
ಇದೀಗ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಬೆಳವಣಿಗೆ ರಾಜಕೀಯ ಪಡಸಾಲೆಯಲ್ಲಿ ಕೂತುಹಲ ಸೃಷ್ಟಿಸಿದೆ. ಸಿದ್ದರಾಮಯ್ಯನವರ ಹೇಳಿಕೆ ಈಗ ಮತ್ತೊಂದು ಲೆಕ್ಕಾಚಾರವನ್ನು ಸೃಷ್ಟಿಸಿದಂತಿದೆ. ಮಾಜಿ ಸಿಎಂ ಸಿದ್ದು-ಸಚಿವ ಸತೀಶ ರಜಾರಕಿಹೊಳಿ ಮಧ್ಯ ಮುನಿಸು ಸೃಷ್ಟಿಯಾಗಿತ್ತು ಎನ್ನುವುದು ಅದೇ ರಾಜಕೀಯ ಮೊಗಸಾಲೆ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಹರದಾಡಿತ್ತು ಎನ್ನುವ ಸಂಧರ್ಭದಲ್ಲಿ ಈ ಬೆಳವಣಿಗೆ ನಡೆದಿದೆ. ಹಾಗಾದರೆ, ಸಿದ್ದು ಹೇಳಿದ್ದೇನು? ನಿಜವಾಗಿಯೂ ಬಿಕೆಗೆ ಸಚಿವ ಸ್ಥಾನ ಸಿಗುತ್ತಾ ಎನ್ನುವುದನ್ನು ನೋಡೋಣ ಬನ್ನಿ!
ಬಿಕೆ ಹರಿಪ್ರಸಾದ್‌ಗೆ ಸಚಿವ ಸ್ಥಾನ ಸಿಗುತ್ತೆ, ಅವರು ಆ ಸ್ಥಾನಕ್ಕೆ ಎಲಿಜಿಬಲ್ ಎನ್ನುವ ಮಾತು ಈಗಾಗಲೇ ವಿಧಾನಸೌಧವನ್ನು ಸುತ್ತುವರೆದಿವೆ. ಅಲ್ಲದೇ ಅವರ ಬೆನ್ನಿಗೆ ಅಹಿಂದ್ ನಾಯಕ ಸಿದ್ದರಾಮಯ್ಯ ನಿಂತಿದ್ದಾರೆ ಎನ್ನುವುದನ್ನು ಕನ್ಫರ್ಮ್ ಆದಂತಿದೆ. ಈ ನಿಟ್ಟಿನಲ್ಲೇ ಸಿದ್ದು ಅವರಿಗೆ ಸಚಿವ ಸ್ಥಾನ ಕೊಡಿಸಲು ಆಸಕ್ತಿ ಅಷ್ಟೇ ಅಲ್ಲ, ತೀವ್ರ ಒಲವನ್ನು ತೋರಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲೇ ಈಗ ಬಿಕೆ ಹರಿಪ್ರಸಾದ್‌ಗೆ ಸಚಿವ ಸ್ಥಾನ ಸಿಗುತ್ತೆ ಎನ್ನುವ ಮಾತು ತೀವ್ರ ಚರ್ಚೆ ಹುಟ್ಟುಹಾಕಿದಂತಿದೆ.
ಹೌದು ಈ ಹಿಂದೆ ಸಚಿವ ಸ್ಥಾನದ ಜತೆ ಕೆಪಿಸಿಸಿ ಸ್ಥಾನದ ಬೇಡಿಕೆ ಇಟ್ಟಿದ್ದ ಸತೀಶಗೆ ಹೈ ಕಮಾಂಡ್ ಕಡ್ಡಿ ತುಂಡರಿಸಿದಂತೆ ಒಬ್ಬ ವ್ಯಕ್ತಿ ಒಂದು ಸ್ಥಾನ ಎಂದು ಅವರ ಬಾಯಿಗೆ ಬೀಗ ಹಾಕಿತ್ತು. ಆದರೀಗ ಬಿ.ಕೆ.ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಸ್ಥಾನದ ಜತೆ ಸಚಿವ ಸ್ಥಾನದಲ್ಲಿ ಮುಂದುವರೆಯಲು ಅರ್ಹ ಎಂದು ಹೇಳಿದ ಸಿದ್ದು ದಾಟಿಗೆ, ಸತೀಶ್ ಆಪ್ತರ ಮುಂದೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ಹಾಗೂ ಸತೀಶ ಜಾರಕಿಹೊಳಿ ನಡುವೆ ನಡೆದ ಮುನಿಸಾಗಿತ್ತಾ? ಎನ್ನುವ ಪ್ರಶ್ನೆಯ ನಡುವೆ ಈ ತರಹ ಬೆಳಣಿಗೆ ನಡೆದಿರುವುದು ನಿಜಕ್ಕೂ ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದೆ. ಅಲ್ಲದೇ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅವರು ಕಲಬುರ್ಗಿ ಪ್ರವಾಸ ರದ್ದುಗೊಳಿಸಿ ದೆಹಲಿಯಲ್ಲೇ ವಾಸ್ತವ್ಯ ಹೂಡಿದ್ದಾರೆ.
ಶನಿವಾರ ದಿಲ್ಲಿಗೆ ಪಯಣ!
ಇನ್ನೆರಡು ದಿನದಲ್ಲಿ ದಿಲ್ಲಿ ವರಿಷ್ಠರ ಜತೆ ಮಾತುಕತೆ ನಡೆಯಲಿದ್ದು, ಬಿಕೆ, ಡಿಕೆ ಸಿದ್ದು ದಿಲ್ಲಿಗೆ ಹೋಗಲಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಸಂಪುಟ ವಿಸ್ತರಣೆ ಬಹುತೇಕ ಫೈನಲ್ ಆಗುವ ಸಾಧ್ಯತೆ ಇದೆ. ಆದ್ದರಿಂದ ಈಗ ಬಿ.ಕೆ.ಹರಿಪ್ರಸಾದ್‌ಗೆ ಸಚಿವ ಸ್ಥಾನ ಸಿಗುತ್ತಾ? ಎನ್ನುವುದನ್ನು ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ