ಬೆಂಗಳೂರು ದಕ್ಷಿಣಕ್ಕೆ ಉತ್ತರಾಧಿಕಾರಿ ಯಾರು?

By Web DeskFirst Published 13, Nov 2018, 9:42 AM IST
Highlights

ಈಗ ಅನಂತ್ ​ಕು​ಮಾರ್‌ ಅಸ್ತಂಗ​ತ​ರಾ​ಗಿ​ದ್ದಾರೆ. ಬೆಂಗ​ಳೂರು ದಕ್ಷಿಣ ಲೋಕ​ಸಭಾ ಕ್ಷೇತ್ರಕ್ಕೆ ಸೀಮಿ​ತ​ವಾ​ದಂತೆ ಅವರ ಸ್ಥಾನ​ವನ್ನು ಯಾರು ತುಂಬ ಬೇಕು ಎಂಬ ಗೊಂದಲ ಬಿಜೆ​ಪಿ​ಯ​ಲ್ಲಿದೆ. ಅನಂತ್ ಕು​ಮಾರ್‌ ಪತ್ನಿ ತೇಜ​ಸ್ವಿನಿ ಅನಂತ್ ​ಕು​ಮಾರ್‌ ಅವರು ಬಿಜೆ​ಪಿಯ ಸಹಜ ಆಯ್ಕೆ. ಆದರೆ, ಚುನಾ​ವಣಾ ರಾಜ​ಕಾ​ರ​ಣಕ್ಕೆ ಇಳಿ​ಯಲು ತೇಜ​ಸ್ವಿನಿ ಅನಂತ್ ​ಕು​ಮಾರ್‌ ಅವ​ರಿಗೆ ಮನ​ಸ್ಸಿ​ದೆಯೇ ಎಂಬುದು ಇನ್ನು ಯಾರಿಗೂ ಗೊತ್ತಿಲ್ಲ.

ಬೆಂಗ​ಳೂರು[ನ.13]: ಬೆಂಗ​ಳೂರು ದಕ್ಷಿಣ ಲೋಕ​ಸಭಾ ಕ್ಷೇತ್ರ​ದಲ್ಲಿ 1996ರಿಂದ ಪ್ರಭಾ​ವಿ​ಯಾಗಿ ಬೇರೂ​ರಿದ ಅನಂತ್ ಕು​ಮಾರ್‌ ಅವ​ರ​ನ್ನು ಮಣಿ​ಸಲು ಕಾಂಗ್ರೆಸ್‌ ಮಾಜಿ ಮುಖ್ಯ​ಮಂತ್ರಿ ಗುಂಡೂ​ರಾವ್‌ ಅವರ ಪತ್ನಿ ವರ​ಲಕ್ಷ್ಮೀ ಗುಂಡೂ​ರಾವ್‌ ಅವರಿಂದ ಮೊದಲುಗೊಂಡು ಐಟಿ ದಿಗ್ಗಜ ನಂದನ್‌ ನಿಲೇ​ಕಣಿವರೆಗೂ ಹಲ​ವು ದಿಗ್ಗ​ಜರನ್ನು ಕಣ​ಕ್ಕಿ​ಳಿಸಿ ವಿಫಲ ಪ್ರಯತ್ನ ನಡೆ​ಸಿತ್ತು.

ಈಗ ಅನಂತ್ ಕು​ಮಾರ್‌ ಅಸ್ತಂಗ​ತ​ರಾ​ಗಿ​ದ್ದಾರೆ. ಬೆಂಗ​ಳೂರು ದಕ್ಷಿಣ ಲೋಕ​ಸಭಾ ಕ್ಷೇತ್ರಕ್ಕೆ ಸೀಮಿ​ತ​ವಾ​ದಂತೆ ಅವರ ಸ್ಥಾನ​ವನ್ನು ಯಾರು ತುಂಬ ಬೇಕು ಎಂಬ ಗೊಂದಲ ಬಿಜೆ​ಪಿ​ಯ​ಲ್ಲಿದೆ. ಅನಂತ್ ​ಕು​ಮಾರ್‌ ಪತ್ನಿ ತೇಜ​ಸ್ವಿನಿ ಅನಂತ್ ​ಕು​ಮಾರ್‌ ಅವರು ಬಿಜೆ​ಪಿಯ ಸಹಜ ಆಯ್ಕೆ. ಆದರೆ, ಚುನಾ​ವಣಾ ರಾಜ​ಕಾ​ರ​ಣಕ್ಕೆ ಇಳಿ​ಯಲು ತೇಜ​ಸ್ವಿನಿ ಅನಂತ್ ​ಕು​ಮಾರ್‌ ಅವ​ರಿಗೆ ಮನ​ಸ್ಸಿ​ದೆಯೇ ಎಂಬುದು ಇನ್ನು ಯಾರಿಗೂ ಗೊತ್ತಿಲ್ಲ. ಸಾಮಾ​ಜಿಕ ಕಾರ್ಯ​ಗ​ಳಲ್ಲಿ ಸಕ್ರಿ​ಯ​ರಾ​ಗಿದ್ದ ತೇಜ​ಸ್ವಿನಿ ರಾಜ​ಕಾ​ರ​ಣಕ್ಕೆ ಬರಲು ಇಚ್ಛಿ​ಸ​ದಿ​ದ್ದರೆ ಯಾರನ್ನು ಕಣಕ್ಕೆ ಇಳಿ​ಸ​ಬೇಕು ಎಂಬ ಚಿಂತನೆ ಬಿಜೆ​ಪಿ​ಯಲ್ಲಿ ಇನ್ನೂ ಆರಂಭ​ವಾ​ಗಿಯೇ ಇಲ್ಲ.

ಆದರೆ, ಕಾಂಗ್ರೆ​ಸ್‌ ಮಾತ್ರ ಈ ದಿಸೆ​ಯಲ್ಲಿ ಒಂದು ಹೆಜ್ಜೆ ಮುಂದಿ​ಟ್ಟಿದೆ. 2019ರ ಲೋಕ​ಸಭಾ ಚುನಾ​ವ​ಣೆಗೆ ಬೆಂಗ​ಳೂರು ದಕ್ಷಿ​ಣದಿಂದ ಮಾಜಿ ಸಚಿವ ಎಂ. ಕೃಷ್ಣಪ್ಪ ಅವರ ಪುತ್ರ ಪ್ರಿಯಕೃಷ್ಣ ಅವ​ರನ್ನು ಕಣಕ್ಕೆ ಇಳಿ​ಸ​ಬೇಕು ಎಂಬ ಚಿಂತನೆ ಈಗಾ​ಗಲೇ ಕಾಂಗ್ರೆಸ್‌ ಹೊಂದಿದೆ. ಪ್ರಿಯ ಕೃಷ್ಣ ಅವರ ತಂದೆ ಎಂ. ಕೃಷ್ಣಪ್ಪ ಅವರು 2004ರಲ್ಲಿ ಬೆಂಗ​ಳೂರು ದಕ್ಷಿ​ಣ ಕ್ಷೇತ್ರ​ದಿಂದ ಅನಂತ್ ಕು​ಮಾರ್‌ ಎದುರು ಸ್ಪರ್ಧಿಸಿ ಸೋಲುಂಡಿದ್ದರು.

ತಂದೆಯ ಸೋಲಿಗೆ ಸೇಡು ತೀರಿ​ಸಿ​ಕೊ​ಳ್ಳಲು ಪುತ್ರ ಪ್ರಿಯ​ಕೃಷ್ಣ ಸೂಕ್ತ ಎಂಬ ಕಾರ​ಣಕ್ಕೆ 2019ರಲ್ಲಿ ಅನಂತ್ ಕು​ಮಾರ್‌ ಎದುರು ಪ್ರಿಯ​ಕೃಷ್ಣ ಅವ​ರನ್ನು ಕಣ​ಕ್ಕಿ​ಳಿಸುವ ಚಿಂತನೆ ಕಾಂಗ್ರೆ​ಸ್‌​ನ​ಲ್ಲಿತ್ತು. ಇದಕ್ಕೆ ಮುಖ್ಯ ಕಾರಣ ಬೆಂಗ​ಳೂರು ದಕ್ಷಿಣ ಲೋಕ​ಸಭಾ ಕ್ಷೇತ್ರದಲ್ಲಿ ಬಹು​ದೊಡ್ಡ ಸಂಖ್ಯೆ​ಯಲ್ಲಿ ಒಕ್ಕ​ಲಿ​ಗ​ರಿ​ದ್ದಾರೆ. ಎಂ. ಕೃಷ್ಣಪ್ಪ ಅವರ ಕುಟುಂಬ ಜೆಡಿ​ಎ​ಸ್‌ ವರಿಷ್ಠ ಎಚ್‌.ಡಿ. ದೇವೇ​ಗೌಡ ಅವರ ಕುಟುಂಬ​ದೊಂದಿಗೆ ಉತ್ತಮ ಸಂಬಂಧ​ವನ್ನು ಹೊಂದಿದೆ ಮತ್ತು ಈ ಬಾರಿಯ ಲೋಕ​ಸಭಾ ಚುನಾ​ವ​ಣೆ​ಯಲ್ಲಿ ಜೆಡಿ​ಎಸ್‌ ಹಾಗೂ ಕಾಂಗ್ರೆಸ್‌ ಒಗ್ಗೂಡಿ ಚುನಾ​ವಣೆ ಎದು​ರಿ​ಸ​ಲಿ​ರುವುದು ಮುಖ್ಯ ಕಾರ​ಣ.

ಈ ಮೂರು ಅಂಶ​ಗಳು ಸೇರಿ ಅನಂತ್ ​ಕು​ಮಾರ್‌ ಅವ​ರಂತಹ ಪ್ರಬಲ ಸ್ಪರ್ಧೆ ನೀಡಲು ಪ್ರಿಯ​ಕೃ​ಷ್ಣಗೆ ಸಾಧ್ಯ​ವಾ​ಗು​ತ್ತದೆ ಎಂಬುದು ಕಾಂಗ್ರೆಸ್‌ ಚಿಂತನೆ. ಈಗಂತೂ ಅನಂತ​ಕು​ಮಾರ್‌ ಅಸ್ತಂಗ​ತ​ರಾ​ಗಿ​ದ್ದಾರೆ. ಬಿಜೆ​ಪಿಗೆ ಅನಂತ​ಕು​ಮಾರ್‌ ಅವ​ರಷ್ಟುಪ್ರಬಲ ಅಭ್ಯರ್ಥಿ ಈ ಕ್ಷೇತ್ರಕ್ಕೆ ದೊರೆ​ಯು​ವುದು ಕಷ್ಟ​ಸಾಧ್ಯ. ಹೀಗಾಗಿ ಕಾಂಗ್ರೆಸ್‌ ಹಾಗೂ ಜೆಡಿ​ಎಸ್‌ ಮೈತ್ರಿ​ಕೂ​ಟಕ್ಕೆ ಬೆಂಗ​ಳೂರು ದಕ್ಷಿಣ ಕ್ಷೇತ್ರ​ವನ್ನು ಈ ಬಾರಿ ಬಿಜೆ​ಪಿ​ಯಿಂದ ಕಸಿ​ದು​ಕೊ​ಳ್ಳುವ ವಿಶ್ವಾಸ ಮೂಡಿದೆ. ಇದಕ್ಕೆ ಬಿಜೆಪಿ ಯಾವ ಪ್ರತಿ​ತಂತ್ರ ಹೂಡು​ತ್ತದೆ ಎಂಬು​ದನ್ನು ಕಾದು ನೋಡ​ಬೇ​ಕು.

Last Updated 13, Nov 2018, 9:42 AM IST