
ಬೆಳಗಾವಿ(ಅ.23): ಮಾಹಿತಿ ಕಣಜ ವಿಕಿಪೀಡಿಯಾ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ. ನಾಡಿನ ಹೆಮ್ಮೆಯ ವೀರ ರಾಣಿ ಕಿತ್ತೂರು ಚೆನ್ನಮ್ಮ ಜನ್ಮ ದಿನಾಂಕವನ್ನು ತಪ್ಪಾಗಿ ಮುದ್ರಿಸಿದೆ.
ಕಿತ್ತೂರು ಚನ್ನಮ್ಮ ಸಂಶೋಧಕರ ದಾಖಲೆಗಳ ಪ್ರಕಾರ ಚನ್ನಮ್ಮ ಜನಿಸಿದ್ದು 1778ರ ನವೆಂಬರ್ 14ರಂದು. ಆದರೆ ವಿಕಿಪೀಡಿಯಾದಲ್ಲಿ ಚೆನ್ನಮ್ಮ ಜನ್ಮ ದಿನಾಂಕವನ್ನು ಅಕ್ಟೊಬರ್ 23 ಅಂತಾ ಪ್ರಕಟಿಸಲಾಗಿದೆ.
ಕಿತ್ತೂರು ವಿಜಯೋತ್ಸವದ ದಿನವನ್ನು ರಾಣಿ ಚೆನ್ನಮ್ಮ ಜನ್ಮ ದಿನಾಚರಣೆ ಎಂದು ಸರ್ಕಾರದಿಂದ ಆಚರಣೆ ಮಾಡಲಾಗುತ್ತಿದ್ದು, 1824ರಲ್ಲಿ ಅಕ್ಟೋಬರ್ 23ರಂದು ಬ್ರಿಟಿಷ್ ಅಧಿಕಾರಿ ಥ್ಯಾಕರೆ ವಿರುದ್ಧ ಹೋರಾಡಿ ವಿಜಯ ಸಾಧಿಸಿದ ದಿನವನ್ನು ಕಿತ್ತೂರು ಉತ್ಸವ ಎಂದು ಆಚರಣೆ ಮಾಡಲಾಗುತ್ತಿದೆ.
ಈ ಕುರಿತು ಮಾಹಿತಿ ನೀಡಿರುವ ಕಿತ್ತೂರು ಚನ್ನಮ್ಮ ಇತಿಹಾಸ ಸಂಶೋಧಕ ಯು.ಆರ್. ಪಾಟೀಲ್, ಚೆನ್ನಮ್ಮ ಜನ್ಮ ದಿನಾಂಕವನ್ನು ವಿಕಿಪೀಡಿಯದಲ್ಲಿ ತಪ್ಪಾಗಿ ಪ್ರಕಟಿಸಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಈ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಪಾಟೀಲ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ