ರಾಜಕೀಯ ವ್ಯಕ್ತಿಗಳ ಲೈಂಗಿಕ ಹಗರಣದ ಪ್ರಸಾರವನ್ನು ತಡೆಯುವ ಉದ್ದೇಶದಿಂದ ಹಾಕಲಾದ ಪ್ರಕರಣ ಇದು ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಮುಖ್ಯ ನ್ಯಾ| ಡಿ.ವೈ. ಚಂದ್ರಚೂಡ್ ಹಾಗೂ ನ್ಯಾ। ಜೆ.ಬಿ.ಪರ್ದಿವಾಲಾ ಅವರಿದ್ದ ಪೀಠ ಹೇಳಿತು ಹಾಗೂ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.
ನವದೆಹಲಿ(ಜು.13): ಕನ್ನಡದ ಪವರ್ ಟಿವಿ ಪ್ರಸಾರ ನಿರ್ಬಂಧಿಸಿದ್ದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿರುವ ಸುಪ್ರೀಂ ಕೋರ್ಟ್, ಪ್ರಕರಣವು ರಾಜಕೀಯ ಪ್ರತೀಕಾರದಿಂದ ಕೂಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ರಾಜಕೀಯ ವ್ಯಕ್ತಿಗಳ ಲೈಂಗಿಕ ಹಗರಣದ ಪ್ರಸಾರವನ್ನು ತಡೆಯುವ ಉದ್ದೇಶದಿಂದ ಹಾಕಲಾದ ಪ್ರಕರಣ ಇದು ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಮುಖ್ಯ ನ್ಯಾ| ಡಿ.ವೈ. ಚಂದ್ರಚೂಡ್ ಹಾಗೂ ನ್ಯಾ। ಜೆ.ಬಿ.ಪರ್ದಿವಾಲಾ ಅವರಿದ್ದ ಪೀಠ ಹೇಳಿತು ಹಾಗೂ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.
ಬಾಲ್ಯವಿವಾಹದಲ್ಲಿ ಕರ್ನಾಟಕ ನಂ.2: ಬೆಚ್ಚಿಬೀಳಿಸುವ ಅಂಕಿಅಂಶ..!
ನಿರ್ಬಂಧ ಪ್ರಶ್ನಿಸಿ ರಾಕೇಶ್ ಶೆಟ್ಟಿ ನೇತೃತ್ವದ ಪವರ್ ಟೀವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ ವಕೀಲ ತುಷಾರ್ ಮೆಹ್ರಾ, 'ಚಾನೆಲ್ ಮೂಲ ಲೈಸೆನ್ಸ್ ಬದಲು ಬೇರೆ ಲೈಸೆನ್ಸ್ ಮೂಲಕ ಆಕ್ರಮವಾಗಿ ನಡೆಯುತ್ತಿತ್ತು. ಇದು ಪ್ರಕರಣದ ಮೂಲ' ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, 'ಕೇಂದ್ರ ಸರ್ಕಾರವು ಚಾನೆಲ್ ಗೆ ನೋಟಿಸ್ ನೀಡಿ ತನ್ನ ಪ್ರಕ್ರಿಯೆ ಮುಂದುವರಿಸಬಹುದು. ಆದರೆ ಚಾನೆಲ್ ತನ್ನ ಪ್ರಸಾರವನ್ನು ಮುಂದುವರಿಸಲು ಅರ್ಹವಾಗಿದೆ' ಎಂದಿತು. ಲೈಸೆನ್ಸ್ ಇಲ್ಲದೇ ಚಾನೆಲ್ ನಡೆಯುತ್ತಿದೆ ಎಂದು ಆರೋಪಿಸಿ ಐಪಿಎಸ್ ಅಧಿಕಾರಿ ರವಿಕಾಂತೇಗೌಡ ಹಾಗೂ ಜೆಡಿಎಸ್ ನಾಯಕ ರಮೇಶ್ ಗೌಡ ಹೈಕೋರ್ಟ್ ಮೊರೆ ಹೋಗಿದ್ದರು.