
ಬೆಂಗಳೂರು(ಏ.27): ಇಂದು ಸೋಮವಾರ ಪ್ರಧಾನಿ ಮೋದಿ ಜೊತೆ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. ಈ ವೇಳೆ ಬಹುತೇಕ ರಾಜ್ಯಗಳು ಲಾಕ್‌ಡೌನ್ ವಿಸ್ತರಣೆಗೆ ಒಲವು ತೋರಿಸಿದ್ದಾರೆ. ಕರ್ನಾಟಕದದಿಂದ ವಲಯವಾರು ವಿಸ್ತರಣೆ ಮಾಡಿ ಲಾಕ್‌ಡೌನ್ ಮುಂದುವರೆಸುವ ಮನವಿ ಮಾಡಲಾಗಿದೆ. ಅಲ್ಲದೇ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಿಎಂ ಯಡಿಯೂರಪ್ಪ ಪುನರುಚ್ಚರಿಸಿದ್ದಾರೆ.
ಹೌದು ದೇಶದಲ್ಲಿ ಮೇ. 3ಕ್ಕೆ ಎರಡನೇ ಹಂತದ ಲಾಕ್‌ಡೌನ್ ಅಂತ್ಯವಾಗಲಿದ್ದು, ಮುಂದೇನು? ಲಾಕ್‌ಡೌನ್ ವಿಸ್ತರಿಸೋದಾ ಅಥವಾ ಅಂತ್ಯ ಮಾಡೋದಾ? ಎಂಬ ಕುರಿತಾಗಿ ಪ್ರಧಾನಿ ಮೋದಿ ಎಲ್ಲಾ ರಾಜ್ಯದ ಸಿಎಂಗಳ ಜೊತೆ ಸಂವಾದ ನಡೆಸಿದ್ದಾರೆ. ಈಗಾಗಲೇ ದೆಹಲಿ ಸೇರಿ ಒಟ್ಟು ಆರು ರಾಜ್ಯಗಳು ಲಾಕ್‌ಡೌನ್ ವಿಸ್ತರಿಸಿದ್ದು, ಇನ್ನೂ ಐದು ರಾಜ್ಯಗಳು ಲಾಕ್‌ಡೌನ್ ಮುಂದುವರೆಸುವಂತೆ ಸೂಚಿಸಿವೆ. ಆದರೆ ಆರ್ಥಿಕ ಹೊಡೆತ ಅನುಭವಿಸುತ್ತಿರುವ ರಾಜ್ಯಗಳು ಕೊಂಚ ಸಡಿಲಿಕೆಯನ್ನೂ ಮಾಡುವಂತೆ ಕೋರಿವೆ. ಹೀಗಿರುವಾಗ ಗ್ರಾಮೀನ ಭಾಗ ಹಾಗೂ ಕೆಲ ಕ್ಷೇತ್ರಗಳಲ್ಲಿ ಲಕ್‌ಡೌನ್ ಸಡಿಲಿಸುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ಈ ವಾರಾಂತ್ಯದೊಳಗೆ ಪಿಎಂ ಮೋದಿ ದೇಶವನ್ನುದ್ದೇಶಿಸಿ ಭಾಷಣ ಮಾಡುವ ಮೂಲಕ ಸ್ಪಷ್ಟನ ನಿರ್ಧಾರ ತಿಳಿಸಲಿದ್ದಾರೆ.
ಲಾಕ್‌ಡೌನ್ ಮಧ್ಯೆಯೂ ಮದ್ಯ ಮಾರಾಟ: ಎರಡು ಬಾರ್ ಲೈಸನ್ಸ್ ರದ್ದು
ಸಿಎಂ ಯಡಿಯೂರಪ್ಪ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದಾರೆ. ಕರ್ನಾಟಕ ಸಿಎಂ ಬಿರೆಸ್‌ವೈ ಕೂಡಾ ವಲಯವಾರು ವಿಂಗಡನೆ ಮಾಡಿ ಗ್ರೀನ್ ಝೋನ್‌ನಲ್ಲಿ ಲಾಕ್‌ಡೌನ್ ಅಂತ್ಯ ಮಾಡುವ ಹಾಗೂ ಆರೆಂಜ್ ಹಾಗೂ ರೆಡ್ ಜೋನ್‌ನಲ್ಲಿ ಲಾಕ್ಡೌನ್ ಮುಂದುವರೆಸುವ ಾಭಿಪ್ರಾಯ ನೀಡಿದ್ದಾರೆ..
ಮದ್ಯಕ್ಕಿಲ್ಲ ಅವಕಾಶ
ಇನ್ನು ಈ ಸಭೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಕಿರಾಣಿ ಹಾಗೂ ತರಕಾರಿ ಮಾರಾಟಕ್ಕೆ ಅವಕಾಶ ಇದೆ. ಹೀಗಿರುವಾಗ ಮುಚ್ಚಿದ ಬಾಟಲ್‌ನಲ್ಲಿರುವ ಮದ್ಯ ಮಾರಾಟಕಕ್ಕೆ ಅವಕಾಸ ನೀಡಿ ಎಂದು ಪ್ರಧಾನಿ ಮೋದಿಯಲ್ಲಿ ಕೇಳಿದ್ದರು. ಆದರೆ ಈ ಸಂದರ್ಭದಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ಹಾಗೂ ಗುಜರಾತ್ ಸಿಎಂ ವಿಜಯ್ ರೂಪಾನಿ ಎರಡೂ ರಾಜ್ಯಗಳಲ್ಲಿ ಪಾನ ನಿಷೇಧ ಜಾರಿಯಲ್ಲಿದೆ, ಹೀಗಾಗಿ ಯಾವುದೇ ಕಾರಣಕ್ಕೂ ದೇಶದ ಇತರ ಭಾಗಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದೆಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಕರ್ನಾಟಕ ಕೂಡಾ ಈ ಅಭಿಪ್ರಾಯವನ್ನು ಬೆಂಬಲಿಸಿದ್ದು ಕರ್ನಾಟಕದಲ್ಲಿ ಮೇ. 15ರವರೆಗೆ ಮದ್ಯ ಮಾರಾಟಕ್ಕೆ ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕೊಡಗಿನ ಹೋಂಮೇಡ್ ವೈನ್‌ಗೆ ಹೆಚ್ಚಿದ ಡಿಮ್ಯಾಂಡ್..!
ಸಿಎಂ ಯಡಿಯೂರಪ್ಪನವರ ಈ ನಿರ್ಧಾರ ಎಣ್ಣೆ ಪ್ರಿಯರನ್ನು ನಿರಾಸೆಗೀಡು ಮಾಡಿದ್ದು, ಮೇ. 15ರವರೆಗೆ ಮದ್ಯದಂಗಡಿ ತೆರೆಯುವುದು ಅನುಮಾನವೇ ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ