳೂರು ನಗರವಿದೆ.  ಬೆಂಗಳೂರಿನ ನಗರ ಕೇಂದ್ರಗಳಲ್ಲಿರುವ ಪ್ರಯಾಣಿಕರು 10 ಕಿಮೀ ದೂರವನ್ನು ಕ್ರಮಿಸಲು ಸರಾಸರಿ 29 ನಿಮಿಷ ಮತ್ತು 10 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತಾರೆ.  ಸರಾಸರಿ ಅವರ ವೇಗ 18 ಕಿ.ಮೀ ಆಗಿದೆ. ಡಚ್ ಲೊಕೇಶನ್ ಟೆಕ್ನಾಲಜಿ ಸ್ಪೆಷಲಿಸ್ಟ್ ಟಾಮ್‌ಟಾಮ್ ಸಂಗ್ರಹಿಸಿದ ವರದಿಯು ಬೆಂಗಳೂರಿಗರ ದೈನಂದಿನ ಜೀವನದ ಮೇಲೆ ಟ್ರಾಫಿಕ್ ಪ್ರಭಾವವನ್ನು ದೊಡ್ಡ ಮಟ್ಟದಲ್ಲಿ ಬಹಿರಂಗಪಡಿಸಿದೆ.

ಬೆಂಗಳೂರಿನ ರಸ್ತೆಯಲ್ಲಿ ಫೆರಾರಿ ಸವಾರಿ, ಟ್ರಾಫಿಕ್‌ನಲ್ಲಿ ಸಿಲುಕಿರುವುದು ನೋಡಲು ನೋವಾಗುತ್ತೆ ಎಂದ ಫ್ಯಾನ್ಸ್!

2022ರಲ್ಲಿ ಬೆಂಗಳೂರಿಗರು ತಮ್ಮ ಜೀವನದ ಹೆಚ್ಚಿನ ಸಮಯವನ್ನು ಟ್ರಾಫಿಕ್‌ನಲ್ಲಿಯೇ ಕಳೆದಿದ್ದಾರೆ ಎನ್ನುವ ಮಾಹಿತಿ ಇದೆ. ಬೆಂಗಳೂರಿನಲ್ಲಿ 260 ಗಂಟೆಗಳನ್ನು (10 ದಿನಗಳಿಗೆ ಸಮನಾಗಿರುತ್ತದೆ) ಡ್ರೈವಿಂಗ್‌ಗೆ ಮೀಸಲಿಟ್ಟರೆ, 134 ಗಂಟೆಗಳ ದಟ್ಟಣೆ-ಸಂಬಂಧಿತ ವಿಳಂಬಗಳು ಕಾರಣವಾಗಿವೆ. ಅಂಕಿಅಂಶಗಳು ನಿವಾಸಿಗಳ ದೈನಂದಿನ ಜೀವನದ ಮೇಲೆ ಸಂಚಾರ ದಟ್ಟಣೆಯ ಆಳವಾದ ಪರಿಣಾಮವನ್ನು ಒತ್ತಿಹೇಳುತ್ತವೆ.

ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಕ್ಕಾಕೊಂಡಿದ್ದ ಗ್ರಾಹಕರಿಗೆ ರಸ್ತೆಯಲ್ಲೇ ಪಿಜ್ಜಾ ಡೆಲಿವರಿ ಮಾಡಿದ ಡೊಮಿನೋಸ್‌!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ