ಬಿಬಿಎಂಪಿ, ಜಿಪಂ, ತಾಪಂ ಚುನಾವಣೆ: ಮಹಿಳೆಯರನ್ನ ಪಕ್ಷಕ್ಕೆ ಸೆಳೆಯಲು ಡಿಸಿಎಂ ಮಾಸ್ಟರ್ ಪ್ಲಾನ್!

By Ravi Janekal  |  First Published Jul 6, 2024, 3:34 PM IST

ಯಾವ ಮಹಿಳೆ ಅಧಿಕಾರದಲ್ಲಿಲ್ಲ, ಅಂತವರ ಅನುಭವ, ಆಚಾರ ವಿಚಾರದ ಬಗ್ಗೆ ಕೇಳಿದ್ದೇವೆ. ಪಕ್ಷ ಸಂಘಟನೆ ಹಾಗೂ ಸರ್ಕಾರದ ಬಗ್ಗೆ ಇರುವ ಅಭಿಪ್ರಾಯ ಏನು ಅನ್ನೋದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದೇವೆ. ಸಭೆಯಲ್ಲಿ ಸುಮಾರು 40 ಜನ ಹೆಣ್ಣುಮಕ್ಕಳು ತಮ್ಮ ಅನುಭವ ಹಂಚಿಕೊಂಡಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ ತಿಳಿಸಿದರು.


ಬೆಂಗಳೂರು (ಜು.6) ಯಾವ ಮಹಿಳೆ ಅಧಿಕಾರದಲ್ಲಿಲ್ಲ, ಅಂತವರ ಅನುಭವ, ಆಚಾರ ವಿಚಾರದ ಬಗ್ಗೆ ಕೇಳಿದ್ದೇವೆ. ಪಕ್ಷ ಸಂಘಟನೆ ಹಾಗೂ ಸರ್ಕಾರದ ಬಗ್ಗೆ ಇರುವ ಅಭಿಪ್ರಾಯ ಏನು ಅನ್ನೋದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದೇವೆ. ಸಭೆಯಲ್ಲಿ ಸುಮಾರು 40 ಜನ ಹೆಣ್ಣುಮಕ್ಕಳು ತಮ್ಮ ಅನುಭವ ಹಂಚಿಕೊಂಡಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ ತಿಳಿಸಿದರು.

ಬಿಬಿಎಂಪಿ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ ಚುನಾವಣೆ ಹಿನ್ನಲೆ ಕೆಪಿಸಿಸಿ ಕಚೇರಿಯಲ್ಲಿ ಕರೆದ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಎಲ್ಲರಿಗೂ ಸಮಾನತೆ ಇರಬೇಕು, ಮಹಿಳೆಯರಿಗೆ ಪ್ರಾತಿನಿಧ್ಯ ಕೊಡಬೇಕು ಎಂದು ಹೇಳಿದ್ದಾರೆ. ಸಭೆಗೆ ಪಂಚಾಯತ್‌ನಿಂದ ಪಾರ್ಲಿಮೆಂಟ್ ತನಕ ಕೆಲಸ ಮಾಡಿದವರು ಬಂದಿದ್ದಾರೆ. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಅನುಭವ ಇರುವ ನಾಯಕರಿದ್ದಾರೆ. ಅವರೆಲ್ಲರಿಗೂ ನಾವು ಆಹ್ವಾನಿಸಿದ್ದೆವು. ನೀವು ಮನೆಯಲ್ಲಿರಬೇಡಿ, ಹೊರಗೆ ಬಂದ ಪಕ್ಷ ಸಂಘಟನೆಗೆ ಸಹಕಾರ ಕೊಡಿ ಎಂದು ಹೇಳಿದ್ದೆವು. ರಾಜಕೀಯವಾಗಿ ಅವರ ನಾಯಕತ್ವ, ಅನುಭವ ಮುಂದೆ ಹೇಗೆ ಅವರಿಂದ ಸಂಘಟನೆ ಗೆ ಬಳಸಿಕೊಳ್ಳಬೇಕು ಅಂತ ಚರ್ಚೆ ಮಾಡಿದ್ದೇವೆ ಎಂದರು.

Latest Videos

undefined

ಡಿಕೆ ಶಿವಕುಮಾರಗೆ ಸಿಎಂ ಕುರ್ಚಿ ಹುಚ್ಚು ಹಿಡಿದಿದೆ: ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ವಾಗ್ದಾಳಿ

ನಾವು ರಾಜ್ಯದ ಜನರಿಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳೆಯರನ್ನು ಪಕ್ಷಕ್ಕೆ ಹೇಗೆ ಸೆಳೆಯಬೇಕು ಎಂಬುದರ ಬಗ್ಗೆ ಸಲಹೆ ಸೂಚನೆ ಪಡೆದಿದ್ದೇವೆ. ಹಳ್ಳಿ ಹಾಗೂ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಕುಟುಂಬ ಕಾರ್ಯಕ್ರಮದೊಳಗೆ ಹೆಣ್ಣುಮಕ್ಕಳನ್ನ ಹೇಗೆ ತೆಗೆದುಕೊಂಡು ಬರಬೇಕು ಅಂತಾ ಚರ್ಚಿಸಿದ್ದೇವೆ ಎಂದರು.

click me!