ಅಧಿಕಾರಿಗಳ ನಿರ್ಲಕ್ಷ್ಯ, ಯಾದಗಿರಿಯಲ್ಲಿ ನರೇಗಾ ಕೆಲಸಕ್ಕಾಗಿ ಮಹಿಳೆಯರ ಅಲೆದಾಟ

Published : Oct 19, 2023, 06:52 PM IST
ಅಧಿಕಾರಿಗಳ ನಿರ್ಲಕ್ಷ್ಯ, ಯಾದಗಿರಿಯಲ್ಲಿ ನರೇಗಾ ಕೆಲಸಕ್ಕಾಗಿ ಮಹಿಳೆಯರ ಅಲೆದಾಟ

ಸಾರಾಂಶ

ರಾಜ್ಯದಲ್ಲಿ ಕಂಡು ಕೇಳರಿಯದಷ್ಟು ಬರ ಪರಿಸ್ಥಿತಿ ಎದುರಾಗಿದೆ. ಮಳೆಯಿಲ್ಲದೇ ಬೆಳೆ ಒಣಗುತ್ತಿವೆ. ಇದರಿಂದ ರೈತಾಪಿ ವರ್ಗ ಸಂಪೂರ್ಣ ಕಂಗಲಾಗಿದ್ದು, ಜಮೀನುಗಳಲ್ಲಿ ಕೆಲಸವಿಲ್ಲದೇ ಗ್ರಾಮೀಣ ಭಾಗದ ಜನರು ಬದುಕಲು ಸಂಕಷ್ಟಪಡುವಂತಾಗಿದೆ. ಆದ್ರೆ ಸರ್ಕಾರದ ನರೇಗಾ ಕೆಲಸ ಮಾಡಿಯಾದ್ರು ಬದುಕು ನಡೆಸಬೇಕು ಅಂದ್ರೆ ಅಧಿಕಾರಿಗಳ  ನಿರ್ಲಕ್ಷ್ಯದಿಂದ ಕೆಲಸ ಇಲ್ಲದಂತಾಗಿದೆ. ಇದರಿಂದ ಕೆಲಸಕ್ಕಾಗಿ ಮಹಿಳಾ ಕಾರ್ಮಿಕರು ಅಲೆದಾಡುವಂತಾಗಿದೆ.

ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್ 

ಯಾದಗಿರಿ (ಅ.19): ರಾಜ್ಯದಲ್ಲಿ ಕಂಡು ಕೇಳರಿಯದಷ್ಟು ಬರ ಪರಿಸ್ಥಿತಿ ಎದುರಾಗಿದೆ. ಮಳೆಯಿಲ್ಲದೇ ಬೆಳೆ ಒಣಗುತ್ತಿವೆ. ಇದರಿಂದ ರೈತಾಪಿ ವರ್ಗ ಸಂಪೂರ್ಣ ಕಂಗಲಾಗಿದ್ದು, ಜಮೀನುಗಳಲ್ಲಿ ಕೆಲಸವಿಲ್ಲದೇ ಗ್ರಾಮೀಣ ಭಾಗದ ಜನರು ಬದುಕಲು ಸಂಕಷ್ಟಪಡುವಂತಾಗಿದೆ. ಆದ್ರೆ ಸರ್ಕಾರದ ನರೇಗಾ ಕೆಲಸ ಮಾಡಿಯಾದ್ರು ಬದುಕು ನಡೆಸಬೇಕು ಅಂದ್ರೆ ಅಧಿಕಾರಿಗಳ  ನಿರ್ಲಕ್ಷ್ಯದಿಂದ ಕೆಲಸ ಇಲ್ಲದಂತಾಗಿದೆ. ಇದರಿಂದ ಕೆಲಸಕ್ಕಾಗಿ ಮಹಿಳಾ ಕಾರ್ಮಿಕರು ಅಲೆದಾಡುವಂತಾಗಿದೆ.

ಯಾದಗಿರಿಯಲ್ಲಿ ನರೇಗಾ ಕೆಲಸಕ್ಕಾಗಿ ಮಹಿಳೆಯರ ಅಲೆದಾಟ..!

ಕೇಂದ್ರ ಹಾಗೂ ರಾಜ್ಯ ಸರ್ಕಾರ ಗ್ರಾಮೀಣ ಭಾಗದ ಜನರು ನಿರುದ್ಯೋಗದಿಂದ ಬಳಲಬಾರದೆಂದು ಕೋಟ್ಯಂತರ ರೂ. ಹಣವನ್ನು ಬಿಡುಗಡೆ ಮಾಡ್ತದೆ. ಅದರಲ್ಲೂ ಸರ್ಕಾರದ ರಾಷ್ಟ್ರೀಯ ಮಹಾತ್ಮ ಗಾಂಧಿ ನರೇಗಾ ಯೋಜನೆಯು ಗ್ರಾಮೀಣ ಬಾಗದ ಜನರ ಜೀವನಾಡಿ. ಆದ್ರೆ ಯಾದಗಿರಿ ಜಿಲ್ಲೆಯ ಯರಗೋಳ ಗ್ರಾಮದ ಜನರು ಈ ನರೇಗಾ ಕೆಲಸಕ್ಕಾಗಿ ನಿತ್ಯವೂ ಅಲೆದಾಡುವಂತಾಗಿದೆ. ದೇವರು ವರ ಕೊಟ್ರು ಪೂಜಾರಿ ವರ ಕೊಡಲಿಲ್ಲ ಎಂಬಂತಾಗಿದೆ ಮಹಿಳಾ ಕೂಲಿ ಕಾರ್ಮಿಕರ ಪರಿಸ್ಥಿತಿ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾರ್ಮಿಕರು ಕೈಯಲ್ಲಿ ಜಾಬ್ ಕಾರ್ಡ್ ಹಿಡಿದು ನಿತ್ಯವೂ ಅಲೆಯುವಂತಾಗಿದೆ.

ಕೃಷಿ ಸಖಿಯರು ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳು ಬಗ್ಗೆ ರೈತರಿಗೆ ಮಾಹಿತಿ ಒದಗಿಸಿ

ಯಾದಗಿರಿ ತಾಲೂಕಿನ ಯರಗೋಳ ಗ್ರಾಮದ ನೂರಾರು ಮಹಿಳಾ ಕಾರ್ಮಿಕರು ಕೂಲಿ ಕೆಲಸವನ್ನು ಬಯಸಿ ಅರ್ಜಿ ಸಲ್ಲಿಸಿದ್ರು, ಆದ್ರೆ ಆ ಸಮಯದೊಳಗೆ ಕಾರ್ಮಿಕರಿಗೆ ಕೆಲಸ ನೀಡುತ್ತಿಲ್ಲ. ಈಗಾಗಲೇ ಜಿಲ್ಲೆಯಲ್ಲಿ ಮಳೆಯಿಲ್ಲದೇ ಬೆಳೆ ಹಾನಿಯಾಗಿದ್ದು, ಒಂದು ಕಡೆ ಬದುಕು ಬರಿದಾಗಿದೆ. ಇನ್ನೊಂದು ಕಡೆ ನರೇಗಾ ಕೆಲಸ ಮಾಡಿಯಾದ್ರೂ ಬದುಕನ್ನು ನಡೆಸಬೇಕು ಅಂದ್ರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಲಸವಿಲ್ಲದೇ ಬದುಕಿಗೆ ಬರೆ ಬಿದ್ದಿದೆ. ಸರ್ಕಾರ ಯಾದಗಿರಿ ತಾಲೂಕನ್ನು ಬರಗಾಲ ಪೀಡಿತ ತಾಲೂಕು ಅಂತ ಘೋಷಣೆ ಮಾಡಿದ್ರೂ ಯಾವುದೇ ರೀತಿಯಲ್ಲಿ ಉಪಯೋಗ ಆಗ್ತಿಲ್ಲ. ಇನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಮೀಣ ಭಾಗದ ಜನರಿಗೆ ಕೂಲಿ ಕೆಲಸ ನೀಡಿ ನಿರುದ್ಯೋಗ ಸಮಸ್ಯೆಯನ್ನು ನಿವಾರಣೆ ಮಾಡಬೇಕು. ಆದ್ರೆ ಅಧಿಕಾರಿಗಳು ಇರುವ ಕೆಲಸವನ್ನು ಜನರಿಗೆ ನೀಡದೇ ಮಹಾನಗರಗಳಿಗೆ ವಲಸೆ ಹೋಗಲು ಕಾರಣರಾಗ್ತಿರುವುದು ದುರಂತವೇ ಸರಿ.

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಯರಗೋಳ ಮಹಿಳೆಯರ ಆಕ್ರೋಶ

ರಾಷ್ಟ್ರೀಯ ಮಹಾತ್ಮ ಗಾಂಧಿ ನರೇಗಾ ಯೋಜನೆಯಡೀ ಗ್ರಾಮೀಣ ಭಾಗದ ಜನರಿಗೆ ಒಂದು ಕುಟುಂಬಕ್ಕೆ ಒಂದು ಜಾಬ್ ಕಾರ್ಡ್ ಹೊಂದಿರ್ತಾರೆ. ಆ ಜಾಬ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ ಒಂದು ವರ್ಷದಲ್ಲಿ 100 ದಿನ ಕೆಲಸವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಒದಗಿಸಬೇಕು. ಕೂಲಿ ಕಾರ್ಮಿಕರಿಗೆ ಒಂದು ದಿನಕ್ಕೆ 316 ರೂಪಾಯಿ ಹಣವನ್ನು  ನೀಡಲಾಗುತ್ತದೆ. ಆದ್ರೆ ಯರಗೋಳ ಗ್ರಾಮದ ಮಹಿಳಾ ಕಾರ್ಮಿಕರಿಗೆ ಪಿಡಿಓ ಕಲ್ಯಾಣ ಕುಮಾರ್ ಅವರು ಸರಿಯಾಗಿ ಕೆಲಸ ನೀಡುತ್ತಿಲ್ಲ ಎಂಬ ಆರೋಪವಾಗಿದೆ. 

ಈ ಬಗ್ಗೆ ಕೂಲಿ ಕಾರ್ಮಿಕರು ಮೇಲಾಧಿಕಾರಿಗಳಿಗೆ ದೂರು ನೀಡಿದ ನಂತರ ಕೆಲ ದಿನಗಳ ಕಾಲ ಕೆಲಸ ನೀಡ್ತಾರಂತೆ, ಆಗ ಮತ್ತೆ ಕೆಲಸ ನೀಡದೇ ನಿರ್ಲಕ್ಷ್ಯ ವಹಿಸ್ತಾರೆ. ಇದರಿಂದ ಯರಗೋಳ ಗ್ರಾಮೀಣ ಮಹಿಳಾ ಕಾರ್ಮಿಕರು ತಾಲೂಕಾ ಪಂಚಾಯತ್ ಇಓ ಗಮನಕ್ಕೂ ಸಹ ಸಮಸ್ಯೆ ಬಗೆಹರಿದಿಲ್ಲ. ಈಗ ಯರಗೋಳ ಗ್ರಾಮದ ಮಹಿಳಾ ಕೂಲಿ ಕಾರ್ಮಿಕರು ಸಮರ್ಪಕ ಕೆಲಸ ನೀಡುವಂತೆ ಜಿಲ್ಲಾ ಪಂಚಾಯತ್ ಬಾಗಿಲು ತಟ್ಟಿದ್ದಾರೆ. ಮಳೆಯಿಲ್ಲದೇ ಕೆಲಸವಿಲ್ಲ.‌ ಕೆಲಸವಿದ್ರೂ ಕೆಲಸ ನೀಡದೇ ಅಧಿಕಾರಿಗಳು ನಮ್ಮ ಬದುಕಿಮ ಜೊತೆ ಆಟ ಆಡ್ತಿದ್ದಾರೆ. ನಮಗೆ ಕೆಲಸ ಕೊಡಿ, ಇಲ್ಲ ಜಿಲ್ಲಾ ಪಂಚಾಯತ್ ಬಳಿಯೇ ಇರ್ತಿವ, ಊಟ ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಮಿಕರಿಗೆ ಗುಡ್‌ನ್ಯೂಸ್‌: ಆಧಾರ್ ಪಾವತಿ ವ್ಯವಸ್ಥೆಗೆ ಗಡುವು ವಿಸ್ತರಣೆ

ಒಟ್ನಲ್ಲಿ ಸರ್ಕಾರ ಕೋಟ್ಯಂತರ ರೂಪಾಯಿಯನ್ನು ಈ ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ಸಮಸ್ಯೆಯ ನಿವಾರಣೆಗಾಗಿ ಮೀಸಲಿಟ್ಟಿದೆ. ಆದ್ರೆ ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಾದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜ‌ನರು ಪರದಾಡುವಂತಾಗಿದೆ. ಕೂಡಲೇ ಸಂಬಂಧಪಟ್ಟ ಮೇಲಾಧಿಕಾರಿಗಳು ಇದರ ಬಗ್ಗೆ ಕೂಡಲೇ ಗಮನಹರಿಸಿ ಗ್ರಾಮೀಣ ಭಾಗದ ಮಹಿಳೆಯರಿಗೆ ಕೆಲಸ ನೀಡುವಂತಾಗಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿದ್ದು ಸರ್ಕಾರದ ವಿರುದ್ಧ ಬಿಜೆಪಿ ಬೃಹತ್‌ ಪ್ರತಿಭಟನೆ
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ