ಪುತ್ತಿಲ ಕಚೇರಿ ಬಳಿ 'ತಲವಾರು' ಹಿಡಿದು ಸಂಘರ್ಷ: ವಾಟ್ಸಪ್ ಪೋಸ್ಟ್ ವಿವಾದ!

Published : Nov 10, 2023, 06:01 PM IST
ಪುತ್ತಿಲ ಕಚೇರಿ ಬಳಿ 'ತಲವಾರು' ಹಿಡಿದು ಸಂಘರ್ಷ: ವಾಟ್ಸಪ್ ಪೋಸ್ಟ್ ವಿವಾದ!

ಸಾರಾಂಶ

ಸಾಮಾಜಿಕ ತಾಣದಲ್ಲಿ ಹಾಕಿದ್ದ ಪೋಸ್ಟ್ ಗೆ ಸಂಬಂಧಿಸಿ ವಿವಾದ ತಾರಕಕ್ಕೇರಿದ ಪರಿಣಾಮ ಯುವಕರ ತಂಡವೊಂದು ಹಿಂದೂ ಮುಖಂಡ ಅರುಣ್ ಪುತ್ತಿಲ ಕಚೇರಿ ಬಳಿ ತಲವಾರು ಹಿಡಿದು ಆಗಮಿಸಿ ಆತಂಕ ಸೃಷ್ಟಿಸಿದ ಘಟನೆ ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಮುಕ್ರಂಪಾಡಿಯಲ್ಲಿ ನಡೆದಿದೆ.

ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು (ನ.10): ಸಾಮಾಜಿಕ ತಾಣದಲ್ಲಿ ಹಾಕಿದ್ದ ಪೋಸ್ಟ್ ಗೆ ಸಂಬಂಧಿಸಿ ವಿವಾದ ತಾರಕಕ್ಕೇರಿದ ಪರಿಣಾಮ ಯುವಕರ ತಂಡವೊಂದು ಹಿಂದೂ ಮುಖಂಡ ಅರುಣ್ ಪುತ್ತಿಲ ಕಚೇರಿ ಬಳಿ ತಲವಾರು ಹಿಡಿದು ಆಗಮಿಸಿ ಆತಂಕ ಸೃಷ್ಟಿಸಿದ ಘಟನೆ ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಮುಕ್ರಂಪಾಡಿಯಲ್ಲಿ ನಡೆದಿದೆ.

ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ(Arun kumar puthila) ಮುಕ್ರಂಪಾಡಿಯಲ್ಲಿ ಹೊಂದಿರುವ ಪುತ್ತಿಲ ಪರಿವಾರದ ಕಚೇರಿಯ ಮುಂಭಾಗದಲ್ಲಿ ಯುವಕನೋರ್ವ ನಾಲ್ವರು ಸಹಚರರೊಂದಿಗೆ ತಲವಾರು ಹಿಡಿದುಕೊಂಡು ಆಗಮಿಸಿ ಬೆದರಿಕೆ ಹಾಕಿದ್ದಾನೆ ಎಂದು ದೂರಲಾಗಿದೆ. ಈ ವೇಳೆ ಬೀಟ್ ನಲ್ಲಿದ್ದ ಪುತ್ತೂರು ನಗರ ಠಾಣಾ ಪೊಲೀಸರು ಆಗಮಿಸಿ ಯುವಕರನ್ನ ವಶಕ್ಕೆ ಪಡೆದಿದ್ದಾರೆ. ಅರುಣ್ ಪುತ್ತಿಲ ಬೆಂಬಲಿಗರಾದ ಮನೀಶ್ ಕುಲಾಲ್ ಬನ್ನೂರು ಎಂಬಾತನ ಗುರಿಯಾಗಿಟ್ಟು ಗೊಂಡು ದಿನೇಶ್ ಪಂಜಿಗ ಎಂಬಾತ ನಾಲ್ವರು ಯುವಕರೊಂದಿಗೆ ತಲವಾರು ಹಿಡಿದುಕೊಂಡು ಆಗಮಿಸಿದ್ದ ಎನ್ನಲಾಗಿದೆ. ಪುತ್ತಿಲ ಕಚೇರಿಯಲ್ಲಿ ಕೃಷ್ಣಪ್ರಸಾದ್ ಶೆಟ್ಟಿ ಮತ್ತಿತರರು ಇದ್ದು, ಮನೀಶ್ ಕುಲಾಲ್ ಕಚೇರಿಯಲ್ಲಿ ಇರಲಿಲ್ಲ. ಆದರೆ ಮಾಹಿತಿ ತಿಳಿದ ಮನೀಶ್ ಕುಲಾಲ್ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಯುವಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಾಟ್ಸಾಪ್ ಗ್ರೂಪ್‌ನಲ್ಲಿ ನಡೆದ ಚರ್ಚೆಯ ವಿಚಾರದಲ್ಲಿ ಈ ಕೃತ್ಯ ನಡೆದಿದೆ. ಆದರೆ ಹಾಡಹಗಲೇ ತಲವಾರು ಹಿಡಿದುಕೊಂಡು ಬಂದು ಗೊಂದಲ ಸೃಷ್ಟಿಸಿರೋದು ಆತಂಕಕ್ಕೆ ಕಾರಣವಾಗಿದೆ. 

ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಶೃಂಗೇರಿ; ಇಂದು 32 ಅಡಿ ಎತ್ತರದ ಶಂಕರಾಚಾರ್ಯ ಪ್ರತಿಮೆ ಅನಾವರಣ

ಪುತ್ತೂರಿನಲ್ಲಿ ಮತ್ತೆ ರೌಡಿಸಂ ಅಟ್ಟಹಾಸ ಮಿತಿ ಮೀರಿದೆ: ಅರುಣ್ ಪುತ್ತಿಲ

ಪುತ್ತೂರಿನ ಪುತ್ತಿಲ ಪರಿವಾರ ಕಚೇರಿಗೆ ತಲವಾರು ಹಿಡಿದು ನುಗ್ಗಿದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ನಗರ ಠಾಣೆಗೆ ಪುತ್ತಿಲ ಪರಿವಾರ ಮುಖಂಡ ಅರುಣ್ ಪುತ್ತಿಲ ಆಗಮಿಸಿ ಪೊಲೀಸ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅರುಣ್ ಪುತ್ತಿಲ, ಪುತ್ತೂರಿನಲ್ಲಿ ಮತ್ತೆ ರೌಡಿಸಂ ಅಟ್ಟಹಾಸ ಮಿತಿ ಮೀರಿದೆ. ಪುತ್ತಿಲ ಪರಿವಾರದ ಕಚೇರಿ ಬಳಿ ತಲವಾರು ಹಿಡಿದು ಬಂದಿದ್ದಾರೆ. ಕಾರ್ಯಕರ್ತರ ಹತ್ಯೆ ಮಾಡೋ ಯೋಚನೆಯಲ್ಲಿ ಸಮಾಜಕ್ಕೆ ತಪ್ಪು ಸಂದೇಶ ಕಳುಹಿಸಲಾಗಿದೆ.‌ 

ಹಿಂದುತ್ವದ ಒಗ್ಗಟ್ಟಿಗೆ ಶಕ್ತಿ ತುಂಬುವ ಕೆಲಸ ಆಗಬೇಕು: ಅರುಣ್ ಕುಮಾರ್ ಪುತ್ತಿಲ

ಅಮಾಯಕ ಕಾರ್ಯಕರ್ತರ ಹತ್ಯೆ ಮಾಡೋ ಮನಸ್ಥಿತಿಯವರ ಮೇಲೆ ಕ್ರಮ ಆಗಬೇಕು. ಇಂಥಹ ರೌಡಿಸಂ ಚಟುವಟಿಕೆಯನ್ನ ಪುತ್ತೂರಿನ ಜನತೆ ಬಯಸಲ್ಲ. ತನಿಖೆ ಬಳಿಕ ಯಾಕೆ ಮಾಡಿದ್ದಾರೆ ಅನ್ನೋದು ಗೊತ್ತಾಗಲಿದೆ. ನಾನು ಹೊರಗಿದ್ದೆ, ಸುಮಾರು ಹತ್ತು ಜನರ ತಂಡ ಬಂದಿದೆ. ಯಾವುದೇ ಬೆದರಿಕೆಗಳ ಬಗ್ಗೆ ಗೊತ್ತಿಲ್ಲ, ತನಿಖೆ ಆಗಲಿ. ಸಾಮಾಜಿಕ ತಾಣಗಳ ಸಂದೇಶಗಳಿಗೆ ತಲವಾರು, ಹತ್ಯೆ ಯೋಜನೆ ಸರಿಯಲ್ಲ. ಮಧ್ಯಾಹ್ನ 1.30ರ ಸುಮಾರಿಗೆ ಘಟನೆ ನಡೆದಿದೆ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ