ಅಕ್ರಮ ಬಾಂಗ್ಲಾ ವಲಸಿಗರು ಮುಲಾಜಿಲ್ಲದೆ ಹೊರಕ್ಕೆ : ಡಿಸಿಎಂ| ಬೆಂಗಳೂರಿನಲ್ಲಿ 3 ಲಕ್ಷಕ್ಕೂ ಅಧಿಕ ಬಾಂಗ್ಲಾ ವಲಸಿಗರಿದ್ದಾರೆ| ಪೌರತ್ವ ಕಾಯ್ದೆಯಡಿ ಅವರ ದಾಖಲೆ ಪರಿಶೀಲಿಸಿ ಗಡೀಪಾರು
ಬೆಂಗಳೂರು[ಜ.12]: ರಾಜ್ಯದಲ್ಲಿ ಯಾವುದೇ ದಾಖಲಾತಿ ಇಲ್ಲದೇ ವಾಸಿಸುತ್ತಿರುವ ಅಕ್ರಮ ಬಾಂಗ್ಲಾ ವಲಸಿಗ ರನ್ನು ಮುಲಾಜಿಲ್ಲದೇ ದೇಶದಿಂದ ಹೊರಗೆ ಕಳುಹಿಸಲು ಅಗತ್ಯ ಕ್ರಮ ಕೈಗೊ ಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಅಶ್ವತ್ಥನಾರಾ ಯಣ ಅವರು ಹೇಳಿದರು
ಕರ್ನಾಟಕ ಚಿತ್ರಕಲಾ ಪರಿ ಷತ್ತಿನಲ್ಲಿ ಬಿಳೇಕಹಳ್ಳಿ ಜನಜಾಗೃತಿ ಸಾಮಾಜಿಕ ಕಲಾ ವೇದಿಕೆ ಕರ್ನಾಟಕದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿಗಾಗಿ ‘ಅಕ್ರಮವೋ? ಸಕ್ರಮವೋ’ ಶೀರ್ಷಿಕೆಯಡಿ ಆಯೋಜಿಸಿದ್ದ ರಾಜ್ಯದ ಅಕ್ರಮ ಹಾಗೂ ಸಕ್ರಮ ಬಾಂಗ್ಲಾ ವಲಸಿಗರ ಛಾಯಾಚಿತ್ರ ಪ್ರದರ್ಶನದಲ್ಲಿ ಅವರು ಮಾತನಾಡಿದರು.
ರಾಜಧಾನಿ ಬೆಂಗಳೂರಿನಲ್ಲಿ ಸುಮಾರು ಮೂರು ಲಕ್ಷಕ್ಕೂ ಅಧಿಕ ಬಾಂಗ್ಲಾ ವಲಸಿಗರಿದ್ದಾರೆ. ಪೌರತ್ವ ಕಾಯ್ದೆ ಜಾರಿಯಿಂದ ಈ ಅಕ್ರಮ ವಲಸಿಗರನ್ನು ಸುಲಭವಾಗಿ ಗುರುತಿಸಿ, ದಾಖಲಾತಿಯನ್ನು ಪರಿಶೀಲನೆ ನಡೆಸಿದ ನಂತರ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಯಾವುದೇ ದಾಖಲಾತಿ ಇಲ್ಲದವರನ್ನು ದೇಶದಿಂದ ಹೊರಗೆ ಕಳುಹಿಸಲಾಗುವುದು. ಈ ನಿಟ್ಟಿನಲ್ಲಿ ಬಾಂಗ್ಲಾ ಅಕ್ರಮ ವಲಸಿಗರನ್ನು ಶೀಘ್ರ ಪತ್ತೆ ಹಚ್ಚಿ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.
ಪೌರತ್ವದಿಂದ ಒಬ್ಬ ಮುಸ್ಲಿಂಗೆ ತೊಂದರೆಯಾದ್ರೂ ನಾನೇ ಹೊಣೆ: ಸಿಎಂ ಯಡಿಯೂರಪ್ಪ
ಪೌರತ್ವ ತಿದ್ದುಪಡೆ ಕಾಯ್ದೆ ಜಾರಿಯಿಂದ ಮೂಲ ಭಾರತೀಯರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಇದರ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ವಿರೋಧ ಪಕ್ಷಗಳು ವಿನಾಕಾರಣ ಜನರಲ್ಲಿ ಗೊಂದಲ ಸೃಷ್ಟಿಸುತ್ತಿವೆ. 2014ರ ಹಿಂದೆ ಭಾರತಕ್ಕೆ ಬಂದು ನೆಲೆ ಕಂಡುಕೊಂಡಿರುವ ಜನರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಇವರೆಲ್ಲ ಭಾರತೀಯರೇ ಎಂದು ತಿಳಿಸಿದರು.
ಕಲಾವಿದ ಸುಧೀರ್ ಶೆಟ್ಟಿ ಅವರು ತಮ್ಮ ಛಾಯಾಚಿತ್ರ ಪ್ರದರ್ಶನದಲ್ಲಿ ಅಕ್ರಮ ಬಾಂಗ್ಲಾ ವಾಸಿಗಳು ಎಲ್ಲೆಲ್ಲೆ ಯಾವ ರೀತಿಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ ಎಂಬ ಬಗ್ಗೆ ಸಂಪೂರ್ಣ ಚಿತ್ರಣ ನೀಡಿರುವುದು ಶ್ಲಾಘನೀಯ. ಸುಮಾರು 35ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರ ನೈಜ ಛಾಯಾಚಿತ್ರಗಳು ಅದ್ಭುತವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ ನಳಿನ್ ಕುಮಾರ್ ಕಟೀಲ್, ಮೇಯರ್ ಗೌತಮ್ ಕುಮಾರ್, ಅದಮ್ಯ ಚೇತನ ಅಧ್ಯಕ್ಷೆ ತೇಜಸ್ವಿನಿ ಅನಂತ ಕುಮಾರ್ ಸೇರಿದಂತೆ ಮತ್ತಿತರರಿದ್ದರು.