
ಬೆಂಗಳೂರು(ಜು.04): ಈ ಹಿಂದೆ ಲಾಕ್‌ಡೌನ್ ಸಂದರ್ಭದಲ್ಲಿ ಆಗಿದ್ದ ಕ್ರಮಗಳು ಯಥಾ ಪ್ರಕಾರ ಜಾರಿಯಾಗಲಿವೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಹೇಳಿದ್ದಾರೆ.
ಇತ್ತೀಚೆಗೆ ಕೊರೋನಾ ಸೋಂಕಿನಿಂದ ಹುತಾತ್ಮರಾದ ಐವರು ಅಧಿಕಾರಿ-ಸಿಬ್ಬಂದಿಗೆ ಇನ್ಫೆಂಟ್ರಿ ರಸ್ತೆಯಲ್ಲಿರುವ ಆಯುಕ್ತರ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ಬಳಿಕ ಅವರು ಮಾತನಾಡಿದರು.
ಸೋಂಕಿತ ಕಡೂರು ಶಿಕ್ಷಕ ಶವಕ್ಕೆ ಬೀರೂರಲ್ಲಿ ಅಂತ್ಯಸಂಸ್ಕಾರ: ಆಕ್ರೋಶ
ಸಾರ್ವಜನಿಕರು ಅನಗತ್ಯವಾಗಿ ಯಾರು ಹೊರಗೆ ಬರಬೇಡಿ. ಅಗತ್ಯ ತುರ್ತು ಸೇವೆಗಳಿಗೆ ಮಾತ್ರ ಅವಕಾಶ ಇರಲಿದೆ. ಲಾಕ್‌ಡೌನ್‌ನನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು. ಇನ್ನು ಕೊರೋನಾದಿಂದಾಗಿ ನಗರದಲ್ಲಿ ಐವರು ಅಧಿಕಾರಿ-ಸಿಬ್ಬಂದಿಯನ್ನು ಕಳೆದುಕೊಂಡಿರುವುದು ಬಹಳ ದುಃಖದ ವಿಚಾರ ಎಂದರು.
5 ಕೊರೋನಾ ಕೇಸ್ ಬಂದಾಗ್ಲೇ ಎಚ್ಚೆತ್ತ ಜನ: ಗ್ರಾಮ ಸಂಪೂರ್ಣ ಲಾಕ್‌ಡೌನ್ ಮಾಡಿದ ಗ್ರಾಮಸ್ಥರು
ಹೆಚ್ಚುವರಿ ಪೊಲೀಸ್ ಆಯುಕ್ತರಾದ ಹೇಮಂತ್ ನಿಂಬಾಳ್ಕರ್, ಸೌಮೇಂದು ಮುಖರ್ಜಿ, ಎಸ್.ಮುರುಗನ್, ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಇತರೆ ಅಧಿಕಾರಿ-ಸಿಬ್ಬಂದಿ ಐದು ನಿಮಿಷ ಮೌನಾಚರಣೆ ಮೂಲಕ ಅಗಲಿದವರಿಗೆ ಗೌರವ ಸಲ್ಲಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ