
ಬೆಂಗಳೂರು(ಜೂ.07): ಕನಕಗಿರಿ ಬಿಜೆಪಿ ಶಾಸಕ ಬಸವರಾಜ ದಡೇಸುಗೂರು ಅವರಿದ್ದ ಶಾಸಕರ ಭವನದ ಕೊಠಡಿಗೆ ದಿಢೀರ್ ಪ್ರವೇಶಿಸಿದ ಮಹಿಳೆಯೊಬ್ಬರು ಶಾಸಕರ ಜತೆ ವಾಗ್ವಾದ ನಡೆಸಿ ಕೆಲ ಕಾಲ ಹೈಡ್ರಾಮಾ ಸೃಷ್ಟಿಸಿರುವ ಘಟನೆ ಜರುಗಿದೆ.
ಶಾಸಕರ ಭವನದ 3ನೇ ಅಂತಸ್ತಿನ ಕೊಠಡಿಗೆ ಸಂಖ್ಯೆ 350ಕ್ಕೆ ಸೋಮವಾರ ಬೆಳಗ್ಗೆ ಬಂದಿದ್ದ ಮಹಿಳೆ, ಶಾಸಕರ ಜತೆ ಜಗಳ ಮಾಡಿದ್ದಾರೆ. ನಿಮ್ಮಿಂದ ನನಗೆ ಅನ್ಯಾಯವಾಗಿದೆ ಎಂದು ರಂಪಾಟ ಮಾಡಿದ್ದಾರೆ. ಈ ಮಹಿಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಎನ್ನಲಾಗಿದೆ. ಈಕೆಯ ವರ್ತನೆಯಿಂದ ಶಾಸಕರು ಮುಜುಗರ ಅನುಭವಿಸಿದರು. ಬಳಿಕ ಕೊಠಡಿಯಿಂದ ಹೊರ ನಡೆದರು ಎನ್ನಲಾಗಿದೆ.
ಕೊಪ್ಪಳ ಸಂಸದರ 10 ಲಕ್ಷ ಅನುದಾನ ವಾಪಸ್..!
ಇದಕ್ಕೂ ಮುನ್ನ ಶಾಸಕರ ಕೊಠಡಿಯಲ್ಲಿ ಮಹಿಳೆಯ ಕಿರುಚಾಟ ಜೋರಾದ್ದರಿಂದ ಶಾಸಕರ ಭವನ ಭದ್ರತೆಗೆ ನಿಯೋಜನೆಯಾಗಿದ್ದ ಪೊಲೀಸರು, ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಮಹಿಳೆಯನ್ನು ಸಮಾಧಾನಪಡಿಸಿ ಶಾಸಕರ ಭವನದಿಂದ ಹೊರಗೆ ಕಳುಹಿಸಿದರು. ಬಳಿಕ ಆ ಮಹಿಳೆ ನಾನು ಮುಖ್ಯಮಂತ್ರಿಗಳಿಗೆ ನನ್ನ ಅಳಲು ಹೇಳಿಕೊಳ್ಳುವುದಾಗಿ ನಡೆದುಕೊಂಡೇ ಶಾಸಕರ ಭವನದ ಆವರಣದಿಂದ ಹೊರ ಹೋದರು ಎನ್ನಲಾಗಿದೆ. ಇಂತಹ ಘಟನೆ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ವಿಧಾನಸೌಧ ಠಾಣೆ ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ